ETV Bharat / sports

ಪ್ಲೇ ಆಫ್​ ರೇಸ್​ನಿಂದ ಹೊರ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್: ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ ಆಟಗಾರರು ಇವರು.. - ETV Bharath Karnataka

ವುಮೆನ್​​ ಪ್ರೀಮಿಯರ್​ ಲೀಗ್​ನಲ್ಲಿ ಮಹಿಳಾ ತಂಡ ಅದ್ಭುತ ಪ್ರದರ್ಶನ ನೀಡಿದರೆ, ಮೆನ್ಸ್ ಟೀಮ್​ ಕಳಪೆ ಪ್ರದರ್ಶನ ನೀಡಿತು. ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದಲ್ಲಿ ನೀರಸ ಪ್ರದರ್ಶನದಿಂದ ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಸೀಮಿತವಾಯಿತು.

delhi capitals shone in ipl 2023
ಪ್ಲೇ ಆಫ್​ ರೇಸ್​ನಿಂದ ಹೊರ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್: ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ ಆಟಗಾರರು ಇವರು..
author img

By

Published : May 19, 2023, 8:36 PM IST

ನವದೆಹಲಿ: ಐಪಿಎಲ್ 2023 ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಪ್ರಸ್ತುತ 13 ಪಂದ್ಯಗಳಿಂದ 5 ಗೆಲುವು ಮತ್ತು 8 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಪ್ಲೇ ಆಫ್‌ಗೆ ಹೋಗುವ ಅವಕಾಶದಿಂದ ಡೆಲ್ಲಿ ಹೊರಗುಳಿದಿದೆ. ಇನ್ನೂ ಒಂದು ಪಂದ್ಯ ಡೆಲ್ಲಿ ಔಪಚಾರಿಕವಾಗಿ ಆಡಬೇಕಿದೆ. ನಾಳೆ ಮಧ್ಯಹ್ನ 3:30ಕ್ಕೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕೊನೆಯ ಪಂದ್ಯ ಆಡಲಿದೆ. ತಂಡಲ್ಲಿ ಈ ಆವೃತ್ತಿಯಲ್ಲಿ ಬೆರಳೆಣಿಕೆಯ ಆಟಗಾರರು ಯಶಸ್ವಿಯಾಗಿದ್ದಾರೆ. ಆದರೆ, ನಿರೀಕ್ಷಿತ ಪ್ಲೇಯರ್​ಗಳು ವೈಫಲ್ಯತೆ ಅನುಭವಿಸಿದ್ದಾರೆ.

ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ನೀರಸ ಬ್ಯಾಟಿಂಗ್​ ಪ್ರದರ್ಶನ ಕಂಡು ಬಂತು. ಡೆಲ್ಲಿ ಕ್ಯಾಪಿಟಲ್ಸ್‌ನ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸುವಲ್ಲಿ ಕೊರತೆ ಅನುಭವಿಸಿದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ. ರಿಷಬ್ ಪಂತ್ ಗಾಯದ ಸಮಸ್ಯೆಯಿಂದ ಇಡೀ ಋತುವಿನಲ್ಲಿ ಹೊರಗುಳಿದಿದ್ದಾರೆ. ಅಂತೆಯೇ ಮಿಚೆಲ್ ಮಾರ್ಷ್ ಲಭ್ಯವಿಲ್ಲ ಮತ್ತು ರೋವ್ಮನ್ ಪೊವೆಲ್ ಫಾರ್ಮ್​ನಲ್ಲಿರಲಿಲ್ಲ. ಈ ಕಾರಣಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಬೌಲಿಂಗ್‌ನಲ್ಲಿಯೂ ನೋಕಿಯಾ ಹೊರತು ಪಡಿಸಿದರೆ ಮಿಕ್ಕ ಆಟಗಾರರು ಫಾರ್ಮ್​ನಲ್ಲಿ ಕಂಡು ಬರಲಿಲ್ಲ. ಈ ಕಾರಣಗಳಿಂದ ಡೆಲ್ಲಿ ತಂಡ ಸತತ ಸೋಲು ಎದುರಿಸಬೇಕಾಗಿದೆ.

