ನವದೆಹಲಿ: ಫಿಲಿಪ್ ಸಾಲ್ಟ್ ಅವರ ಅಬ್ಬರದ 87 ರನ್ನ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ 16.4 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು ಆರ್‌ಸಿಬಿ ಕೊಟ್ಟಿದ್ದ 182 ರನ್ ಗಳಿಸಿ ವಿಜಯ ಸಾಧಿಸಿದೆ. ವಿರಾಟ್ ಹಾಗೂ ಮಹಿಪಾಲ್ ಅವರ ಅರ್ಧಶತಕದ ಆಟ ಸಾಲ್ಟ್ ಅವರ ಅಬ್ಬರದ ಮುಂದೆ ಕೊಚ್ಚಿಹೋಯಿತು. ಇದರಿಂದ ಡೆಲ್ಲಿ 7 ವಿಕೆಟ್ನಿಂದ ಗೆದ್ದುಕೊಂಡಿದೆ.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್ ಅರ್ಧಶತಕ ಮತ್ತು ಫಾಫ್ 45 ರನ್ನ ಕೊಡುಗೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ ಓವರ್ ಅಂತ್ಯಕ್ಕೆ 4 ವಿಕೆಟ್ ನಷ್ಟದಿಂದ 181 ರನ್ ಗಳಿಸಿದೆ. ಪವರ್ ಪ್ಲೇ ನಂತರ ರನ್ ವೇಗಕ್ಕೆ ಮೇಲೆ ಕಡಿವಾಣ ಹಾಕಿದ್ದ ಡೆಲ್ಲಿ ಬೌಲರ್ಗಳು ಕೊನೆಯ ಓವರ್ಗಳಲ್ಲಿ ನಿಯಂತ್ರಣ ಕಳೆದುಕೊಂಡಿದ್ದರಿಂದ 182 ರನ್ ಗುರಿಯನ್ನು ಎದುರಿಸಬೇಕಾಯುತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಬಂದ ಆರ್‌ಸಿಬಿ ಉತ್ತಮ ಆರಂಭ ಪಡೆಯಿತು. ವಿರಾಟ್ ಮತ್ತು ಫಾಫ್ ಡು ಪ್ಲೆಸಿಸ್ 82 ರನ್ಗಳ ಜೊತೆಯಾಟ ಮಾಡಿದರು. ಈ ಜೋಡಿ ಪವರ್ ಪ್ಲೇಯಲ್ಲಿ ವೇಗವಾಗಿ ರನ್ ಕಲೆ ಹಾಕಿದರೆ, ನಂತರ ನಿಧಾನ ಗತಿಯಲ್ಲಿ ಸಾಗಿತು. ಇದರಿಂದ 10 ಓವರ್ ಅಂತ್ಯಕ್ಕೆ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೇ 79 ಆಗಿತ್ತು.
11ನೇ ಓವರ್ನ 3ನೇ ಬಾಲ್ನಲ್ಲಿ ನಾಯಕ ಫಾಫ್ ವಿಕೆಟ್ ಕೊಟ್ಟರು. 32 ಬಾಲ್ ಆಡಿದ್ದ ಡು ಪ್ಲೆಸಿಸ್ 1 ಸಿಕ್ಸ್ ಮತ್ತು 5 ಬೌಂಡರಿಯ ಸಹಾಯದಿಂದ 45 ರನ್ ಗಳಿಸಿದ್ದರು. 5 ರನ್ನಿಂದ ನಾಯಕ ಅರ್ಧಶತಕ ವಂಚಿತರಾದರು. ಅವರ ಬೆನ್ನಲ್ಲೇ ಬಂದ ಹೊಡಿಬಡಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಮಿಚೆಲ್ ಮಾರ್ಷ್ ಒಂದೇ ಓವರ್‌ನಲ್ಲಿ ಆರ್ಸಿಬಿಯ ಫಾಫ್ ಮತ್ತು ಮ್ಯಾಕ್ಸಿಯ ವಿಕೆಟ್ ಪಡೆದು ಸಂಭ್ರಮಿಸಿದರು.
ಆರ್ಸಿಬಿಯ ಬ್ಯಾಟಿಂಗ್ ಬಲವಾಗಿದ್ದ ಕೆಜಿಎಫ್ನಲ್ಲಿ, ಜಿ ಮತ್ತು ಎಫ್ನ ವಿಕೆಟ್ ಬಿದ್ದ ನಂತರ ಮಹಿಪಾಲ್ ಲೊಮ್ರೋರ್ ವಿರಾಟ್ ಜೊತೆಗೂಡಿದರು. ಈ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಮತ್ತೆ 55 ರನ್ನ ಜೊತೆಯಾಟ ಆಡಿತು. ಇದರಿಂದ ಆರ್‌ಸಿಬಿ 130 ರನ್ ಗಡಿ ದಾಟಿತು.
