ಮುಂಬೈ: ನಿನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದಿರಬಹುದು. ಆದರೆ, ಪಂದ್ಯದಲ್ಲಿ ಮನಸೆಳೆದಿದ್ದು ಮಾತ್ರ 21 ವರ್ಷದ ಯುವ ಆಟಗಾರ ಯಶಸ್ವಿ ಜೈಸ್ವಾಲ್ರ ಸೊಗಸಾದ ಶತಕ. ತಂಡ ಗಳಿಸಿದ ರನ್ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜೈಸ್ವಾಲ್ ಹೆಸರಲ್ಲಿತ್ತು. ಇಂತಹ ಉತ್ಸಾಹಿ ತರುಣ ಈ ಹಿಂದೆ ಪಾನಿಪೂರಿ ಮಾರಾಟ ಮಾಡುತ್ತಿದ್ದರು ಎಂಬುದು ಯಾರಿಗೂ ಗೊತ್ತಿಲ್ಲದ ಸತ್ಯ.
ನಿಜ!. ಯಶಸ್ವಿ ಜೈಸ್ವಾಲ್ ಇಂದು ಯಶಸ್ವಿ ಕ್ರಿಕೆಟಿಗನಾಗಿ ಬೆಳೆದಿದ್ದರೆ, ಅದರ ಹಿಂದೆ ಅದೆಷ್ಟೋ ಹೋರಾಟವಿದೆ. ಉತ್ತರ ಪ್ರದೇಶದ ಮೂಲದ ಆಟಗಾರ ಮುಂಬೈಗೆ ಬಂದು ಕ್ರಿಕೆಟ್ ತರಬೇತಿ ಪಡೆಯಲು ನಡೆಸಿದ ಪರದಾಟ, ಜೀವನ ನಿರ್ವಹಣೆ ಮಾಡಿದ ಕೆಲಸಗಳು ಸ್ಫೂರ್ತಿದಾಯಕವಾಗಿದೆ.
-
From selling Panipuri to scoring 100 in IPL... What a dream journey Yashasvi Jaiswal has gone through ! #MIvsRR pic.twitter.com/7mKBEPFtgn
— Shubman Gang (@ShubmanGang) April 30, 2023 " class="align-text-top noRightClick twitterSection" data="
">From selling Panipuri to scoring 100 in IPL... What a dream journey Yashasvi Jaiswal has gone through ! #MIvsRR pic.twitter.com/7mKBEPFtgn
— Shubman Gang (@ShubmanGang) April 30, 2023From selling Panipuri to scoring 100 in IPL... What a dream journey Yashasvi Jaiswal has gone through ! #MIvsRR pic.twitter.com/7mKBEPFtgn
— Shubman Gang (@ShubmanGang) April 30, 2023
ಜೈಸ್ವಾಲ್ರ ಆ ದಿನಗಳು...: ಕ್ರಿಕೆಟ್‌ನಲ್ಲಿ ಬೆಳೆಯಬೇಕೆಂಬ ಜೈಸ್ವಾಲ್ ಕನಸು ಅದೆಷ್ಟು ಅದಮ್ಯವಾಗಿತ್ತೆಂದರೆ, ಹುಟ್ಟೂರಾದ ಉತ್ತರ ಪ್ರದೇಶದ ಭದೋಹಿ ತೊರೆದು ಮುಂಬೈಗೆ ವಲಸೆ ಬಂದರು. ಬಳಿಕ ಆಜಾದ್ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ಶುರು ಮಾಡಿದರು. ಜೀವನಕ್ಕಾಗಿ ಕಲ್ಬಾದೇವಿ ಪ್ರದೇಶದ ಕೆಲ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲ ದಿನಗಳ ಬಳಿಕ ಅಲ್ಲಿಂದ ಹೊರಬಿದ್ದ ಜೈಸ್ವಾಲ್ ಆಜಾದ್ ಮೈದಾನದ ಹೊರಗೆ ಪಾನಿಪೂರಿ ಮಾರಾಟ ಶುರು ಮಾಡಿದ್ದರು. ಕ್ರಿಕೆಟ್ ಅಭ್ಯಾಸದ ವಿರಾಮದ ವೇಳೆ ಪಾನಿಪೂರಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಪ್ರತ್ಯೇಕ ನಿವಾಸವಿಲ್ಲದೇ, ಜೈಸ್ವಾಲ್ ಆಜಾದ್ ಮೈದಾನದ ಸಿಬ್ಬಂದಿಯ ಜೊತೆಗೆ ಕ್ರೀಡಾಂಗಣದಲ್ಲೇ ಟೆಂಟ್ನಲ್ಲಿ ಉಳಿದುಕೊಂಡಿದ್ದರು.
