ದುಬೈ : ರಾಯಲ್ ಚಾಲೆಂಜರ್ಸ್ ತಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಾಗಿದೆ. ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿದ್ದ ಆರ್ಸಿಬಿ ತಂಡದ ಪ್ರದರ್ಶನ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿ ನಿರಾಶೆ ಮೂಡಿಸಿದೆ.
ಹೀಗಾಗಿ, ಆರ್ಸಿಬಿ ಅಭಿಮಾನಿಗಳ ನಿರಾಶೆ ಮತ್ತೆ ಮುಂದುವರಿದಿದೆ. ಟೂರ್ನಿಯ ಆರಂಭದಿಂದಲೇ ಅಭಿಮಾನಿಗಳು ತಂಡಕ್ಕೆ ಬೆಂಬಲ ನೀಡುತ್ತಾ ಬಂದಿದ್ದು, ನಿನ್ನೆಯ ಸೋಲಿಗೆ ಕೆಲ ಅಭಿಮಾನಿಗಳು ಕೆಟ್ಟ ರೀತಿಯ ಪೋಸ್ಟ್ ಜೊತೆ ಟ್ರೋಲ್ ಮಾಡಿದ್ದಾರೆ.
ಆರ್ಸಿಬಿಯ ಹೊಡಿಬಡಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಸೇರಿ ಇಡೀ ತಂಡದ ವಿರುದ್ಧ ಕಮೆಂಟ್, ಪೋಸ್ಟ್ ಮಾಡಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಮ್ಯಾಕ್ಸ್ವೆಲ್ ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದಾರೆ. ಆರ್ಸಿಬಿ ಸೋತ ಬೆನ್ನಲ್ಲೆ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪೋಸ್ಟ್ ಹಾಕಿದ್ದಾರೆ. ಹೀಗಾಗಿ, ಮ್ಯಾಕ್ಸಿ ಅವರೆಲ್ಲರಿಗೂ ಖಾರವಾಗಿಯೇ ಉತ್ತರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಬಾರಿಯ ಐಪಿಎಲ್ ಟೂರ್ನಿ ಅತ್ಯುತ್ತಮವಾಗಿತ್ತು. ದುರಾದೃಷ್ಟವಶಾತ್ ನಮಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ನಾವು ಅಂತಿಮ ಹಂತದಲ್ಲಿ ಎಡವಿದೆವು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ಕಸಗಳು ಸಂಪೂರ್ಣ ಅಸಹ್ಯಕರವಾಗಿದೆ.
ನಾವು ಕೂಡ ಮನುಷ್ಯರು, ಪ್ರತಿದಿನ ದಿನ ನಮ್ಮ ಕೈಲಾದಷ್ಟು ಉತ್ತಮ ಪ್ರಯತ್ನವನ್ನೇ ನೀಡಿದ್ದೇವೆ. ಕೆಟ್ಟದನ್ನು ಹರಡುವ ಬದಲು ಉತ್ತಮ ವ್ಯಕ್ತಿಯಾಗಿರಲು ಪ್ರಯತ್ನಿಸಿ ಎಂದಿದ್ದಾರೆ.
- — Glenn Maxwell (@Gmaxi_32) October 11, 2021 " class="align-text-top noRightClick twitterSection" data="
— Glenn Maxwell (@Gmaxi_32) October 11, 2021
">— Glenn Maxwell (@Gmaxi_32) October 11, 2021
ಇದಿಷ್ಟೇ ಅಲ್ಲ, ಆರ್ಸಿಬಿಯನ್ನೂ ಕಳೆದ ಎಲ್ಲಾ ಟೂರ್ನಿಯಲ್ಲಿ ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣವನ್ನು ಕೆಟ್ಟದಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಅವರಂತೆ ನೀವು ಮಾಡಬೇಡಿ ಎಂದು ಇತರೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
- — Glenn Maxwell (@Gmaxi_32) October 11, 2021 " class="align-text-top noRightClick twitterSection" data="
— Glenn Maxwell (@Gmaxi_32) October 11, 2021
">— Glenn Maxwell (@Gmaxi_32) October 11, 2021
ನನ್ನ ಸಹ ಆಟಗಾರ/ಸ್ನೇಹಿತರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದರೆ, ನಿಮ್ಮನ್ನು ಎಲ್ಲರೂ ಬ್ಲಾಕ್ ಮಾಡುತ್ತಾರೆ. ಕೆಟ್ಟ ವ್ಯಕ್ತಿಯಾಗಿರುವುದರ ಅರ್ಥವೇನು? ಅವರಿಗೆ ಎಂದಿಗೂ ಕ್ಷಮೆಯಿಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಪಡೆಗೆ ಧನ್ಯವಾದ ಅರ್ಪಿಸಿದ ಆರ್ಸಿಬಿ ಮ್ಯಾನೇಜ್ಮೆಂಟ್