ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಶೇಷ ಪ್ರಶಸ್ತಿ ಪರಿಚಯ ಮಾಡಿದೆ. ತಂಡದ ಪರ ಅತಿ ಹೆಚ್ಚು ವರ್ಷಗಳ ಕಾಲ ಆಟವಾಡಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹಾಗೂ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಅವರು ಚೊಚ್ಚಲ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ. 'ಹಾಲ್ ಆಫ್ ಫೇಮ್' ಎಂಬ ಹೆಸರಿನಲ್ಲಿ ಪ್ರಶಸ್ತಿ ಪರಿಚಯ ಮಾಡಿರುವ ಆರ್ಸಿಬಿ, ಖಾಸಗಿ ಹೋಟೆಲ್ನಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ದಿಗ್ಗಜ ಆಟಗಾರರೊಂದಿಗೆ ಸಂವಾದ ಸಹ ನಡೆಸಿದರು.
-
Introducing the #RCB Hall of Fame: Match winners, Legends, Superstars, Heroes - you can go on and on about @ABdeVilliers17 and @henrygayle, two individuals who are responsible for taking IPL to where it is today. #PlayBold #WeAreChallengers #IPL2022 #ನಮ್ಮRCB #RCBHallOfFame pic.twitter.com/r7VUkxqEzP
— Royal Challengers Bangalore (@RCBTweets) May 17, 2022 " class="align-text-top noRightClick twitterSection" data="
">Introducing the #RCB Hall of Fame: Match winners, Legends, Superstars, Heroes - you can go on and on about @ABdeVilliers17 and @henrygayle, two individuals who are responsible for taking IPL to where it is today. #PlayBold #WeAreChallengers #IPL2022 #ನಮ್ಮRCB #RCBHallOfFame pic.twitter.com/r7VUkxqEzP
— Royal Challengers Bangalore (@RCBTweets) May 17, 2022Introducing the #RCB Hall of Fame: Match winners, Legends, Superstars, Heroes - you can go on and on about @ABdeVilliers17 and @henrygayle, two individuals who are responsible for taking IPL to where it is today. #PlayBold #WeAreChallengers #IPL2022 #ನಮ್ಮRCB #RCBHallOfFame pic.twitter.com/r7VUkxqEzP
— Royal Challengers Bangalore (@RCBTweets) May 17, 2022
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸದ್ಯ 5ನೇ ಸ್ಥಾನದಲ್ಲಿರುವ ಆರ್ಸಿಬಿ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿ, ಪ್ಲೇ-ಆಫ್ ರೇಸ್ಗೆ ಲಗ್ಗೆ ಹಾಕುವ ಇರಾದೆ ಇಟ್ಟುಕೊಂಡಿದೆ. ಈ ಮಧ್ಯೆ ಆರ್ಸಿಬಿ ಪರ ಸುಮಾರು 11 ವರ್ಷಗಳ ಕಾಲ(2011-2021) ಆಡಿರುವ ಎಬಿಡಿ, ಹಾಗೂ 7 ವರ್ಷಗಳ ಕಾಲ ಆಡಿರುವ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ಗೆ(2011-2017) ಹಾಲ್ ಆಫ್ ಫೇಮ್ ಚೊಚ್ಚಲ ಪ್ರಶಸ್ತಿ ಘೋಷಣೆ ಮಾಡಿ, ಗೌರವಿಸಲಾಗಿದೆ. ಆರ್ಸಿಬಿ ಪರ ಈ ಇಬ್ಬರು ಪ್ಲೇಯರ್ಸ್ ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ, ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಆಗಮಿಸಿದ ಲಕ್ಷ್ಯ ಸೇನ್: ಥಾಮಸ್ ಕಪ್ ಅನುಭವ ವಿವರಿಸಿದ ಬ್ಯಾಡ್ಮಿಂಟನ್ ತಾರೆ
ಮುಂಬೈನ ಖಾಸಗಿ ಹೋಟೆಲ್ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶೇಷವಾಗಿ ಗುಣಗಾನ ಮಾಡಿದ್ದು, ಅವರೊಂದಿಗಿನ ತಮ್ಮ ಒಡನಾಟ ಹಾಗೂ ವಿಶೇಷ ಅನುಭವ ಹಂಚಿಕೊಂಡರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕ್ರಿಕೆಟರ್ಸ್ ಆಡುವ ಮನೋಭಾವ ಮಾಡಿರುವ ಶ್ರೇಯ ನಿಮಗೆ ಸಲ್ಲುತ್ತದೆ. ಈ ಹಿಂದಿನ ಐಪಿಎಲ್ಗೂ ಸದ್ಯದ ಪರಿಸ್ಥಿತಿಗೂ ತುಂಬಾ ಬದಲಾವಣೆಗಳಾಗಿದ್ದು, ಅದಕ್ಕೆ ಮುಖ್ಯ ಕಾರಣ ನೀವು ಬೀರಿರುವ ಪ್ರಭಾವ ಎಂದು ಇಬ್ಬರು ದಿಗ್ಗಜಗಳ ಬಗ್ಗೆ ಕೊಹ್ಲಿ ಗುಣಗಾನ ಮಾಡಿದರು.
ಕಾರ್ಯಕ್ರಮದ ವೇಳೆ ಎಬಿಡಿ ಹಾಗೂ ಗೇಲ್ ವಿಡಿಯೋ ಕಾಲ್ ಮೂಲಕ ಆರ್ಸಿಬಿ ಎಲ್ಲ ಪ್ಲೇಯರ್ಸ್ ಜೊತೆ ಸಂಭಾಷಣೆ ನಡೆಸಿದರು. ಜೊತೆಗೆ ತಮ್ಮ ವಿಶೇಷ ಅನುಭವ ಹಂಚಿಕೊಂಡರು. ಈ ವೇಳೆ ಗೇಲ್ ಮಾತನಾಡಿ, ಆರ್ಸಿಬಿ ತಂಡ ಯಾವಾಗಲೂ ನನಗೆ ಫೇವರೆಟ್, ಅದು ನನ್ನ ಹೃದಯದಲ್ಲಿರುತ್ತದೆ ಎಂದರು. ಈ ಪ್ಲೇಯರ್ಸ್ಗೆ ಮುಂದಿನ ವರ್ಷ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 'ಹಾಲ್ ಆಫ್ ಫೇಮ್' ಪ್ರಶಸ್ತಿ ನೀಡಿ, ಗೌರವಿಸಲು ನಿರ್ಧಾರ ಕೈಗೊಳ್ಳಲಾಗಿದೆ.