ETV Bharat / sports

ಟಿ20 ಕ್ರಿಕೆಟ್‌ನಲ್ಲಿ 300 ಸಿಕ್ಸರ್‌! ರೋಚಕ ಪಂದ್ಯ ಸೋತು ಮನಗೆದ್ದ RCB ನಾಯಕ ಡು ಪ್ಲೆಸಿಸ್

ಬೆಂಗಳೂರಿನಲ್ಲಿ ಸೋಮವಾರ ಲಖನೌ ವಿರುದ್ಧ ಆರ್​ಸಿಬಿ ಸೋಲು ಕಂಡಿತು. ನಾಯಕ ಫಾಫ್ ಡು ಪ್ಲೆಸಿಸ್ 300ನೇ ಸಿಕ್ಸರ್‌ ಸಿಡಿಸಿ ಹೊಸ ದಾಖಲೆ ಬರೆದರು.

Faf Du Plessis completes 300 sixes in T20 cricket
ಟಿ20 ಕ್ರಿಕೆಟ್‌ನಲ್ಲಿ 300 ಸಿಕ್ಸರ್‌ ಪೂರೈಸಿದ ಆರ್​ಸಿಬಿ ನಾಯಕ ಡು ಪ್ಲೆಸಿಸ್
author img

By

Published : Apr 11, 2023, 3:39 PM IST

ಬೆಂಗಳೂರು: ದಕ್ಷಿಣ ಆಫ್ರಿಕಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಟಿ20 ಮಾದರಿ ಕ್ರಿಕೆಟ್‌ನಲ್ಲಿ 300 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್ ಬಾರಿಸುವ ಮೂಲಕ 38 ವರ್ಷದ ಈ ಕ್ರಿಕೆಟರ್ ಹೊಸ​ ಮೈಲಿಗಲ್ಲು ತಲುಪಿದರು.

ಇದನ್ನೂ ಓದಿ: ಟಿ-20 ಕ್ರಿಕೆಟ್​ನಲ್ಲಿ ​ಚೇಸ್​ ಮಾಸ್ಟರ್​ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು

ರೋಚಕ ಪಂದ್ಯ: ಐಪಿಎಲ್ 2023ರ ಆವೃತ್ತಿಯ 15ನೇ ಪಂದ್ಯಯಲ್ಲಿ ಆರ್​ಸಿಬಿ ಮತ್ತು ಎಲ್​​ಎಸ್​ಜಿ ಮುಖಾಮುಖಿಯಾಗಿದ್ದವು. ಕೆ.ಎಲ್.ರಾಹುಲ್​ ನಾಯಕತ್ವದ ಲಖನೌ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿತ್ತು. ಆರ್​ಸಿಬಿ ಪರ ವಿರಾಟ್​ ಕೊಹ್ಲಿ ಮತ್ತು ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್​ ಮಾಡಲು ಕ್ರೀಸಿಗಿಳಿದರು. ಸಂಪೂರ್ಣ ಇನ್ನಿಂಗ್ಸ್​ ಮುಗಿಯುವವರೆಗೂ ಕ್ರೀಸ್​ನಲ್ಲಿದ್ದ ಪ್ಲೆಸಿಸ್ 46 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ನೆರವಿನೊಂದಿಗೆ ಅಜೇಯ 79 ರನ್ ಸಿಡಿಸಿದ್ದರು.

ಇದನ್ನೂ ಓದಿ: 'ಕ್ರಿಕೆಟ್​ ಆಡ್ಬೇಡ ಓದಿಗೆ ಗಮನ ಕೊಡು ಎಂದಿದ್ದೆ, ಮಾತು ಕೇಳಿರಲಿಲ್ಲ': ಸಿಕ್ಸರ್ ಸಾಧಕನ ತಂದೆಯ ಮಾತು

