ಅಹಮದಾಬಾದ್: ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ನ 5 ಬಾರಿಯ ಚಾಂಪಿಯನ್ ಆಗಿರುವ ಸಂಗತಿ ಗೊತ್ತೇ ಇದೆ. ತಂಡ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ರಂತಹ ದೈತ್ಯ ಬ್ಯಾಟಿಂಗ್ ಪಡೆಯನ್ನೇ ಹೊಂದಿದೆ. ಆದರೆ, ತಂಡದ ಸಾಂಘಿಕ ಪ್ರದರ್ಶನ ಮಾತ್ರ ಗೌಣವಾಗಿದೆ. ಈ ಸೀಸನ್ನ ಮೊದಲೆರಡು ಪಂದ್ಯಗಳನ್ನು ಸೋತು ಟೀಕೆಗೆ ಗುರಿಯಾಗಿದ್ದ ತಂಡ, ಭರ್ಜರಿ ಕಮ್ಬ್ಯಾಕ್ ಮಾಡಿ ಮುಂದಿನ ಮೂರೂ ಮ್ಯಾಚ್ ಗೆದ್ದಿತ್ತು. ಇದೀಗ ಮತ್ತೆ ಸತತ 2 ಪಂದ್ಯದಲ್ಲಿ ಸೋತಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಎದುರಿನ ಸವಾಲಿನಲ್ಲಿ ಮುಂಬೈ ಇಂಡಿಯನ್ಸ್ ಮುಗ್ಗರಿಸಿದೆ. ಬ್ಯಾಟಿಂಗ್ ವೈಫಲ್ಯದಿಂದಾಗಿ 55 ರನ್ಗಳ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿ ಗುಜರಾತ್ ಟೈಟಾನ್ಸ್ ನೀಡಿದ 207 ರನ್ಗಳ ಸವಾಲಿಗೆ ಉತ್ತರವಾಗಿ ಮುಂಬೈ 152 ರನ್ ಮಾತ್ರ ಗಳಿಸಿ ಸೋಲು ಕಂಡಿತು.
-
For his cracking 42 off just 21 deliveries in the first innings, Abhinav Manohar receives the Player of the Match award 👏🏻👏🏻 @gujarat_titans complete a 55-run win over #MI 👌🏻👌🏻
— IndianPremierLeague (@IPL) April 25, 2023 " class="align-text-top noRightClick twitterSection" data="
Scorecard ▶️ https://t.co/PXDi4zeBoD#TATAIPL | #GTvMI pic.twitter.com/UqvluOyFVS
">For his cracking 42 off just 21 deliveries in the first innings, Abhinav Manohar receives the Player of the Match award 👏🏻👏🏻 @gujarat_titans complete a 55-run win over #MI 👌🏻👌🏻
— IndianPremierLeague (@IPL) April 25, 2023
Scorecard ▶️ https://t.co/PXDi4zeBoD#TATAIPL | #GTvMI pic.twitter.com/UqvluOyFVSFor his cracking 42 off just 21 deliveries in the first innings, Abhinav Manohar receives the Player of the Match award 👏🏻👏🏻 @gujarat_titans complete a 55-run win over #MI 👌🏻👌🏻
— IndianPremierLeague (@IPL) April 25, 2023
Scorecard ▶️ https://t.co/PXDi4zeBoD#TATAIPL | #GTvMI pic.twitter.com/UqvluOyFVS
ಫ್ಲಾಪ್ ಬ್ಯಾಟಿಂಗ್: ನೇಹಲ್ ವಧೇರಾ, ಕ್ಯಾಮರೂನ್ ಗ್ರೀನ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡ ಗುಜರಾತ್ ಬೌಲಿಂಗ್ ಎದುರಿಸಲಿಲ್ಲ. ನಾಯಕ ರೋಹಿತ್ ಶರ್ಮಾ 2, ಇಶಾನ್ ಕಿಶನ್ 13, ಕೆಲ ಪಂದ್ಯಗಳಲ್ಲಿ ಮಿಂಚು ಹರಿಸಿದ್ದ ತಿಲಕ್ ವರ್ಮಾ 2, ಟಿಮ್ ಡೇವಿಡ್ ಸೊನ್ನೆ ಸುತ್ತುವ ಮೂಲಕ ಶಸ್ತ್ರತ್ಯಾಗ ಮಾಡಿದರು. ಇದರಿಂದ ತಂಡ ರನ್ ಗಳಿಸಲು ಪರದಾಡಿತು. ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಲ್ರೌಂಡರ್ ಕ್ಯಾಮರೂನ್ ವೈಟ್ 33 ರನ್ ಗಳಿಸಿ ಮತ್ತೊಮ್ಮೆ ತಂಡಕ್ಕೆ ನೆರವಾದರು.
ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ನೇಹಲ್ ವಧೇರಾ ಉತ್ತಮವಾಗಿ ಬ್ಯಾಟ್ ಬೀಸಿದರು. ತಲಾ 3 ಬೌಂಡರಿ, ಸಿಕ್ಸರ್ ಸಮೇತ 40 ರನ್ ಮಾಡಿ ತಂಡದ ಗರಿಷ್ಠ ಸ್ಕೋರರ್ ಆದರು. ಬೌಲಿಂಗ್ನಲ್ಲಿ ಮಿಂಚಿದ್ದ ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ 18 ರನ್ ಗಳಿಸಿದರು. ಗುಜರಾತ್ ಕರಾರುವಾಕ್ ಬೌಲಿಂಗ್ ದಾಳಿಗೆ ನಲುಗಿದ ಮುಂಬೈ 9 ವಿಕೆಟ್ಗೆ 152 ರನ್ ಮಾತ್ರ ಗಳಿಸಿತು.