ನಾಯಕ ಡೇವಿಡ್ ವಾರ್ನರ್ ಉತ್ತಮ ಬ್ಯಾಟಿಂಗ್: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ತಮ್ಮ ತಂಡಕ್ಕಾಗಿ ಉತ್ತಮ ಇನ್ನಿಂಗ್ಸ್​ಗಳನ್ನು ಕಟ್ಟಿದ್ದಾರೆ. ಅವರು ಇಲ್ಲಿಯವರೆಗೆ ಆಡಿದ 13 ಪಂದ್ಯಗಳಲ್ಲಿ 430 ರನ್ ಗಳಿಸುವ ಮೂಲಕ ತಮ್ಮ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಅವರು ತಮ್ಮ ನಾಯಕತ್ವಕ್ಕಾಗಿ ಟೀಕೆಗಳನ್ನು ಎದುರಿಸಬೇಕಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಅಕ್ಷರ್ ಪಟೇಲ್ 13 ಪಂದ್ಯಗಳಲ್ಲಿ ಬೌಲಿಂಗ್ ಮಾಡುವಾಗ 11 ವಿಕೆಟ್ ಪಡೆದು, 268 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದಾರೆ.

ಇಶಾನ್ ಶರ್ಮಾ ಅದ್ಭುತ ಪುನರಾಗಮನ: ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಇಶಾನ್ ಶರ್ಮಾ ಈ ಋತುವಿನಲ್ಲಿ ತಂಡಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು 8 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ, 8.24ರ ಎಕಾನಮಿಯಲ್ಲಿ ಬೌಲಿಂಗ್​ ಮಾಡಿದ್ದಾರೆ. ಇವರ ಜೊತೆಗೆ ಡೆಲ್ಲಿ ಕ್ಯಾಪಿಟಲ್‌ನ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಕುಲದೀಪ್ 13 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ.

ವಿದೇಶಿ ಆಟಗಾರರ ಸಾಮಾನ್ಯ ಪ್ರದರ್ಶನ: ಡೆಲ್ಲಿ ಕ್ಯಾಪಿಟಲ್ಸ್‌ನ ಆಲ್‌ರೌಂಡರ್ ವಿದೇಶಿ ಆಟಗಾರ ಮಿಚೆಲ್ ಮಾರ್ಷ್ ತಮ್ಮ ತಂಡಕ್ಕಾಗಿ 9 ಪಂದ್ಯಗಳಲ್ಲಿ 128 ರನ್ ಗಳಿಸಿದ್ದಾರೆ, ಅವರು 11 ವಿಕೆಟ್ ಪಡೆದಿದ್ದಾರೆ. ವಿದೇಶಿ ಬ್ಯಾಟ್ಸ್‌ಮನ್ ರೌಲಿ ರುಸ್ಸೋ 8 ಪಂದ್ಯಗಳಲ್ಲಿ 209 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಫೀಲ್ ಸಾಲ್ಟ್ ಬ್ಯಾಟಿಂಗ್‌ನಿಂದ ಡೆಲ್ಲಿ ಕೆಲವು ಪಂದ್ಯಗಳನ್ನು ಗೆದ್ದುಕೊಂಡಿತು. ಸಾಲ್ಟ್​​ 8 ಪಂದ್ಯಗಳಲ್ಲಿ 215 ರನ್ ಗಳಿಸಿದ್ದಾರೆ.

ಪೃಥ್ವಿ ಶಾ ನಿರಾಸೆ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರಿಂದ ಡೆಲ್ಲಿ ಕ್ಯಾಪಿಟಲ್ಸ್ ಹೆಚ್ಚಿನ ನಿರೀಕ್ಷೆ ಹೊಂದಿತ್ತು. ಆದರೆ, ಅವರು ತಮ್ಮ ನಿರೀಕ್ಷೆಗೆ ತಕ್ಕಂತೆ ರನ್ ಕಲೆಹಾಕಲಿಲ್ಲ. ಪೃಥ್ವಿ ಶಾ ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 7 ಪಂದ್ಯಗಳನ್ನು ಆಡಿ ಕೇವಲ 101 ರನ್ ಗಳಿಸಿದರು. ಮನೀಶ್ ಪಾಂಡೆ ಕೂಡ 10 ಪಂದ್ಯಗಳಲ್ಲಿ ಕೇವಲ 160 ರನ್ ಗಳಿಸಿದರಷ್ಟೇ.

ಇದನ್ನೂ ಓದಿ: PBKS vs RR: ಪಂಜಾಬ್​ ವಿರುದ್ಧ ಟಾಸ್ ಗೆದ್ದ​ ರಾಜಸ್ಥಾನ ಬೌಲಿಂಗ್ ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.