ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2023ರ 40ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇಂದು ರಾತ್ರಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯವು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಸೋತ ತಂಡವು ಪಾಯಿಂಟ್ ಪಟ್ಟಿಯಲ್ಲಿ ಕೆಳಕ್ಕೆ ಹೋಗುತ್ತದೆ. ಡೆಲ್ಲಿ ತಂಡ ಕಳೆದ 2 ಪಂದ್ಯಗಳಿಂದ ಸತತ ಪಂದ್ಯಗಳನ್ನು ಗೆದ್ದು ಸಂಭ್ರಮದಲ್ಲಿದೆ, ಹೈದರಾಬಾದ್ ತಂಡವು ಎರಡು ಗೆಲುವಿನ ನಂತರ ಸತತ ಮೂರು ಪಂದ್ಯಗಳನ್ನು ಕಳೆದುಕೊಂಡಿದೆ. ಈ ಎರಡೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗೆ ತಲಾ ಏಳು ಪಂದ್ಯಗಳನ್ನು ಆಡಿದ್ದು 2-2 ಪಂದ್ಯಗಳನ್ನು ಮಾತ್ರ ಗೆದ್ದಿವೆ. ಎರಡೂ ತಂಡಗಳು ಕೇವಲ 4-4 ಅಂಕಗಳನ್ನು ಹೊಂದಿವೆ. ಇಂದು ಉಭಯ ತಂಡಗಳು ಎಂಟನೇ ಪಂದ್ಯವನ್ನು ಆಡಲಿವೆ. ಈ ಪಂದ್ಯವನ್ನು ಗೆಲ್ಲುವ ತಂಡವು ಪಾಯಿಂಟ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಸುಧಾರಿಸಲು ಸಾಧ್ಯವಾಗುತ್ತದೆ ಮತ್ತು ಸೋತ ತಂಡ ಕೊನೆಯ ಸ್ಥಾನಕ್ಕೆ ಹೋಗುತ್ತದೆ.
-
Last night: 🤗🫂
— SunRisers Hyderabad (@SunRisers) April 29, 2023 " class="align-text-top noRightClick twitterSection" data="
Tonight: 🤜💥🤛 pic.twitter.com/5dkfQU6s0e
">Last night: 🤗🫂
— SunRisers Hyderabad (@SunRisers) April 29, 2023
Tonight: 🤜💥🤛 pic.twitter.com/5dkfQU6s0eLast night: 🤗🫂
— SunRisers Hyderabad (@SunRisers) April 29, 2023
Tonight: 🤜💥🤛 pic.twitter.com/5dkfQU6s0e
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇದುವರೆಗೆ ಒಟ್ಟು 22 ಪಂದ್ಯಗಳು ನಡೆದಿದೆ. ಉಭಯ ತಂಡಗಳು 11 ರಲ್ಲಿ ಗೆದ್ದಿದ್ದು, ಸಮಾನ ಬಲ ಹೊಂದಿದೆ. ಇದೇ ಆವೃತ್ತಿಯಲ್ಲಿ ಏಪ್ರೀಲ್ 24 ರಂದು ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಡೆಲ್ಲಿ ಕೊಟ್ಟ ಸಂಕ್ಷಿಪ್ತ ಸ್ಕೋರ್ ಬೆನ್ನತ್ತುವಲ್ಲಿ ಎಸ್ಆರ್ಹೆಚ್ ವಿಫವಾಗಿತ್ತು.
ಕಳೆದೆರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೈದರಾಬಾದ್ ಮೇಲೆ ಭಾರೀ ಪೈಪೋಟಿ ನಡೆಸಿದೆ. ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಹೈದರಾಬಾದ್ ಮೈದಾನಕ್ಕೆ ತೆರಳಿ ಡೆಲ್ಲಿ ಸೋಲಿಸಿತ್ತು. ಇದೀಗ ದೆಹಲಿಯ ತವರು ನೆಲದಲ್ಲಿ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಸನ್ ರೈಸರ್ಸ್ ಹೈದರಾಬಾದ್ಗೆ ಉತ್ತಮ ಅವಕಾಶ ಸಿಕ್ಕಿದೆ.
-
Aiming to 𝐫𝐢𝐬𝐞 higher at #QilaKotla 🙌
— Delhi Capitals (@DelhiCapitals) April 29, 2023 " class="align-text-top noRightClick twitterSection" data="
Gear up for #DCvSRH with our Match Preview ➡ https://t.co/HgyQWcJjzX#YehHaiNayiDilli #IPL2023 pic.twitter.com/LCa0zp2QPu
">Aiming to 𝐫𝐢𝐬𝐞 higher at #QilaKotla 🙌
— Delhi Capitals (@DelhiCapitals) April 29, 2023
Gear up for #DCvSRH with our Match Preview ➡ https://t.co/HgyQWcJjzX#YehHaiNayiDilli #IPL2023 pic.twitter.com/LCa0zp2QPuAiming to 𝐫𝐢𝐬𝐞 higher at #QilaKotla 🙌
— Delhi Capitals (@DelhiCapitals) April 29, 2023
Gear up for #DCvSRH with our Match Preview ➡ https://t.co/HgyQWcJjzX#YehHaiNayiDilli #IPL2023 pic.twitter.com/LCa0zp2QPu
ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಳೆದ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ತಮ್ಮ ತಂಡವನ್ನು ಗೆಲುವಿನ ಟ್ರ್ಯಾಕ್‌ಗೆ ತರಲು ಪ್ರಯತ್ನಿಸುತ್ತಿದೆ. ಈ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ ಗೆದ್ದರೆ, ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ವಿಭಾಗದಲ್ಲಿ ಬರಲಿದೆ ಮತ್ತು ಉಳಿದ ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ನಲ್ಲಿ ತನ್ನ ಸ್ಥಾನವನ್ನು ಪಡೆಯಲು ಸಹಾಯ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿ ತಂಡ ತವರು ಮೈದಾನದ ಲಾಭ ಪಡೆಯಲು ಪ್ರಯತ್ನಿಸಲಿದೆ.
ಸಂಭಾವ್ಯ ತಂಡಗಳು ಇಂತಿವೆ..: ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಾಲ್ ಪಟೇಲ್, ಅನ್ರಿಚ್ ನಾರ್ಟ್ಜೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ
ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಐಡೆನ್ ಮಾರ್ಕ್ರಾಮ್ (ನಾಯಕ), ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಅಬ್ದುಲ್ ಸಮದ್, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
ಇದನ್ನೂ ಓದಿ: KKR vs GT: ಕೋಲ್ಕತ್ತಾ ವಿರುದ್ಧ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