ಜ್ವಾಲಾಸಿಂಗ್ ಗರಡಿ ಸೇರಿದ ಕ್ರಿಕೆಟಿಗ: ಆಜಾದ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ಜೈಸ್ವಾಲ್ ಅವರ ಪ್ರತಿಭೆಯನ್ನು ಕೋಚ್ ಜ್ವಾಲಾ ಸಿಂಗ್ ಗುರುತಿಸಿದರು. ಆತನಲ್ಲಿದ್ದ ಕ್ರಿಕೆಟ್ ಹಸಿವನ್ನು ಕಂಡ ಸಿಂಗ್ ಅವರು, ಆತನಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು. ಶಾಲಾ ಹಂತದ ಕ್ರಿಕೆಟ್ನ ಗಿಲ್ಸ್ ಶೀಲ್ಡ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದರು. ಪಂದ್ಯದಲ್ಲಿ ಔಟಾಗದೇ 319 ರನ್ ಗಳಿಸಿದ್ದರು. ಇದು ಆತನ ಕ್ರಿಕೆಟ್ ಬದುಕನ್ನು ಬದಲಿಸಿತು.
ಇದರಿಂದ ಮುಂಬೈ ಅಂಡರ್ 16 ತಂಡಕ್ಕೆ ಆಯ್ಕೆಯಾಗಲು ಕಾರಣವಾಯಿತು. ನಂತರ ಅಂಡರ್ 19 ತಂಡಕ್ಕೆ ಬಡ್ತಿ ಪಡೆದರು. 2018ರ ಅಂಡರ್ 19 ಏಷ್ಯಾ ಕಪ್‌ನಲ್ಲಿ ಸ್ಥಾನ ಪಡೆದು ಅತಿ ಹೆಚ್ಚು ರನ್ ಗಳಿಸಿ, ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದರು. 2018/19 ಋತುವಿನ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಆಡಿದರು.
ಮುಂಬೈ ಪರವಾಗಿ ಆಡಿದ 15 ಪಂದ್ಯಗಳಲ್ಲಿ 80.21 ರ ಸರಾಸರಿಯಲ್ಲಿ 1845 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9 ಶತಕ ಮತ್ತು 2 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 50 ಓವರ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಯ ಜೊತೆಗೆ 2020ರ ಅಂಡರ್ 19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಹೌದು. ಭಾರತ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತರೂ, ಜೈಸ್ವಾಲ್ ಆ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 400 ರನ್ ಗಳಿಸಿ ಮಿಂಚಿದ್ದರು.
-
Azad Maidan se Wankhede. Apna time aagaya, Jaiswal! 💗 pic.twitter.com/H2Yqupeiu6
— Rajasthan Royals (@rajasthanroyals) April 30, 2023 " class="align-text-top noRightClick twitterSection" data="
">Azad Maidan se Wankhede. Apna time aagaya, Jaiswal! 💗 pic.twitter.com/H2Yqupeiu6
— Rajasthan Royals (@rajasthanroyals) April 30, 2023Azad Maidan se Wankhede. Apna time aagaya, Jaiswal! 💗 pic.twitter.com/H2Yqupeiu6
— Rajasthan Royals (@rajasthanroyals) April 30, 2023
ಭಾನುವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಶತಕ ಸಾಧನೆ ಮಾಡುವ ಮೂಲಕ ಆರ್ಸಿಬಿಯ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟರು. 9 ಇನ್ನಿಂಗ್ಸ್‌ಗಳಲ್ಲಿ 428 ರನ್ ಗಳಿಸಿದ್ದಾರೆ.
ಇದನ್ನೂ ಓದಿ: 16 ಬೌಂಡರಿ, 8 ಸಿಕ್ಸರ್! 1000ನೇ ಐಪಿಎಲ್ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ ಯಶಸ್ವಿ ಜೈಸ್ವಾಲ್!