ಅಹಮದಾಬಾದ್: 2023 ರ ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ಗೆ ಸೋಲುಣಿಸಿದ ಚೆನ್ನೈ ಸೂಪರ್‌ಕಿಂಗ್ಸ್ (ಸಿಎಸ್‌ಕೆ) 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಮಿಳುನಾಡು ಸಿಎಂ ಸ್ಟಾಲಿನ್, ಗೂಗಲ್ ಸಿಇಒ ಸುಂದರ್ ಪಿಚೈ, ಬಾಲಿವುಡ್ ನಟ ರಣವೀರ್ ಸಿಂಗ್, ನಟಿ ತ್ರಿಶಾ, ವರಲಕ್ಷ್ಮಿ ಶರತ್‌ಕುಮಾರ್, ಕೀರ್ತಿ ಸುರೇಶ್, ನಟ ವಿಕ್ಕಿ ಕೌಶಲ್, ಅನಿರುದ್ಧ್ ರವಿಚಂದರ್ ಸೇರಿದಂತೆ ಹಲವಾರು ಚಿತ್ರರಂಗದ ತಾರೆಯರು ತಂಡದ ಗೆಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಸಿಎಸ್‌ಕೆ ಅನ್ನು GOAT (ಸಾರ್ವಕಾಲಿಕ ಶ್ರೇಷ್ಠ) ಎಂದು ಕರೆದಿದ್ದಾರೆ. ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.
-
Congrats to the yellow brigade of #CSK on their 5th IPL Trophy under the man with a plan for every situation @msdhoni!
— M.K.Stalin (@mkstalin) May 29, 2023 " class="align-text-top noRightClick twitterSection" data="
This is cricket at its very best and Jadeja who held his nerve in the face of adversity has sealed a historic victory for CSK. #IPLFinals2023 pic.twitter.com/vD6YjD3o1l
">Congrats to the yellow brigade of #CSK on their 5th IPL Trophy under the man with a plan for every situation @msdhoni!
— M.K.Stalin (@mkstalin) May 29, 2023
This is cricket at its very best and Jadeja who held his nerve in the face of adversity has sealed a historic victory for CSK. #IPLFinals2023 pic.twitter.com/vD6YjD3o1lCongrats to the yellow brigade of #CSK on their 5th IPL Trophy under the man with a plan for every situation @msdhoni!
— M.K.Stalin (@mkstalin) May 29, 2023
This is cricket at its very best and Jadeja who held his nerve in the face of adversity has sealed a historic victory for CSK. #IPLFinals2023 pic.twitter.com/vD6YjD3o1l
ಐತಿಹಾಸಿಕ ಜಯ- ತಮಿಳುನಾಡು ಸಿಎಂ: "ಇದು ಅತ್ಯುತ್ತಮ ಕ್ರಿಕೆಟ್ ಪಂದ್ಯ. ಪ್ರತಿಕೂಲ ಪರಿಸ್ಥಿತಿಯಲ್ಲಿ ತನ್ನ ಗುರಿ ಬೆನ್ನಟ್ಟಿದ ಜಡೇಜಾ ಸಿಎಸ್‌ಕೆಗೆ ಐತಿಹಾಸಿಕ ಜಯವನ್ನು ಮುಡಿಗೇರಿಸಿದ್ದಾರೆ. ತಂಡಕ್ಕೆ ಅಭಿನಂದನೆಗಳು" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಐಪಿಎಲ್‌ನಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸಲು ದೇಶಾದ್ಯಂತದ ಕ್ರಿಕೆಟ್ ಸ್ಟೇಡಿಯಂಗಳಿಗೆ ಆಗಮಿಸಿದ್ದರು. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಧನುಷ್, ತ್ರಿಶಾ ಮತ್ತು ಶಿವಕಾರ್ತಿಕೇಯನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪಂದ್ಯವನ್ನು ವೀಕ್ಷಿಸಿದ್ದರು.
