ಹೈದರಾಬಾದ್: ವಾಷಿಂಗ್ಟನ್ ಸುಂದರ್ ಅವರ ಆಲ್ರೌಂಡ್ ಪ್ರಯತ್ನದ ನಡುವೆ ಹೈದರಾಬಾದ್ ಸನ್ರೈಸರ್ ತಂಡವು 7 ರನ್ಗಳ ಸೋಲು ಅನುಭವಿಸಿತು. ಹೈದರಾಬಾದ್ ತಂಡ ಸತತ ಮೂರನೇ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತು.
ಆಫ್‌ಸ್ಪಿನ್ ಮೂಲಕ ದೆಹಲಿ ತಂಡದ ಪ್ರಮುಖ ಮೂರು ವಿಕೆಟ್ಗಳನ್ನು ಕಿತ್ತ ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್ (4-0-11-2) ಉತ್ತಮ ಬೌಲಿಂಗ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟಿಂಗ್ ದೌರ್ಬಲ್ಯವನ್ನು ಬಹಿರಂಗಪಡಿಸಿದರು. ಡೇವಿಡ್ ವಾರ್ನರ್ ಹೊರತು ಪಡಿಸಿ ಯಾರೂ ಉತ್ತಮ ಪ್ರದರ್ಶನ ತೋರಲಿಲ್ಲ. ಈ ಮೂಲಕ ದೆಹಲಿ ತಂಡವನ್ನು ಕೇವಲ 144 ರನ್‌ಗಳಿಗೆ ಕಟ್ಟಿ ಹಾಕಲಾಯಿತು. ಆದರೆ ಈ ಅಲ್ಪ ಮೊತ್ತವನ್ನು ಬೆನ್ನಟ್ಟುವಲ್ಲಿ ಸನ್ ರೈಸರ್ಸ್ ತಂಡ ಎಡವಿತು.
ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡ ಕೇವಲ 6 ವಿಕೆಟ್ ಕಳೆದುಕೊಂಡು 137 ರನ್ ಗಳನ್ನಷ್ಟೇ ಮಾಡಲು ಶಕ್ತವಾಯಿತು. ಈ ಮೂಲಕ 7 ರನ್ಗಳಿಂದ ದೆಹಲಿ ಎದುರು ಮಂಡಿಯೂರಿ, ನಿರಾಶೆ ಅನುಭವಿಸಿತು. ಒಂದು ಹಂತದಲ್ಲಿ 14.1 ಓವರ್‌ಗಳಲ್ಲಿ 85 ರನ್‌ಗಳಿಗೆ ಅರ್ಧದಷ್ಟು ವಿಕೆಟ್ ಕಳೆದುಕೊಂಡಿದ್ದ ಸನ್ ರೈಸರ್ಸ್ಗೆ ಹೆನ್ರಿಕ್ ಕ್ಲಾಸೆನ್ 31 ಮತ್ತು ವಾಷಿಂಗ್ಟನ್ ಸುಂದರ್ ಅವರ ಅಜೇಯ 24 ರನ್‌ಗಳು ಆಸರೆ ಆಯಿತು.
ಮುಕೇಶ್ ಕುಮಾರ್ ಅವರ ಕೊನೆಯ ಓವರ್‌ನಲ್ಲಿ ಸನ್ ರೈಸರ್ಸ್ಗೆ ಗೆಲ್ಲಲು ಕೇವಲ 13 ರನ್‌ಗಳು ಬೇಕಿದ್ದವು. ಈ ವೇಳೆ ಮುಕೇಶ್ ಉತ್ತಮ ಬೌಲ್ ಮಾಡುವ ಮೂಲಕ ಸನ್ರೈಸರ್ಸ್ ತಂಡವನ್ನು ಸೋಲು ಕಾಣುವಂತೆ ಮಾಡಿದರು. ಐದು ಪಂದ್ಯಗಳ ಸತತ ಸೋಲಿನೊಂದಿಗೆ ಋತು ಆರಂಭಿಸಿದ ಡೆಲ್ಲಿ, ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ದೆಹಲಿ ವಿರುದ್ಧ ಸೋತ ಸನ್ ರೈಸರ್ಸ್ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ತಲಾ ನಾಲ್ಕು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿ ನೆಲೆ ಕಂಡುಕೊಂಡಿವೆ. ಇನ್ನು 10 ಅಂಕಗಳನ್ನು ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಎಂಟು ಅಂಕ ಪಡೆದಿರುವ ರಾಜಸ್ಥಾನ ರಾಯಲ್ಸ್ 2ನೇ ಸ್ಥಾನದಲ್ಲಿದೆ.
IPL ಸ್ಕೋರ್‌ಬೋರ್ಡ್: SRH vs DC
ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ಹ್ಯಾರಿ ಬ್ರೂಕ್ ಬಿ ನೋರ್ಟ್ಜೆ 7, ಮಯಾಂಕ್ ಅಗರ್ವಾಲ್ ಸಿ ಅಮನ್ ಹಕೀಮ್ ಖಾನ್ ಬಿ ಪಟೇಲ್ 49,
ರಾಹುಲ್ ತ್ರಿಪಾಠಿ ಸಿ ಸಾಲ್ಟ್ ಬಿ ಶರ್ಮಾ 15, ಅಭಿಷೇಕ್ ಶರ್ಮಾ c&b ಕುಲದೀಪ್ 5, ಐಡೆನ್ ಮಾರ್ಕ್ರಾಮ್ ಬಿ ಪಟೇಲ್ 3, ಹೆನ್ರಿಚ್ ಕ್ಲಾಸೆನ್ ಸಿ ಅಮನ್ ಹಕೀಮ್ ಖಾನ್ ಬಿ ನೋರ್ಟ್ಜೆ 31, ವಾಷಿಂಗ್ಟನ್ ಸುಂದರ್ ಔಟಾಗದೆ 24, ಮಾರ್ಕೊ ಜಾನ್ಸನ್ ಔಟಾಗದೆ 1 ಒಟ್ಟು: 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 137 ರನ್.
ಬೌಲಿಂಗ್: ಇಶಾಂತ್ ಶರ್ಮಾ 3-0-18-1, ಅನ್ರಿಚ್ ನೋರ್ಟ್ಜೆ 4-0-33-2, ಮುಖೇಶ್ ಕುಮಾರ್ 3-0-27-0, ಅಕ್ಷರ್ ಪಟೇಲ್ 4-0-21-2, ಕುಲದೀಪ್ ಯಾದವ್ 4-0-22-1, ಮಿಚೆಲ್ ಮಾರ್ಷ್ 2-0-16-0.
ಇದನ್ನು ಓದಿ: ಪೃಥ್ವಿ ಶಾರನ್ನು ಕೈ ಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್: ಆದರೂ ಆರಂಭಿಕ ಜೊತೆಯಾಟದ ಕೊರತೆ ಎದುರಿಸಿದ ಡಿಸಿ