ಅಹಮದಾಬಾದ್ (ಗುಜರಾತ್): ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಬೇಕಾದರೆ ನನ್ನ ದೇಹ ಅದಕ್ಕೆ ಸಹಕರಿಸಬೇಕು. ಅಭಿಮಾನಿಗಳ ಪ್ರೀತಿ ನೋಡಿದರೆ ಅವರಿಗೆ ಮತ್ತೊಂದು ಐಪಿಎಲ್ ಸೀಸನ್ ಉಡುಗೊರೆಯಾಗಿ ಕೊಡಬೇಕೆಂಬ ಆಸೆಯೂ ಇದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಹೇಳಿದರು. ನಿನ್ನೆ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಫೈನಲ್ ಪಂದ್ಯ ಗೆದ್ದ ಬಳಿಕ ಅವರು ಮಾತನಾಡಿದರು.
ಅಹಮದಾಬಾದ್ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗುಜರಾತ್ ವಿರುದ್ಧ ಚೆನ್ನೈ ಗೆಲುವು ದಾಖಲಿಸಿ 5 ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮೂಲಕ ಮುಂಬೈ ಸಾಧನೆಯನ್ನು ಸರಿಗಟ್ಟಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧೋನಿ ಮಾತನಾಡುತ್ತಾ, "ಐಪಿಎಲ್ಗೆ ನಿವೃತ್ತಿ ಹೇಳಲು ಇದು ಉತ್ತಮ ಸಮಯವೆಂದು ನನಗೆ ಅನ್ನಿಸುತ್ತಿದೆ. ಕಷ್ಟಪಟ್ಟು ಹೆಚ್ಚು ಐಪಿಎಲ್ ಆಡುವುದಕ್ಕಿಂತ ನಿವೃತ್ತಿ ಹೇಳುವುದು ಸುಲಭ. ಆದರೆ, ಅಭಿಮಾನಿಗಳಿಂದ ಪಡೆದ ಪ್ರೀತಿಯನ್ನು ನೋಡಿ, ಅವರಿಗೆ ಮತ್ತೊಂದು ಸೀಸನ್ ಅನ್ನು ಉಡುಗೊರೆಯಾಗಿ ನೀಡಬೇಕೆಂಬ ಆಸೆಯೂ ಇದೆ. ಆದರೆ ನನ್ನ ದೇಹಕ್ಕೆ ಇದು ಸವಾಲಿನ ಪ್ರಶ್ನೆಯೂ ಹೌದು" ಎಂದು ತಿಳಿಸಿದರು.
-
Thala happy and so are we ✨💥pic.twitter.com/WfT3VybSUt
— Chennai Super Kings (@ChennaiIPL) May 29, 2023 " class="align-text-top noRightClick twitterSection" data="
">Thala happy and so are we ✨💥pic.twitter.com/WfT3VybSUt
— Chennai Super Kings (@ChennaiIPL) May 29, 2023Thala happy and so are we ✨💥pic.twitter.com/WfT3VybSUt
— Chennai Super Kings (@ChennaiIPL) May 29, 2023
ಐಪಿಎಲ್‌ಗಾಗಿ ಒಂಬತ್ತು ತಿಂಗಳು ಕಾಲ ಕಠಿಣ ಪರಿಶ್ರಮ ಮತ್ತು ಪ್ರಯತ್ನ ನಡೆಸಿ ದೇಹವನ್ನು ಸದೃಢವಾಗಿ ಇಟ್ಟುಕೊಳಳ ಬೇಕಾಗಿದೆ. ಈ ಪ್ರಯತ್ನವನ್ನು ಕಾರ್ಯಗತಗೊಳಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು 6 ರಿಂದ 7 ತಿಂಗಳುಗಳ ಸಮಯ ಇದೆ. ಈ ಮೂಲಕ ಮುಂದಿನ ಸೀಸನ್ಗೆ ಫಿಟ್ ಆಗಿದ್ದರೆ ಮಾತ್ರ ಆಡುವುದಾಗಿ ಎಂ.ಎಸ್. ಧೋನಿ ತಿಳಿಸಿದ್ದಾರೆ.
