ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡ್ತಿದ್ದು, ಇದು ಭಾರತೀಯ ಕ್ರಿಕೆಟ್ ಮಂಡಳಿಗೂ ಕೂಡ ತಲೆನೋವಾಗಿ ಪರಿಣಮಿಸಿದೆ. ಇದೇ ವರ್ಷ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಈ ಇಬ್ಬರು ಪ್ಲೇಯರ್ಸ್ ಬ್ಯಾಟ್ನಿಂದ ರನ್ ಸಿಡಿಯುವುದು ಅತಿ ಅವಶ್ಯವಾಗಿದೆ. ಈ ಇಬ್ಬರ ಪ್ಲೇಯರ್ಗಳ ಫಾರ್ಮ್ ವಿಚಾರವಾಗಿ ಗಂಗೂಲಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಗಂಗೂಲಿ, ಅವರಿಬ್ಬರೂ ಶ್ರೇಷ್ಠ ಆಟಗಾರರು. ಆದಷ್ಟು ಬೇಗ ಫಾರ್ಮ್ಗೆ ಮರಳುತ್ತಾರೆಂಬ ವಿಶ್ವಾಸ ನನಗಿದೆ ಎಂದು ಬಿಸಿಸಿಐ ಬಾಸ್ ಹೇಳಿದ್ದಾರೆ. ಶೀಘ್ರದಲ್ಲೇ ಅವರ ಬ್ಯಾಟ್ನಿಂದ ಉತ್ತಮ ರನ್ ಹರಿದು ಬರಲಿದ್ದು, ವಿರಾಟ್ ಅವರ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಇಬ್ಬರು ಪ್ಲೇಯರ್ಸ್ ಫಾರ್ಮ್ಗೆ ಮರಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕುಲದೀಪ್, ಮುಸ್ತಫಿಝುರ್,ವಾರ್ನರ್ ಅಬ್ಬರ: ಡೆಲ್ಲಿಗೆ ಕೋಲ್ಕತಾ ವಿರುದ್ಧ ನಾಲ್ಕು ವಿಕೆಟ್ ಜಯ
ಐಪಿಎಲ್ನಲ್ಲಿ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ 9 ಪಂದ್ಯಗಳಿಂದ 16ರ ಸರಾಸರಿಯಲ್ಲಿ ಕೇವಲ 128 ರನ್ಗಳಿಕೆ ಮಾಡಿದ್ರೆ, ಮುಂಬೈ ಕ್ಯಾಪ್ಟನ್ ರೋಹಿತ್ ಆರಂಭದ 8 ಪಂದ್ಯಗಳಿಂದ 153 ರನ್ಗಳಿಸಿದ್ದಾರೆ. ಇಬ್ಬರು ಬ್ಯಾಟ್ನಿಂದ ಈವರೆಗೆ ಒಂದೇ ಒಂದು ಅರ್ಧಶತಕ ಸಿಡಿದಿಲ್ಲ. ಐಪಿಎಲ್ ಪಂದ್ಯಗಳನ್ನ ತುಂಬಾ ಹತ್ತಿರದಿಂದ ನಾನು ವೀಕ್ಷಿಸುತ್ತಿದ್ದು, ಹೊಸ ಫ್ರಾಂಚೈಸಿಗಳ ಪ್ರದರ್ಶನದಿಂದ ತುಂಬಾ ಪ್ರಭಾವಿತನಾಗಿದ್ದಾನೆ. ಗುಜರಾತ್ ಟೈಟನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಉತ್ತಮವಾಗಿ ಪ್ರದರ್ಶನ ನೀಡ್ತಿವೆ ಎಂದಿದ್ದಾರೆ.