ETV Bharat / sports

GT vs RR: ಗಿಲ್ -ಮಿಲ್ಲರ್ ಅಬ್ಬರ, ರಾಜಸ್ಥಾನಕ್ಕೆ 178 ರನ್​ಗಳ ಸ್ಪರ್ಧಾತ್ಮಕ ಗುರಿ​ - ETV Bharath Karnataka

ಗುಜರಾತ್​ನ ತವರು ಅಹಮದಾಬಾದ್​ನಲ್ಲಿ ಟಾಸ್​ ಗೆದ್ದ ರಾಜಸ್ಥಾನ ಫೀಲ್ಡಿಂಗ್​ ಆಯ್ದುಕೊಂಡಿತು.

ಷಅಸ್Gujarat Titans vs Rajasthan Royals Match Score update
Gujarat Titans vs Rajasthan Royals Match Score update
author img

By

Published : Apr 16, 2023, 7:19 PM IST

Updated : Apr 16, 2023, 9:29 PM IST

ಅಹಮದಾಬಾದ್​ (ಗುಜರಾತ್​): ಡೇವಿಡ್​ ಮಿಲ್ಲರ್​ ಮತ್ತು ಶುಭಮನ್​ ಗಿಲ್​ ಅವರ 40 ಪ್ಲಸ್​ ರನ್‌ಗಳ ಕೊಡುಗೆಯಿಂದ ಗುಜರಾತ್​ ಟೈಟಾನ್ಸ್​ ನಿಗದಿತ ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 177 ರನ್​ ಗಳಿಸಿತು. ರಾಜಸ್ಥಾನ ರಾಯಲ್ಸ್​ ವಿಕೆಟ್​ಗಳನ್ನು ಉರುಳಿಸಿದರೂ ರನ್ ರಭಸಕ್ಕೆ ನಿಯಂತ್ರಣ ಹೇರಲಾಗದೇ ಗೆಲುವಿಗಾಗಿ 178 ರನ್​​ ಗಳಿಸಬೇಕಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​ಗೆ ಆಗಮಿಸಿದ ಟೈಟಾನ್ಸ್​ ತಂಡವು ವೃದ್ಧಿಮಾನ್ ಸಹಾರನ್ನು ಬೇಗ ಕಳೆದುಕೊಂಡಿತು. ಮೊದಲ ಓವರ್​ನ ಮೂರನೇ ಎಸೆತದಲ್ಲಿ 4 ರನ್ ಗಳಿಸಿದ್ದ ಸಹಾ ಬೋಲ್ಟ್​ಗೆ ವಿಕೆಟ್​ ಕೊಟ್ಟರು. ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಾಯಿ ಸುದರ್ಶನ್​ 20 ರನ್​ ಗಳಿಸಿ ಜೊತೆಯಾಟ ಉತ್ತಮಗೊಳಿಸುತ್ತಿರುವಾಗ ರನೌಟ್​ಗೆ ಬಲಿಯಾದರು.

ನಂತರ ಬಂದ ನಾಯಕ ಹಾರ್ದಿಕ್​ ಪಾಂಡ್ಯ ಮತ್ತೋರ್ವ ಆರಂಭಿಕ ಶುಭಮನ್​ ಗಿಲ್​ ಜೊತೆ ಸೇರಿ ರನ್​ ಕಲೆ ಹಾಕಿದರು. ಈ ಜೋಡಿ 50 ರನ್​ಗಳ ಜೊತೆಯಾಟ ಮಾಡಿತು. 19 ಬಾಲ್​ನಲ್ಲಿ 1 ಸಿಕ್ಸ್​, ಮೂರು ಬೌಂಡರಿಯಿಂದ 28 ರನ್​ ಗಳಿಸಿ ಆಡುತ್ತಿದ್ದ ಹಾರ್ದಿಕ್​ ಚಹಾಲ್​ ಔಟಾದರು. ಗಿಲ್ (45)​ ತಮ್ಮ ಫಾರ್ಮ್ ಮುಂದುವರೆಸಿದರು. ಆದರೆ ಅರ್ಧಶತಕಕ್ಕೆ 5 ರನ್​ ಬಾಕಿ ಇರುವಂತೆ ವಿಕೆಟ್​ ಕೊಟ್ಟರು.

ನಂತರ ಬಂದ ಡೇವಿಡ್​ ಮಿಲ್ಲರ್​ ರನ್​ಗೆ ಮತ್ತಷ್ಟು ವೇಗ ಕೊಟ್ಟರು. ಅವರಿಗೆ ಅಭಿನವ್​ ಮನೋಹರ್​ ಸಹ ಸಾಥ್​ ನೀಡಿದರು. ಡೆತ್​ ಓವರ್​ಗಳಲ್ಲಿ ಈ ಜೋಡಿ ಬಿರುಸಿನ ಬ್ಯಾಟಿಂಗ್​ ಮಾಡಿತು. ಅಭಿನವ್​ 3 ಸಿಕ್ಸ್​ನಿಂದ 27 ರನ್​ ಗಳಿಸಿ ಔಟಾದರೆ ಡೇವಿಡ್​ ಮಿಲ್ಲರ್​ (46) ನಾಲ್ಕು ರನ್​ನಿಂದ ಅರ್ಧಶತಕದಿಂದ ವಂಚಿತರಾದರು.

ತಂಡಗಳು ಇಂತಿವೆ: ಗುಜರಾತ್​ ಟೈಟಾನ್ಸ್​: ವೃದ್ಧಿಮಾನ್ ಸಹಾ(ವಿಕೆಟ್​ ಕೀಪರ್​), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ

ರಾಜಸ್ಥಾನ ರಾಯಲ್ಸ್​: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​/ನಾಯಕ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್

ಇದನ್ನೂ ಓದಿ: ಮಹಿಳಾ​ ಪ್ರೀಮಿಯರ್​ ಲೀಗ್​ ಜರ್ಸಿಯಲ್ಲಿ ಮೈದಾನಕ್ಕಿಳಿದ ಮುಂಬೈ ಇಂಡಿಯನ್ಸ್‌

Last Updated : Apr 16, 2023, 9:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.