ಹೈದರಾಬಾದ್: ಕಳೆದ ಎರಡು ಆವೃತ್ತಿಯಲ್ಲೂ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ಗೆ ಇಲ್ಲಿಯವರೆಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ, ಕೆಲ ಕ್ರಿಕೆಟ್ ಅಭಿಮಾನಿಗಳು ಆತನಿಗೂ ಒಂದು ಚಾನ್ಸ್ ನೀಡುವಂತೆ ಮನವಿ ಮಾಡಲು ಶುರು ಮಾಡಿದ್ದಾರೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಅರ್ಜುನ್ ತೆಂಡೂಲ್ಕರ್ಗೆ ಲಖನೌ ತಂಡದ ವಿರುದ್ಧದ ಪಂದ್ಯದಲ್ಲಿ ಅವಕಾಶ ನೀಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ತಂಡದಲ್ಲಿ ಕೆಲವೊಂದು ಬದಲಾವಣೆ ಹೊರತಾಗಿ ಕೂಡ ಅವರಿಗೆ ಚಾನ್ಸ್ ಸಿಕ್ಕಿರಲಿಲ್ಲ. ಹೀಗಾಗಿ, ಮುಂದಿನ ಪಂದ್ಯಕ್ಕಾದ್ರೂ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಗ್ತಿದೆ.
ಇದನ್ನೂ ಓದಿ: ಸನ್ ರೈಸರ್ಸ್ಗೆ ಏಟಿನ ಮೇಲೆ ಏಟು.. ಮತ್ತೆ ಸ್ಟಾರ್ ಆಲ್ರೌಂಡರ್ ತಂಡದಿಂದ ಹೊರಕ್ಕೆ
ನೆಟ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಅತ್ಯದ್ಭುತ ಯಾರ್ಕರ್ ಎಸೆಯುವ ಮೂಲಕ ಇಶಾನ್ ಕಿಶನ್ ಅವರನ್ನ ಕ್ಲೀನ್ ಬೌಲ್ಡ್ ಮಾಡಿದ್ದ ಅರ್ಜುನ್ ಅನೇಕರ ಗಮನ ಸೆಳೆದಿದ್ದರು. ಆದರೂ ಕೂಡ ಇವರಿಗೆ ಅವಕಾಶ ಮಾತ್ರ ಸಿಕ್ಕಿಲ್ಲ. ಕಳೆದ ವರ್ಷ ಕೂಡ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಜೂನಿಯರ್ ತೆಂಡೂಲ್ಕರ್ಗೆ ಯಾವುದೇ ಪಂದ್ಯದಲ್ಲೂ ಅವಕಾಶ ಸಿಕ್ಕಿರಲಿಲ್ಲ. ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಆ ಪಂದ್ಯದಲ್ಲಿ ಅವಕಾಶ ಸಿಗುವುದೇ ಎಂಬುದನ್ನ ಕಾಯ್ದು ನೋಡಬೇಕಾಗಿದೆ.
ಇನ್ನು ದೇಶಿಯ ಮಟ್ಟದಲ್ಲಿ ಕೇವಲ ಎರಡು ಟಿ20 ಪಂದ್ಯಗಳನ್ನಾಡಿರುವ ಅರ್ಜುನ್ ತೆಂಡೂಲ್ಕರ್ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.