ಪಂದ್ಯದಲ್ಲಿ ನೀವು ಭಾವೋದ್ವೇಗಕ್ಕೆ ಒಳಗಾಗದೇ ಎಂದು ಕೇಳಿದಾಗ, ಆರಂಭದಿಂದಲೂ ಅಭಿಮಾನಿಗಳು ನನ್ನ ಹೆಸರನ್ನು ಜೋರಾಗಿ ಕೂಗುತ್ತಿದ್ದರು. ಆಗ ನನ್ನ ಕಣ್ಣುಗಳಲ್ಲಿ ನೀರಿ ತುಂಬುತ್ತಿತ್ತು. ಇದನ್ನು ಆನಂದಿಸಬೇಕು ಎಂದುಕೊಂಡೆ ಎಂದರು.
ಪಂದ್ಯದ ಕುರಿತು ಮಾತನಾಡಿದ ಧೋನಿ, "ಪ್ರತಿಯೊಂದು ಟ್ರೋಫಿಯೂ ವಿಶೇಷವಾಗಿಯೇ ಇರುತ್ತದೆ. ಆದರೆ ಐಪಿಎಲ್‌ನ ವಿಶೇಷವೆಂದರೆ ಇದಕ್ಕೆ ಪ್ರತಿಯಾಗಿ ನೀವು ಆಟಕ್ಕೆ ಸಿದ್ಧರಾಗಿರಬೇಕು. ಪಂದ್ಯದಲ್ಲಿ ನಮ್ಮ ತಂಡದಲ್ಲಿ ಅನೇಕ ಲೋಪಗಳು ಕಂಡು ಬಂದಿವೆ. ಬೌಲಿಂಗ್ನಲ್ಲಿ ವೈಫಲ್ಯ ಕಂಡಿತು. ಆದರೆ ಅದು ಬ್ಯಾಟಿಂಗ್ನಲ್ಲಿ ಸಂಭವಿಸಿಲಿಲ್ಲ. ಪ್ರತಿಯೊಬ್ಬರೂ ವಿಭಿನ್ನ ಒತ್ತಡ ಎದುರಿಸುತ್ತಾರೆ. ಅಜಿಂಕ್ಯ ರಹಾನೆ ಮತ್ತು ಕೆಲವು ಇತರ ಅನುಭವಿಗಳಿದ್ದುದರಿಂದ ಚಿಂತಿಸುವ ಅವಶ್ಯಕತೆ ಇರಲಿಲ್ಲ" ಎಂದು ಧೋನಿ ಹೇಳಿದರು.
ಬಳಿಕ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, ನಾವು ಹೃದಯಕ್ಕೆ ಹಚ್ಚಿಕೊಂಡು ಆಡುತ್ತೇವೆ. ನಾವು ಹೋರಾಟವನ್ನು ಮುಂದುವರೆಸಿದ ರೀತಿ ನಿಜವಾಗಿಯೂ ಹೆಮ್ಮೆಪಡುವಂತಹದ್ದು. ನಮಗೆ ಒಂದು ಧ್ಯೇಯವಿದೆ - ನಾವು ಒಟ್ಟಿಗೆ ಗೆಲ್ಲುತ್ತೇವೆ, ನಾವು ಒಟ್ಟಿಗೆ ಸೋಲುತ್ತೇವೆ. ಸಿಎಸ್‌ಕೆ ಉತ್ತಮ ಪ್ರದರ್ಶನ ತೋರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಂದ್ಯ ಗೆಲ್ಲಿಸಿದ ಜಡೇಜಾ ಎತ್ತಿಕೊಂಡು ಸಂಭ್ರಮಿಸಿದ ಧೋನಿ: ನೋಡಿ ಅಪರೂಪದ ದೃಶ್ಯ