ಚೆನ್ನೈ: ಐಪಿಎಲ್ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೂಪರ್ ಓವರ್ನಲ್ಲಿ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಡೆಲ್ಲಿ ಪರ ಸೂಪರ್ ಓವರ್ ಮಾಡಿದ ಅಕ್ಷರ್ ಪಟೇಲ್ ಕೇವಲ 7 ರನ್ ನೀಡಿ ಎದುರಾಳಿ ತಂಡವನ್ನು ಕಟ್ಟಿಹಾಕಿದ್ದರು.
ಪಂದ್ಯದ ಬಳಿಕ ಮಾತನಾಡಿದ ಅವರು, ನಾನು ಕೋವಿಡ್ ಬಗ್ಗೆ ಹೆಚ್ಚು ಯೋಚಿಸಿಲ್ಲ, ಬದಲಾಗಿ ಮೂಲಭೂತ ವಿಷಯಗಳ ಬಗ್ಗೆ ಯೋಚಿಸಿದ್ದೇನೆ ಎಂದು ಹೇಳಿದ್ದಾರೆ.
"ನಾನು ಎಲ್ಲಾ ರೀತಿಯಿಂದ ಸಿದ್ಧನಾಗಿದ್ದೇನೆ, ತಂಡದ ಆಡಳಿತ ಮಂಡಳಿ ನೀವು ಫಿಟ್ ಇದ್ದೀರಾ, ನೀವು ಆಡುತ್ತೀರಾ ಎಂದು ಕೇಳಿತ್ತು. ಅದಕ್ಕೆ ನಾನು ನಾನು ರೆಡಿ ಎಂದು ಹೇಳಿದ್ದೆ. ತಂಡದ ಮ್ಯಾನೇಜ್‌ಮೆಂಟ್ ಸಲಹೆ ಮೇರೆಗೆ ಮರಳಿ ತಂಡ ಸೇರಿ ಆಡುತ್ತಿದ್ದೇನೆ" ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಅಕ್ಷರ್ ಪಟೇಲ್ ಹೇಳಿದರು.
"ಕೋವಿಡ್ -19 ರ ಮೊದಲು, ನಾನು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದೆ. ನಾನು ಆ ವಿಶ್ವಾಸವನ್ನು ಈಗ ಮತ್ತೆ ಹೊತ್ತು ತಂದಿದ್ದೇನೆ. ನಾನು ಕೋವಿಡ್ ಬಗ್ಗೆ ಹೆಚ್ಚು ಯೋಚಿಸುತ್ತಿರಲಿಲ್ಲ. ಕ್ವಾರಂಟೈನ್ನಲ್ಲಿದ್ದಾಗ ತಂಡದ ಆಟಗಾರರು ನನಗೆ ಕರೆ ಮಾಡಿ ನನ್ನೊಂದಿಗೆ ಮಾತನಾಡಿ ಆತ್ಮಸ್ಥೈರ್ಯ ತುಂಬುತ್ತಿದ್ದರು ಎಂದರು.
ಇದನ್ನೂ ಓದಿ : ಕುಟುಂಬ ಸದಸ್ಯರಿಗೆ ಕೋವಿಡ್: IPLನಿಂದ ಹೊರನಡೆದ ಆರ್.ಅಶ್ವಿನ್