ಅಹಮದಾಬಾದ್ : ಈ ಸಲ ಕಪ್ ನಮ್ದೇ ಎಂದು ಘೋಷಣೆ ಹಾಕ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ನಿನ್ನೆ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ಗಳ ಸೋಲು ಕಾಣುವ ಮೂಲಕ ಬೆಂಗಳೂರು ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆರ್‌ಸಿಬಿ ತಂಡದ ಚೊಚ್ಚಲ ಟ್ರೋಫಿ ಕೈಜಾರಲು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೈಬಿಟ್ಟ ಆ ಒಂದು ಕ್ಯಾಚ್ ಸಹ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗ್ತಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 157ರನ್ಗಳಿಕೆ ಮಾಡಿತ್ತು. ಈ ಗುರಿ ಬೆನ್ನತ್ತಿದ್ದ ರಾಯಸ್ಥಾನ ಉತ್ತಮ ಆರಂಭ ಪಡೆದಿತ್ತು. ಆದರೆ, ಹರ್ಷಲ್ ಪಟೇಲ್ ಎಸೆದ 11ನೇ ಓವರ್ನಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕ್ಯಾಚ್ವೊಂದನ್ನ ಕೈಚೆಲ್ಲಿದ್ದರಿಂದ ತಂಡಕ್ಕೆ ಗೆಲುವು ದುಬಾರಿಯಾಯಿತು.
- — Cricsphere (@Cricsphere) May 27, 2022 " class="align-text-top noRightClick twitterSection" data="
— Cricsphere (@Cricsphere) May 27, 2022
">— Cricsphere (@Cricsphere) May 27, 2022
ರಾಜಸ್ಥಾನ ರಾಯಲ್ಸ್ ತಂಡದ ಪರ 66ರನ್ಗಳಿಸಿ ಬ್ಯಾಟಿಂಗ್ ನಡೆಸ್ತಿದ್ದ ಜೋಸ್ ಬಟ್ಲರ್, ಹರ್ಷಲ್ ಓವರ್ನಲ್ಲಿ ಸುಲಭ ಕ್ಯಾಚ್ ನೀಡಿದ್ದರು. ಆದರೆ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಪ್ಪಿನಿಂದಾಗಿ ಈ ಕ್ಯಾಚ್ ಹಿಡಿಯುವಲ್ಲಿ ವಿಫಲರಾಗ್ತಾರೆ. ಇದರ ಲಾಭ ಪಡೆದುಕೊಂಡ ಬಟ್ಲರ್(106) ಅಬ್ಬರಿಸಿ, ತಂಡಕ್ಕೆ ಗೆಲುವು ದಾಖಲಿಸಿದರು. ಈ ಕ್ಯಾಚ್ ಕೈಚೆಲ್ಲದಿದ್ದರೆ, ಆರ್‌ಸಿಬಿ ತಂಡಕ್ಕೆ ಗೆಲುವಿನ ಸಾಧ್ಯತೆ ಇತ್ತು ಎನ್ನಲಾಗ್ತಿದೆ.
158 ರನ್ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಟ್ಲರ್ ಮಾತ್ರ ಆಸರೆಯಾಗಿದ್ದರು. ಒಂದು ವೇಳೆ ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದ್ದರೆ, ತಂಡಕ್ಕೆ ಗೆಲುವು ಅವಕಾಶ ಹೆಚ್ಚಿತ್ತು. ರಾಜಸ್ಥಾನ ರಾಯಲ್ಸ್ ತಂಡ ಈ ಗೆಲುವಿನೊಂದಿಗೆ 2008ರ ಬಳಿಕ ಮೊದಲ ಸಲ ಫೈನಲ್ಗೆ ಲಗ್ಗೆ ಹಾಕಿದೆ. ಇದೀಗ ನಾಳೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.