ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಯುಎಇ ಲೀಗ್ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಗುರುವಾರದಿಂದ ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಸಿದ್ಧತೆ ಆರಂಭಿಸಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶುಕ್ರವಾರದಿಂದ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ತಮ್ಮ ಸಿದ್ಧತೆಗಳನ್ನು ಆರಂಭಿಸಲಿದೆ.
"ಎರಡೂ ತಂಡಗಳು ಕ್ವಾರಂಟೈ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ ಮತ್ತು ಐಪಿಎಲ್‌ಗಾಗಿ ಸಿದ್ಧತೆಗಳನ್ನು ಆರಂಭಿಸಲು ಸಜ್ಜಾಗಿವೆ. ಸಿಎಸ್‌ಕೆ ಇಂದು ರಾತ್ರಿ ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಯನ್ನು ಆರಂಭಿಸಿದ್ರೆ, ಎಂಐ ಆಟಗಾರರು ಶುಕ್ರವಾರದಿಂದ ತಮ್ಮ ತರಬೇತಿಯನ್ನು ಶೇಖ್ ಜಾಯೇದ್ ಕ್ರೀಡಾಂಗಣದೊಳಗಿನ ತರಬೇತಿ ಕೇಂದ್ರದಲ್ಲಿ ಆರಂಭಿಸಲಿದ್ದಾರೆ ಎಂದು "ಮೂಲಗಳು ತಿಳಿಸಿವೆ.
ಕಳೆದ ವರ್ಷದ ರನ್ನರ್ಸ್ ಅಪ್ ಆದ ದೆಹಲಿ ಕ್ಯಾಪಿಟಲ್ಸ್ (ಡಿಸಿ) ಯುಎಇಗೆ ಶನಿವಾರ ಹೊರಡಲಿದೆ. ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಈಗಾಗಲೇ ಫಿಟ್ನೆಸ್ ತರಬೇತುದಾರನೊಂದಿಗೆ ಯುಎಇಯಲ್ಲಿದ್ದಾರೆ. "ಐಪಿಎಲ್ 2021 ಕ್ಕಾಗಿ ದೆಹಲಿ ಕ್ಯಾಪಿಟಲ್ಸ್ ಯುಎಇಗೆ ಶನಿವಾರ ಮುಂಜಾನೆ ಹೊರಡುತ್ತದೆ. ತಂಡವು ದೆಹಲಿಯಿಂದ ದೇಶೀಯ ಆಟಗಾರರು ಮತ್ತು ಅಧಿಕಾರಿಗಳೊಂದಿಗೆ ಹೊರಡಲಿದೆ.
ಕ್ವಾರಂಟೈನ್‌ನಲ್ಲಿ ದೆಹಲಿ ಆಟಗಾರರು
ಭಾರತದ ಆಟಗಾರರು ಈಗಾಗಲೇ ದೆಹಲಿಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು ಅವರನ್ನು ಯುಎಇಯಲ್ಲಿ ಒಂದು ವಾರ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ಭಾರತ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನ ಉಳಿದ ಆಟಗಾರರು ತಮ್ಮ ಅಂತಾರಾಷ್ಟ್ರೀಯ ಪ್ರಕ್ರಿಯೆಗಳೆಲ್ಲವೂ ಮುಗಿದ ನಂತರ ತಂಡವನ್ನು ಸೇರುತ್ತಾರೆ. ಕ್ವಾರಂಟೈನ್ ನಂತರ ಅವರ ತರಬೇತಿ ಆರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ವರ್ಷ ಮೇ ತಿಂಗಳಲ್ಲಿ ಮುಂದೂಡಲ್ಪಟ್ಟಿದ್ದ, 14ನೇ ಐಪಿಎಲ್ ಆವೃತ್ತಿ ಸೆಪ್ಟೆಂಬರ್ 19 ರಂದು ದುಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಬ್ಲಾಕ್‌ಬಸ್ಟರ್ ಸೆಣಸಾಟದೊಂದಿಗೆ ಪುನರಾರಂಭಗೊಳ್ಳಲಿದೆ.
ಅಬುಧಾಬಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹೋರಾಡಲಿದೆ. ಶಾರ್ಜಾ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 24 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಒಟ್ಟಾರೆಯಾಗಿ, 13 ಪಂದ್ಯಗಳು ದುಬೈನಲ್ಲಿ, 10 ಶಾರ್ಜಾದಲ್ಲಿ ಮತ್ತು 8 ಪಂದ್ಯಗಳು ಅಬುಧಾಬಿಯಲ್ಲಿ ನಡೆಯಲಿದೆ.
ಇನ್ನು ಲೀಗ್‌ನ ಸುಗಮ ಕಾರ್ಯನಿರ್ವಹಣೆಗಾಗಿ ಬಿಸಿಸಿಐ 46 ಪುಟಗಳ ಆರೋಗ್ಯ ಸಲಹೆಯನ್ನು ನೀಡಿದೆ, ಇದು ಐಪಿಎಲ್‌ಗೆ ಸಂಬಂಧಿಸಿದ ಪ್ರತಿಯೊಬ್ಬರೂ ಅನುಸರಿಸಬೇಕಾದ ಎಲ್ಲಾ ಸೂಚನೆಗಳನ್ನು ನೀಡುತ್ತದೆ.