-
7⃣0⃣0⃣0⃣ 𝗜𝗣𝗟 𝗥𝗨𝗡𝗦 𝗙𝗢𝗥 𝗞𝗜𝗡𝗚 𝗞𝗢𝗛𝗟𝗜! 👑@imVkohli becomes the first batter to surpass this milestone in IPL 🫡
— IndianPremierLeague (@IPL) May 6, 2023 " class="align-text-top noRightClick twitterSection" data="
TAKE. A. BOW 👏#TATAIPL | #DCvRCB | @RCBTweets pic.twitter.com/VP4dMvLTwY
">7⃣0⃣0⃣0⃣ 𝗜𝗣𝗟 𝗥𝗨𝗡𝗦 𝗙𝗢𝗥 𝗞𝗜𝗡𝗚 𝗞𝗢𝗛𝗟𝗜! 👑@imVkohli becomes the first batter to surpass this milestone in IPL 🫡
— IndianPremierLeague (@IPL) May 6, 2023
TAKE. A. BOW 👏#TATAIPL | #DCvRCB | @RCBTweets pic.twitter.com/VP4dMvLTwY7⃣0⃣0⃣0⃣ 𝗜𝗣𝗟 𝗥𝗨𝗡𝗦 𝗙𝗢𝗥 𝗞𝗜𝗡𝗚 𝗞𝗢𝗛𝗟𝗜! 👑@imVkohli becomes the first batter to surpass this milestone in IPL 🫡
— IndianPremierLeague (@IPL) May 6, 2023
TAKE. A. BOW 👏#TATAIPL | #DCvRCB | @RCBTweets pic.twitter.com/VP4dMvLTwY
7000 ರನ್ ಪೂರೈಸಿದ ವಿರಾಟ್: ವಿರಾಟ್ ಕೊಹ್ಲಿ 46 ಬಾಲ್ ಎದುರಿಸಿ ಐದು ಬೌಂಡರಿಯ ಸಹಾಯದಿಂದ 55 ರನ್ ಗಳಿಸಿ ಔಟ್ ಆದರು. ಇದಕ್ಕೂ ಮುನ್ನ ವಿರಾಟ್ 233ನೇ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ವಿರುದ್ಧ ಕಟ್ ಶಾಟ್‌ನೊಂದಿಗೆ 7000 ರನ್ ಗಡಿ ದಾಟಿದರು. ಈ ದಾಖಲೆ ಬರೆದ ಮೊದಲ ಬ್ಯಾಟರ್ ಎಂಬ ಖ್ಯಾತಿಗೆ ಒಳಗಾದರು.
ಮಹಿಪಾಲ್ ಲೊಮ್ರೋರ್ ಅಜೇಯ ಇನ್ನಿಂಗ್ಸ್ ಕಟ್ಟಿದರು. ಅವರು ತಮ್ಮ ಐಪಿಎಲ್ನ ಮೊದಲ ಅರ್ಧಶತಕವನ್ನೂ ಪೂರೈಸಿದರು. 29 ಬಾಲ್ ಎದುರಿಸಿದ ಮಹಿಪಾಲ್ ಅವರು 3 ಸಿಕ್ಸ್ ಮತ್ತು 6 ಬೌಂಡರಿಗಳಿಂದ 54 ರನ್ ಕಲೆಹಾಕಿದರು. ದಿನೇಶ್ ಕಾರ್ತಿಕ್ 11 ರನ್ ಕಲೆಹಾಕಿ ಔಟ್ ಆದರೆ, ಕೊನೆಯ ಓವರ್‌ನಲ್ಲಿ ಬಂದ ಅನುಜ್ ರಾವತ್ ಅಜೇಯ 8 ರನ್ ಗಳಿಸಿದರು. ಡೆಲ್ಲಿ ಪರ ಮಿಚೆಲ್ ಮಾರ್ಷ್ 2, ಮುಖೇಶ್ ಕುಮಾರ್ ಮತ್ತು ಖಲೀಲ್ ಅಹಮ್ಮದ್ ತಲಾ ಒಂದು ವಿಕೆಟ್ ಕಿತ್ತರು.
ತಂಡಗಳು ಇಂತಿವೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಕೇದಾರ್ ಜಾಧವ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೊಸೊವ್, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್
ಇದನ್ನೂ ಓದಿ: IPL 2023: ಡಕ್ ಔಟ್ನಲ್ಲಿ ದಾಖಲೆ ಬರೆದ ರೋಹಿತ್ ಶರ್ಮಾ