ETV Bharat / sports

IPL 2023: ಅಲ್ಪ ರನ್​ ಗುರಿ ಮುಟ್ಟದ ಪಾಂಡ್ಯ ಬಳಗ: 5 ರನ್​ಗಳ ರೋಚಕ ಗೆಲುವು ದಾಖಲಿಸಿದ ಡೆಲ್ಲಿ

author img

By

Published : May 2, 2023, 7:19 PM IST

Updated : May 3, 2023, 12:25 AM IST

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ 130 ರನ್​ ಗಳಿಸಿತ್ತು. ಈ ಗುರಿಯನ್ನು ತಲುಪಲಾಗದೆ ಗುಜರಾತ್​ ಟೈಟಾನ್ಸ್​ ಕೇವಲ 125 ರನ್​ ಗಳಿಸಿ ಸೋಲೊಪ್ಪಿಕೊಂಡಿದೆ.

IPL 2023
IPL 2023

ಅಹಮದಾಬಾದ್​ (ಗುಜರಾತ್​): ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ದಾಖಲಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ತಂಡ​ 130 ರನ್​ ಗಳಿಸಿತ್ತು. ಈ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಗುಜರಾತ್​ ಟೈಟಾನ್ಸ್​ ಆರು ವಿಕೆಟ್​ ನಷ್ಟಕ್ಕೆ ಕೇವಲ 125 ರನ್​ ಗಳಿಸಿ, 5 ರನ್​ಗಳಿಂದ ಸೋಲು ಕಂಡಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್​ ನಾಯಕ ಹಾರ್ದಿಕ್‌ ಪಾಂಡ್ಯ ಬಾರಿಸಿದ ಅಜೇಯ 59 ರನ್‌ ಸಿಡಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. 131 ರನ್​ ಟಾರ್ಗೆಟ್​ ಪಡೆದಿದ್ದ ಹಾರ್ದಿಕ್ ಪಡೆ ಆಘಾತ ಎದುರಿಸಿತು. ವೃದ್ಧಿಮಾನ್ ಸಹಾ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರೆ, ಶುಭಮನ್​ ಗಿಲ್ ಕೇವಲ 6 ರನ್ ಗಳಿಸಿ ಪೆವಿಲಿಯನ್​ ಸೇರಿದರು.

ಮೂರನೇ ಕ್ರಮಾಂಕದಲ್ಲಿ ನಾಯಕ ಹಾರ್ದಿಕ್​ ಪಾಂಡ್ಯ ಕೊನೆಯವರೆಗೆ ಹೋರಾಟ ನಡೆಸಿದರು. ಇದರ ನಡುವೆ ವಿಜಯ್​ ಶಂಕರ್​ 6 ರನ್​, ಡೇವಿಡ್​ ಮಿಲ್ಲರ್​ ಶೂನ್ಯಕ್ಕೆ ಓಟಾದರು. ಬಳಿಕ ಬಂದ ಅಭಿನವ್ ಮನೋಹರ್​ ಮತ್ತು ​ ರಾಹುಲ್ ತೆವಾಟಿಯಾ ನಾಯಕ ಪಾಂಡ್ಯಗೆ ಉತ್ತಮ ಸಾಥ್​ ನೀಡಿದರು. ನಿಧಾನಗತಿ ಬ್ಯಾಟ್​ ಬೀಸುತ್ತಿದ್ದ ಅಭಿನವ್​ 33 ಎಸೆತ ಎದುರಿಸಿ ಒಂದು ಸಿಕ್ಸರ್​ನೊಂದಿಗೆ 26 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಆಗ ತಂಡ ಮೊತ್ತ 17.1 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 94 ರನ್​ ಆಗಿತ್ತು.​