ಕೊಹ್ಲಿ ಮತ್ತು ಪ್ಲೆಸಿಸ್ ಮೊದಲ ವಿಕೆಟ್​ಗೆ 69 ಎಸೆತಗಳಲ್ಲಿ 96 ರನ್‌ಗಳ ಜೊತೆಯಾಟ ನೀಡಿದರು. ಪ್ಲೆಸಿಸ್ ಅವರೊಂದಿಗೆ ಗ್ಲೆನ್​ ಮ್ಯಾಕ್ಸ್‌ವೆಲ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಈ ಜೋಡಿ ಕೇವಲ 50 ಎಸೆತಗಳಲ್ಲಿ 115 ರನ್‌ಗಳನ್ನು ಕಲೆ ಹಾಕಿತ್ತು. ಪ್ಲೆಸಿಸ್ ಬ್ಯಾಟ್​ನಿಂದ ಐದು ಸಿಕ್ಸರ್‌ಗಳೊಂದಿಗೆ ಟಿ20ಯಲ್ಲಿ ಅವರು 301ಕ್ಕೆ ಸಿಕ್ಸರ್‌ ಬಾರಿಸಿದ ವಿನೂತನ ದಾಖಲೆ ಸೃಷ್ಟಿಸಿದರು.

ಇವರು ಜಾಗತಿಕ ಕ್ರಿಕೆಟ್‌ನ ಸಿಕ್ಸರ್‌ ದಾಂಡಿಗರು: ಹೊಡಿಬಡಿ ಆಟದಲ್ಲಿ ಅನೇಕ ಆಟಗಾರರು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಿದ್ದಾರೆ. ವೆಸ್ಟ್ ಇಂಡೀಸ್​ನ ಖ್ಯಾತ ಬ್ಯಾಟರ್​ ಕ್ರಿಸ್ ಗೇಲ್​ ಹೆಸರಲ್ಲಿ ಅತಿ ಹೆಚ್ಚು 1,056 ಸಿಕ್ಸರ್ ಬಾರಿಸಿದ ದಾಖಲೆ ಇದೆ. ಮತ್ತೊಬ್ಬ ವಿಂಡೀಸ್ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ 812 ಸಿಕ್ಸರ್​ಗಳೊಂದಿಗೆ ಎರಡನೇ ಸ್ಥಾನ ಹೊಂದಿದ್ದಾರೆ. ಮೂರನೇ ಅಗ್ರ ಸಿಕ್ಸ್​ ಹಿಟ್ಟರ್​ ಸಹ ವೆಸ್ಟ್ ಇಂಡೀಸ್ ಬ್ಯಾಟರ್​ ಆಗಿದ್ದು, ಆಲ್​ರೌಂಡರ್ ಆಂಡ್ರೆ ರಸೆಲ್ 589 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ. ನ್ಯೂಜಿಲೆಂಡ್‌ನ ಮಾಜಿ ವಿಕೆಟ್‌ ಕೀಪರ್ ಕಂ ಬ್ಯಾಟರ್ ಬ್ರೆಂಡನ್ ಮೆಕಲಮ್ 485 ಸಿಕ್ಸರ್ ಮತ್ತು ಮತ್ತೊಬ್ಬ ಕೀವಿಸ್​ ಬ್ಯಾಟರ್​ ಕಾಲಿನ್ ಮುನ್ರೊ 480 ಸಿಕ್ಸರ್​ಗಳೊಂದಿಗೆ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಅಗ್ರ ಸಿಕ್ಸ್​ ಹಿಟ್ಟರ್​ಗಳು.

ಭಾರತದ ಸಿಕ್ಸರ್​ ಕ್ರಿಕೆಟರ್​ಗಳ ಬಗ್ಗೆ ಗೊತ್ತೇ?: ಭಾರತದ ಬ್ಯಾಟರ್​ಗಳು ಸಹ ಟಿ20ಯಲ್ಲಿ ಸಿಕ್ಸರ್​ ಸುರಿಮಳೆ ಹರಿಸಿದ್ದಾರೆ. ರೋಹಿತ್ ಶರ್ಮಾ (462 ಸಿಕ್ಸರ್), ವಿರಾಟ್ ಕೊಹ್ಲಿ (360 ಸಿಕ್ಸರ್), ಸುರೇಶ್ ರೈನಾ (325 ಸಿಕ್ಸರ್), ಕೆ.ಎಲ್.ರಾಹುಲ್ (289 ಸಿಕ್ಸರ್) ಮತ್ತು ರಾಬಿನ್ ಉತ್ತಪ್ಪ 267 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ: ಮಾರ್ಕಸ್, ಪೂರನ್ ಸಿಡಿಲಬ್ಬರದ ಬ್ಯಾಟಿಂಗ್: ಬೆಂಗಳೂರು ವಿರುದ್ಧ ರಾಹುಲ್​ ಪಡೆಗೆ ರೋಚಕ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.