ETV Bharat / sports

ಸನ್​ ರೈಸರ್ಸ್​ ವಿರುದ್ಧ ನಿಧಾನಗತಿಯ ಬೌಲಿಂಗ್​: ವಾರ್ನರ್​​ಗೆ 12 ಲಕ್ಷ ರೂ. ದಂಡ

ಡೆಲ್ಲಿ ಕ್ಯಾಪಿಟಲ್ಸ್​ ನಿನ್ನೆ ಸನ್​ ರೈಸರ್ಸ್​ ವಿರುದ್ಧ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ನಾಯಕ ವಾರ್ನರ್​ಗೆ 12 ಲಕ್ಷ ದಂಡ ವಿಧಿಸಲಾಗಿದೆ.

ವಾರ್ನರ್​​ಗೆ 12 ಲಕ್ಷ ರೂ. ದಂಡ
ವಾರ್ನರ್​​ಗೆ 12 ಲಕ್ಷ ರೂ. ದಂಡ
author img

By

Published : Apr 25, 2023, 9:46 PM IST

ಹೈದರಾಬಾದ್ (ತೆಲಂಗಾಣ): ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್‌ಗೆ ನಿನ್ನೆಯ ಸನ್​ ರೈಸರ್ಸ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್​ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್​ ಹೈದರಾಬಾದ್​ನಲ್ಲಿ ಸನ್​​ ರೈಸರ್ಸ್​ ವಿರುದ್ಧ 7 ರನ್​ನಿಂದ ಜಯ ಸಾಧಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಲೀಗ್​ನಲ್ಲಿ ಎರಡನೇ ಗೆಲುವನ್ನು ಕಂಡಿದೆ.

ಡೆಲ್ಲಿ ನಿನ್ನೆ ನಡೆಸಿದ ಕರಾರುವಕ್ಕು ಬೌಲಿಂಗ್​ನಿಂದ ಗೆಲುವು ದಾಖಲಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಲಟ್ಸ್​ ಮತ್ತೆ ಬ್ಯಾಟಿಂಗ್​ ವೈಫಲ್ಯ ಎದುರಿಸಿತ್ತು. ಹೈದರಾಬಾದ್​ನ ಬೌಲರ್​ಗಳು ಡೆಲ್ಲಿಯನ್ನು ಕಾಡಿದ್ದರು. ಆದರೆ ಅಕ್ಷರ್​ ಪಟೇಲ್​ ಮತ್ತು ಮನೀಷ್​ ಪಾಂಡೆ ತಂಡಕ್ಕೆ ಕೊಂಚ ರನ್​ ಸೇರಿಸಿ ಆಸರೆಯಾದರು. ಪೃಥ್ವಿ ಶಾ ಅವರನ್ನು ಬಿಟ್ಟು ಆರಂಭಿಕರಾಗಿ ಸಾಲ್ಟನ್ನು ಕಣಕ್ಕಿಳಿಸಲಾಗಿತ್ತು. ಆದರೆ ಸಾಲ್ಟ್​ ಶೂನ್ಯಕ್ಕೆ ಔಟ್​ ಆಗಿ ಮತ್ತೆ ವಾರ್ನರ್​ ಏಕಾಂಗಿಯಾದರು.

ವಾರ್ನರ್​ಗೆ ವಿಚೆಲ್​ ಮಾರ್ಷ ಸಾಥ್ ನೀಡಿದರೂ ಸಹ, ಇಬ್ಬರಿಂದ ದೊಡ್ಡ ಜೊತೆಯಾಟ ಬರಲಿಲ್ಲ. ಇಬ್ಬರ ವಿಕೆಟ್​ ಪತನದ ನಂತರ ಮನೀಷ್​ ಪಾಂಡೆ ಮತ್ತು ಅಕ್ಷರ್​ ಪಟೇಲ್​ ಜೊತೆಯಾಟ ಮಾಡಿ ತಂಡ ನೂರು ರನ್​ ಒಳಗೆ ಆಲ್​ಔಟ್​ ಆಗುವುದನ್ನು ತಪ್ಪಿಸಿದರು. ಕೊನೆಯಲ್ಲಿ ಇವರಿಬ್ಬರ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ 144 ರನ್​ ಗಳಿಸಿತು. ಆದರೆ 9 ವಿಕೆಟ್​​ನ್ನು ಕಳೆದುಕೊಂಡಿತು.

145 ರನ್​ನ ಗುರಿಯನ್ನು ಬೆನ್ನತ್ತಿದ ಸನ್​ ರೈಸರ್ಸ್​ ಹೈದರಾಬಾದ್​ಗೆ ಡೆಲ್ಲಿ ಬೌಲರ್​ಗಳು ಕಾಡಿದರು. ಒಂದೆಡೆ ವಿಕೆಟ್​ ಬೀಳುತ್ತಾ ಬಂದರೆ ಮಾಯಂಕ್​ ಅಗರ್ವಾಲ್​ ಗೆಲುವಿನ ರನ್​ ಗಳಿಸಲು ಪ್ರಯತ್ನಿಸಿದರು. ಕೊನೆಯಲ್ಲಿ ಕ್ಲಾಸೆನ್ಸ್​ ಮತ್ತು ವಾಷಿಂಗ್ಟನ್ ಸುಂದರ್ ಪ್ರಯತ್ನಿಸಿದರೂ ಸನ್​ ರೈಸರ್ಸ್​ಗೆ ಗೆಲುವು ಸಾಧ್ಯವಾಗಲಿಲ್ಲ. ನಿಗದಿತ ಓವರ್​ ಅಂತ್ಯಕ್ಕೆ ಹೈದರಾಬಾದ್​ ತಂಡ 6 ವಿಕೆಟ್​ ನಷ್ಟಕ್ಕೆ 137 ರನ್ ಮಾತ್ರ ಗಳಿಸಿತ್ತು. 144 ರನ್​ನ ಗುರಿಯನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಬೌಲಿಂಗ್​ ತಡವಾಗಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್‌ಗೆ ದಂಡ ವಿಧಿಸಲಾಗಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿದೆ. ಹೀಗಾಗಿ ವಾರ್ನರ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಐಪಿಎಲ್​ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಕ್ಷಿಪ್ತ ಸ್ಕೋರ್​: ಡೆಲ್ಲಿ ಕ್ಯಾಪಿಟಲ್ಸ್​ (ಮನೀಷ್​ ಪಾಂಡೆ 34, ಅಕ್ಷರ್​ ಪಟೇಲ್​ 34, ಮಿಚಲ್​ ಮಾರ್ಷ್​ 25 ವಾಷಿಂಗ್ಟನ್ ಸುಂದರ್ 3/28) 144/9, ಸನ್​ ರೈಸರ್ಸ್​ ಹೈದರಾಬಾದ್​ (ಮಾಯಾಂಕ್​ ಅಗರ್ವಾಲ್ 49, ಕ್ಲಾಸೆನ್​ 31, ಅಕ್ಷರ್​ ಪಟೇಲ್ 2/21) 137/6

ಇದನ್ನೂ ಓದಿ: ಟೆಸ್ಟ್​ ಚಾಂಪಿಯನ್​ ಶಿಪ್​ಗೆ ಸ್ಟಾರ್​ ಬೌಲರ್ ​ಜಸ್ಪ್ರೀತ್ ಬೂಮ್ರಾಗಿಲ್ಲ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.