-
Some final that one! Great #TATAIPL as always and congrats to CSK! and GT will be back stronger next year! https://t.co/R75CJeTfgx
— Sundar Pichai (@sundarpichai) May 29, 2023 " class="align-text-top noRightClick twitterSection" data="
">Some final that one! Great #TATAIPL as always and congrats to CSK! and GT will be back stronger next year! https://t.co/R75CJeTfgx
— Sundar Pichai (@sundarpichai) May 29, 2023Some final that one! Great #TATAIPL as always and congrats to CSK! and GT will be back stronger next year! https://t.co/R75CJeTfgx
— Sundar Pichai (@sundarpichai) May 29, 2023
ರಣವೀರ್ ಸಿಂಗ್ ಅವರು ಸಿಎಸ್‌ಕೆ, ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ಅವರನ್ನು ಹುರಿದುಂಬಿಸುವ ಸರಣಿ ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ.
-
Hardik’s talismanic leadership 💯 @hardikpandya7
— Ranveer Singh (@RanveerOfficial) May 29, 2023 " class="align-text-top noRightClick twitterSection" data="
The fight and might of this team✊🏽 @gujarat_titans
Vanquished but gallant all the way! ⚔️ #AavaDe #IPLOnStar @StarSportsIndia #IPLFinals #IPL2023Final #HardikPandya #CSKvsGT @IPL pic.twitter.com/HGlsJOQeFV
">Hardik’s talismanic leadership 💯 @hardikpandya7
— Ranveer Singh (@RanveerOfficial) May 29, 2023
The fight and might of this team✊🏽 @gujarat_titans
Vanquished but gallant all the way! ⚔️ #AavaDe #IPLOnStar @StarSportsIndia #IPLFinals #IPL2023Final #HardikPandya #CSKvsGT @IPL pic.twitter.com/HGlsJOQeFVHardik’s talismanic leadership 💯 @hardikpandya7
— Ranveer Singh (@RanveerOfficial) May 29, 2023
The fight and might of this team✊🏽 @gujarat_titans
Vanquished but gallant all the way! ⚔️ #AavaDe #IPLOnStar @StarSportsIndia #IPLFinals #IPL2023Final #HardikPandya #CSKvsGT @IPL pic.twitter.com/HGlsJOQeFV
ಮೂಕವಿಸ್ಮಿತನಾಗಿದ್ದೇನೆ- ತ್ರಿಶಾ: ನಟಿ ತ್ರಿಶಾ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ "ಸಿಎಸ್‌ಕೆಗೆ ನಾನು ಮೂಕವಿಸ್ಮಿತನಾಗಿದ್ದೇನೆ. Yasssssss yaaaasssss yassssss!!!! (sic)" ಎಂದು ಬರೆದಿದ್ದಾರೆ. ಸಿಎಸ್‌ಕೆ ಗೆಲುವಿನ ನಂತರ ವರಲಕ್ಷ್ಮಿ ಶರತ್‌ಕುಮಾರ್, ಕೀರ್ತಿ ಸುರೇಶ್ ಮತ್ತು ಅನಿರುದ್ಧ ಭಾವಪರವಶರಾಗಿದ್ದಾರೆ.
ರೋಮಾಂಚನಕಾರಿ ರಾತ್ರಿ- ನಟಿ ಕೀರ್ತಿ ಸುರೇಶ್: ನಟಿ ಕೀರ್ತಿ ಸುರೇಶ್ ಅವರು ವಿಜೇತ ಕ್ಷಣದ ತುಣುಕುಗಳನ್ನು ಹಂಚಿಕೊಳ್ಳುವ ಮೂಲಕ ತಂಡವನ್ನು ಅಭಿನಂದಿಸಿದರು. "ಏನು ಅದ್ಭುತ ಪಂದ್ಯ. ಜಡೇಜಾ ಅದನ್ನು ತಮ್ಮದೇ ಶೈಲಿಯೊಂದಿಗೆ ಕೊನೆಗೊಳಿಸಿದರು. ಅಭಿನಂದನೆಗಳು. ಇದು ಒಂದು ರೋಮಾಂಚಕಾರಿ ರಾತ್ರಿ" ಎಂದು ಟ್ವೀಟ್ ಮಾಡಿದ್ದಾರೆ.