ಈ ವೇಳೆ ಬಂದ ರಾಹುಲ್​ ತೆವಾಟಿಯಾ ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. ಆದರೆ, ಏಳು ಎಸೆತಗಳಲ್ಲಿ​ ಮೂರು ಸಿಕ್ಸರ್​ ಸಮೇತ 20 ರನ್​ ಗಳಿಸಿದ್ದ ಅವರು ಕೊನೆಯ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಮತ್ತೊಂದೆಡೆ, ನಾಯಕ ಪಾಂಡ್ಯಕ್ಕೆ ಸೂಕ್ತವಾದ ಸ್ಟ್ರೈಕ್​ ಸಿಗಲಿಲ್ಲ. ಇದರಿಂದ ಅಜೇಯವಾಗಿ ಉಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಡೆಲ್ಲಿ ಪರ ಖಲೀಲ್​ ಅಹ್ಮದ್​, ಇಶಾಂತ್ ಶರ್ಮಾ ತಲಾ ಎರಡು ವಿಕೆಟ್​ ಪಡೆದರೆ, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ ತಲಾ ಒಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಡೆಲ್ಲಿ ತಂಡ ಕೆಳ ಕ್ರಮಾಂಕದ ಬ್ಯಾಟರ್​ಗಳಾದ ಅಮನ್ ಹಕೀಮ್ ಖಾನ್, ಅಕ್ಷರ್​ ಪಟೇಲ್ ಮತ್ತು ರಿಪಾಲ್ ಪಟೇಲ್ ನೆರವಿನಿಂದ ಎಂಡು ವಿಕೆಟ್​ ನಷ್ಟಕ್ಕೆ 130 ರನ್​ ಗಳಿಸಿತ್ತು. ಒಣ ಪಿಚ್​ನಲ್ಲಿ ಬೃಹತ್​ ರನ್​ ಕಲೆಹಾಕುವ ಉದ್ದೇಶದಿಂದ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ ಡೇವಿಡ್​ ವಾರ್ನರ್​ ನಿರ್ಣಯವನ್ನು ಮೊಹಮ್ಮದ್ ಶಮಿ ಅಡಿಮೇಲು ಮಾಡಿದರು. ಫಿಲಿಪ್ ಸಾಲ್ಟ್ (0), ಪ್ರಿಯಂ ಗಾರ್ಗ್ (10), ರಿಲೀ ರೊಸೊವ್ (8) ಮತ್ತು ಮನೀಶ್ ಪಾಂಡೆ (1) ಅವರ ವಿಕೆಟ್ ಕಬಳಿಸಿದ​ ಶಮಿ ಆಘಾತ ನೀಡಿದರು. ನಾಯಕ ಡೇವಿಡ್ ವಾರ್ನರ್ ರನ್​ ಔಟ್​ಗೆ ಬಲಿಯಾಗಿದ್ದರು. ಇದರಿಂದ ಐದು ಓವರ್​ ಮುಕ್ತಾಯಕ್ಕೆ ಕೇವಲ 23 ರನ್​ಗೆ 5 ವಿಕೆಟ್​ ಕಳೆದುಕೊಂಡಿತ್ತು.

ನಂತರ ಬಂದ ಅಕ್ಷರ್​ ಪಟೇಲ್​ ಮತ್ತು ಅಮನ್ ಹಕೀಮ್ ಖಾನ್ ತಂಡಕ್ಕೆ ಆಸರೆಯಾದರು. ಈ ಜೋಡಿ 50 ರನ್​ನ ಜೊತೆಯಾಟ ನೀಡಿತು. ಅಕ್ಷರ್​ ಪಟೇಲ್​ 30 ಬಾಲ್​ನಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್​ ಸಮೇತ 27 ರನ್​ ಕಲೆಹಾಕಿ ಔಟಾದರು. ಅಕ್ಷರ್​ ನಂತರ ಬಂದ ರಿಪಾಲ್ ಪಟೇಲ್ ಅಮನ್ ಹಕೀಮ್​​​ಗೆ ಜೊತೆಯಾದರು. ಈ ಜೋಡಿಯೂ 50 ರನ್​ನ ಜೊತೆಯಾಟ ಮಾಡಿ ತಂಡವನ್ನು 120ರ ಗಡಿದ ದಾಟಿಸಿತು. ಕೊನೆಯಲ್ಲಿ ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ ತಂಡವನ್ನು ಆಲೌಟ್​ನಿಂದ ತಪ್ಪಿಸಿದ್ದರು. ಗುಜರಾತ್​ ಪರ ಶಮಿ ನಾಲ್ಕು, ಮೋಹಿತ್​ ಶರ್ಮಾ ಎರಡು, ರಶೀದ್ ಖಾನ್ ಒಂದು ವಿಕೆಟ್​ ಪಡೆದಿದ್ದರು.

ಇದನ್ನೂ ಓದಿ: IPLನಲ್ಲಿ ಇಂದು: ಅಗ್ರಸ್ಥಾದಲ್ಲಿರುವ ಗುಜರಾತ್ ಪರೀಕ್ಷೆಗೆ ಡೆಲ್ಲಿ ಉತ್ತರ ಏನು? ಸಂಭಾವ್ಯ ಪಟ್ಟಿ ಹೀಗಿದೆ..

Last Updated : May 3, 2023, 12:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.