ಕೋಲ್ಕತ್ತಾ : ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ನಿನ್ನೆಯ ಪಂದ್ಯದಲ್ಲಿ ಅತ್ಯಂತ ವೇಗದ ಅರ್ಧಶತಕ ಪೂರೈಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ದಾಖಲೆ ಬರೆದರು. ಜೈಸ್ವಾಲ್ ಅವರ ಬಿರುಸಿನ ಆಟದ ನೆರವಿನಿಂದ ಕೇವಲ 13.1 ಓವರ್ಗಳಲ್ಲೇ ರಾಯಲ್ಸ್ ಗೆಲುವಿನ ದಡ ಸೇರಿತು. ಅಂಕಪಟ್ಟಿಯಲ್ಲೂ ಮೂರನೇ ಸ್ಥಾನಕ್ಕೇರಿತು. ಡೇರಿಂಗ್ ಆ್ಯಂಡ್ ಡ್ಯಾಷಿಂಗ್ ಆಟಗಾರನ ಅಬ್ಬರದ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜರು ಬೆರಗಾಗಿದ್ದಾರೆ.
-
Fastest FIFTY in the IPL
— IndianPremierLeague (@IPL) May 11, 2023 " class="align-text-top noRightClick twitterSection" data="
Yashasvi Jaiswal brings up his half-century in just 13 deliveries 👏👏#TATAIPL #KKRvRR pic.twitter.com/KXGhtAP2iy
">Fastest FIFTY in the IPL
— IndianPremierLeague (@IPL) May 11, 2023
Yashasvi Jaiswal brings up his half-century in just 13 deliveries 👏👏#TATAIPL #KKRvRR pic.twitter.com/KXGhtAP2iyFastest FIFTY in the IPL
— IndianPremierLeague (@IPL) May 11, 2023
Yashasvi Jaiswal brings up his half-century in just 13 deliveries 👏👏#TATAIPL #KKRvRR pic.twitter.com/KXGhtAP2iy
ವೀರೇಂದ್ರ ಸೆಹ್ವಾಗ್: ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್‌ನಲ್ಲಿ, "ಈ ಹುಡುಗ ವಿಶೇಷವಾಗಿದ್ದಾನೆ. ಸ್ಟ್ರೈಕಿಂಗ್ (ಬ್ಯಾಟಿಂಗ್) ಅನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದಾನೆ" ಎಂದು ಹೇಳಿದ್ದಾರೆ.
-
This kid is special. Thoroughly enjoyed his clean striking. #YashasviJaiswal pic.twitter.com/x5H67eLSHe
— Virender Sehwag (@virendersehwag) May 11, 2023 " class="align-text-top noRightClick twitterSection" data="
">This kid is special. Thoroughly enjoyed his clean striking. #YashasviJaiswal pic.twitter.com/x5H67eLSHe
— Virender Sehwag (@virendersehwag) May 11, 2023This kid is special. Thoroughly enjoyed his clean striking. #YashasviJaiswal pic.twitter.com/x5H67eLSHe
— Virender Sehwag (@virendersehwag) May 11, 2023
ಬ್ರೆಟ್ ಲೀ: ಮಾಜಿ ದಿಗ್ಗಜ ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಯುವ ಬ್ಯಾಟರ್ ಟ್ಯಾಗ್ ಮಾಡಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೈಸ್ವಾಲ್ರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಲಸಿತ್ ಮಾಲಿಂಗ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಲಸಿತ್ ಮಾಲಿಂಗ ಅವರು ಶೀಘ್ರದಲ್ಲೇ ಭಾರತದ ಪರ ಆಡಲಿರುವ ಯುವ ಬ್ಯಾಟರ್ ಅನ್ನು ನೋಡಲಿದ್ದೇವೆ ಎಂದು ಹಾರೈಸಿದ್ದಾರೆ. "ಯಶಸ್ವಿ ಜೈಸ್ವಾಲ್ ನನ್ನ ನೆಚ್ಚಿನ ಭಾರತೀಯ ಯುವ ಬ್ಯಾಟರ್. ಶೀಘ್ರದಲ್ಲೇ ನಿಮ್ಮನ್ನು ಬ್ಲೂ ಜೆರ್ಸಿಯಲ್ಲಿ ನೋಡಲು ಎದುರು ನೋಡುತ್ತಿದ್ದೇನೆ" ಎಂದು ಪೇಸ್ ಲೆಜೆಂಡ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಸುರೇಶ್ ರೈನಾ: ಭಾರತದ ಮಾಜಿ ಆಟಗಾರ ಸುರೇಶ್ ರೈನಾ, ಯುವಕನ ಕಠಿಣ ಪರಿಶ್ರಮ ಅವನನ್ನು ಬಹುದೂರ ಕೊಂಡೊಯ್ಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. "ವೇಗದ ಫಿಫ್ಟಿಗೆ ಅಭಿನಂದನೆಗಳು. ನಿಮ್ಮ ಕಠಿಣ ಪರಿಶ್ರಮ ಫಲ ನೀಡಿದೆ. ನಿಮ್ಮ ಅಸಾಧಾರಣ ಕೌಶಲ್ಯಗಳು ನಿಮ್ಮನ್ನು ಬಹಳ ದೂರ ಕೊಂಡೊಯ್ಯಲಿವೆ. ಅದನ್ನು ಮುಂದುವರಿಸಿ" ಎಂದು ಪ್ರೋತ್ಸಾಹಿಸಿದ್ದಾರೆ.
ಸೂರ್ಯ ಕುಮಾರ್ ಯಾದವ್: "ಸ್ಪೆಷಲ್ ನಾಕ್, ಸ್ಪೆಷಲ್ ಪ್ಲೇಯರ್" ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಯೂಸುಫ್ ಪಠಾಣ್: ಭಾರತದ ಮಾಜಿ ಕ್ರಿಕೆಟರ್ ಯೂಸುಫ್ ಪಠಾಣ್, "ಕೇವಲ 13 ಎಸೆತಗಳಲ್ಲಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ. ಜೈಸ್ವಾಲ್ ಈ ಬಾರಿ ನಂಬಲಾಗದ ಋತುವನ್ನು ಹೊಂದಿದ್ದಾರೆ" ಎಂದು ಪಠಾಣ್ ಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ: ಸದಾ ಯುವ ಆಟಗಾರರನ್ನು ಬೆಂಬಲಿಸುವ ಭಾರತದ ಸ್ಟಾರ್ ಬ್ಯಾಟರ್, ರನ್ ಮಷಿನ್ ವಿರಾಟ್ ಕೊಹ್ಲಿ ಇನ್ಸ್ಟಾ ಖಾತೆಯ ಸ್ಟೋರಿಯಲ್ಲಿ ಜೈಸ್ವಾಲ್ ಫೋಟೊದೊಂದಿಗೆ, "ವಾವ್ ನಾನು ನೋಡಿದ ಅತ್ಯುತ್ತಮ ಬ್ಯಾಟಿಂಗ್ ಇದು. ಎಂತಹ ಪ್ರತಿಭೆ! ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ: 13 ಬೌಂಡರಿ, 5 ಸಿಕ್ಸರ್ ಸಿಡಿಸಿದ ಜೈಸ್ವಾಲ್; 4 ವಿಕೆಟ್ ಕಿತ್ತ ಚಹಾಲ್- ಕೆಕೆಆರ್ ವಿರುದ್ಧ ದಾಖಲೆಯ ಆಟ