ಇದು ಬೆಸ್ಟ್ ಫಿನಾಲೆ- ನಟ ರಿತೇಶ್ ದೇಶ್‌ಮುಖ್: ಐಶ್ವರ್ಯಾ ರಜನಿಕಾಂತ್, ವಿಘ್ನೇಶ್ ಶಿವನ್, ನಿರ್ದೇಶಕ ಅಜಯ್ ಜ್ಞಾನಮುತ್ತು ಮತ್ತು ಇತರ ಹಲವಾರು ಸೆಲೆಬ್ರಿಟಿಗಳು ಐಪಿಎಲ್‌ನ ಫೈನಲ್ ಪಂದ್ಯ ವೀಕ್ಷಣೆಗಾಗಿ ಅಹಮದಾಬಾದ್‌ಗೆ ತೆರಳಿದ್ದರು. "ಅಭಿನಂದನೆಗಳು @ChennaiIPL. ನಿಜವಾದ ಚಾಂಪಿಯನ್ಸ್ ಇನ್ನಿಂಗ್ಸ್. ವಾಟ್ ಎ ಟೀಮ್! ನಮಗೆ ಕ್ರಿಕೆಟ್ ಅಭಿಮಾನಿಗಳಿಗೆ ಇಂತಹ ಟ್ರೀಟ್. ಇದು ಬೆಸ್ಟ್ ಫಿನಾಲೆ ಎಂದು ನಟ ರಿತೇಶ್ ದೇಶ್‌ಮುಖ್ ಟ್ವೀಟ್ ಮಾಡಿದ್ದಾರೆ.
ನಟ ಸೋನು ಸೂದ್ ಎಂ.ಎಸ್.ಧೋನಿ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. "ಅದ್ಭುತ ವಿಜಯಕ್ಕಾಗಿ ಅಭಿನಂದನೆಗಳು ಮೇರ ಭಾಯಿ" ಎಂದು ಟ್ವೀಟ್ ಮಾಡಿದ್ದಾರೆ. ಚಾಂಪಿಯನ್ ಚೆನ್ನೈ ತಂಡಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಗೆಲುವನ್ನು ಧೋನಿಗೆ ಅರ್ಪಿಸಿದ ಜಡೇಜಾ: "ನನ್ನ ತವರಿನ ಪ್ರೇಕ್ಷಕರ ಮುಂದೆ ನನ್ನ 5ನೇ ಪ್ರಶಸ್ತಿಯನ್ನು ಗೆದ್ದಿರುವುದು ಅದ್ಭುತವಾಗಿದೆ. ನಾನು ಗುಜರಾತ್‌ನವನು. ಇದು ವಿಶೇಷ ಭಾವನೆಯಾಗಿದೆ. ತಡರಾತ್ರಿಯವರೆಗೆ ನಮ್ಮನ್ನು ಬೆಂಬಲಿಸಲು ಬಂದ ಸಿಎಸ್‌ಕೆ ಅಭಿಮಾನಿಗಳಿಗೆ ನನ್ನ ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ಈ ಗೆಲುವನ್ನು ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಅವರಿಗೆ ಅರ್ಪಿಸಲು ನಾನು ಬಯಸುತ್ತೇನೆ" ಎಂದಿದ್ದಾರೆ.
ಇದನ್ನೂ ಓದಿ: ಧೋನಿ ಮಿಂಚಿನ ವೇಗದ ಸ್ಟಂಪಿಂಗ್; ನಿಬ್ಬೆರಗಾದ ಆಟಗಾರರು!- ವಿಡಿಯೋ ನೋಡಿ