ಗುಜರಾತ್ ಪರವಾಗಿ ಮೊಹಮದ್ ಶಮಿ ಯಾವುದೇ ವಿಕೆಟ್ ಪಡೆಯದಿದ್ದರೂ, 4 ಓವರ್ ಬೌಲ್ ಮಾಡಿ 18 ರನ್ ಮಾತ್ರ ನೀಡಿದರು. ನೂರ್ ಅಹ್ಮದ್ 3 ವಿಕೆಟ್ ಪಡೆದರರೆ, ಸ್ಪಿನ್ನರ್ ರಶೀದ್ ಖಾನ್, ಮೋಹಿತ್ ಶರ್ಮಾ ತಲಾ 2 ವಿಕೆಟ್, ಹಾರ್ದಿಕ್ 1 ಕಿತ್ತು ಮುಂಬೈಯನ್ನು ಕಾಡಿದರು.
-
Back-to-back victories for @gujarat_titans 👏🏻👏🏻#GT complete a 55-run win over #MI to jump to number 2️⃣ on the Points Table 👌🏻👌🏻
— IndianPremierLeague (@IPL) April 25, 2023 " class="align-text-top noRightClick twitterSection" data="
Scorecard ▶️ https://t.co/PXDi4zeBoD#TATAIPL | #GTvMI pic.twitter.com/wUeFmsDNbo
">Back-to-back victories for @gujarat_titans 👏🏻👏🏻#GT complete a 55-run win over #MI to jump to number 2️⃣ on the Points Table 👌🏻👌🏻
— IndianPremierLeague (@IPL) April 25, 2023
Scorecard ▶️ https://t.co/PXDi4zeBoD#TATAIPL | #GTvMI pic.twitter.com/wUeFmsDNboBack-to-back victories for @gujarat_titans 👏🏻👏🏻#GT complete a 55-run win over #MI to jump to number 2️⃣ on the Points Table 👌🏻👌🏻
— IndianPremierLeague (@IPL) April 25, 2023
Scorecard ▶️ https://t.co/PXDi4zeBoD#TATAIPL | #GTvMI pic.twitter.com/wUeFmsDNbo
ಗಿಲ್ ಫಿಫ್ಟಿ, ಮಿಲ್ಲರ್ "ಮನೋಹರ" ಬ್ಯಾಟಿಂಗ್: ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಎಲ್ಲ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿತು. ಟಾಸ್ ಸೋತರೂ ಬ್ಯಾಟಿಂಗ್ ಇಳಿದ ತಂಡ ಆರಂಭಿಕ ಆಟಗಾರ ವೃದ್ಧಿಮಾನ್ ಸಹಾರನ್ನು(4) ಬೇಗನೇ ಕಳೆದುಕೊಂಡಿತು. ನಾಯಕ ಹಾರ್ದಿಕ್ ಪಾಂಡ್ಯ 13, ವಿಜಯ್ ಶಂಕರ್ 19 ರನ್ ಕೊಡುಗೆ ನೀಡಿದರು.
ಆರಂಭಿಕ ಶುಭಮನ್ ಗಿಲ್ ಭರ್ಜರಿ ಬ್ಯಾಟ್ ಮಾಡಿ ಅರ್ಧಶತಕ ಬಾರಿಸಿದರು. ಇದಕ್ಕೆ ಅವರು ತೆಗೆದುಕೊಂಡಿದ್ದು 34 ಎಸೆತ. 7 ಬೌಂಡರಿ, 1 ಸಿಕ್ಸರ್ ಇದರಲ್ಲಿವೆ. ಮಧ್ಯಮ ಕ್ರಮಾಂಕದಲ್ಲಿ ಸಿಡಿದ ಡೇವಿಡ್ ಮಿಲ್ಲರ್ ಮತ್ತು ಅಭಿನವ್ ಮನೋಹರ್ ಬ್ಯಾಟಿಂಗ್ ವೈಭವ ಮೆರೆದರು. ಕಿಲ್ಲರ್ ಮಿಲ್ಲರ್ 4 ಸಿಕ್ಸರ್, 3 ಬೌಂಡರಿಗಳಿಂದ 44 ರನ್ ಮಾಡಿದರೆ, ತಲಾ 3 ಸಿಕ್ಸರ್, ಬೌಂಡರಿಗಳಿಂದ ಮನೋಹರ್ 42 ರನ್ ಗಳಿಸಿದರು.
ಕೊನೆಯಲ್ಲಿ ರಾಹುಲ್ ತೆವಾಟಿಯಾ 5 ಬಾಲಲ್ಲಿ 20 ರನ್ ಚಚ್ಚಿ ರನ್ ಹೆಚ್ಚಿಸಿದರು. ತಂಡ ಕೊನೆಯ 4 ಓವರ್ಗಳಲ್ಲಿ 70 ರನ್ ಕೊಳ್ಳೆ ಹೊಡೆಯಿತು. ಮುಂಬೈ ಸ್ಪಿನ್ನರ್ ಚಾವ್ಲಾ 2 ವಿಕೆಟ್ ಗಳಿಸಿದರು. ಗೆಲುವಿನ ಮೂಲಕ ಗುಜರಾತ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟತು. ಮುಂಬೈ 7 ನೇ ಸ್ಥಾನದಲ್ಲಿ ಮುಂದುವರಿದಿದೆ.
ಓದಿ: ಸನ್ ರೈಸರ್ಸ್ ವಿರುದ್ಧ ನಿಧಾನಗತಿಯ ಬೌಲಿಂಗ್: ವಾರ್ನರ್ಗೆ 12 ಲಕ್ಷ ರೂ. ದಂಡ