ETV Bharat / sports

ನಾಯಕ ರಾಹುಲ್ಲೊಂದಿಗಿನ ಜೊತೆಯಾಟವೇ ಗೆಲುವಿಗೆ ಕಾರಣ: ಮಯಾಂಕ್​ ಅಗರ್ವಾಲ್ - ಮಾಯಾಂಕ್ ಅಗರ್ವಾಲ್

ಕೆಕೆಆರ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ 5 ವಿಕೆಟ್‌ಗಳ ರೋಚಕ ಗೆಲವು ಸಾಧಿಸಿದೆ. ಈ ಗೆಲುವಿಗೆ ನಾಯಕ ರಾಹುಲ್​ ಪ್ರಮುಖ ಕೊಡುಗೆ ನೀಡಿದ್ದಾರೆ. ಆರಂಭಿಕರಾಗಿ ಮೈದಾನಕ್ಕಿಳಿದ ಮಯಾಂಕ್ ಹಾಗೂ ರಾಹುಲ್ ಉತ್ತಮ ಜೊತೆಯಾಟ ನೀಡಿ ತಂಡದ ಗೆಲುವಿಗೆ ಕಾರಣರಾದರು.

-kl-rahul-Mayank
ಮಾಯಾಂಕ ಅಗರ್ವಾಲ್, ಕೆ.ಎಲ್ ರಾಹುಲ್
author img

By

Published : Oct 2, 2021, 12:58 PM IST

ದುಬೈ: ಐಪಿಎಲ್​ ದ್ವಿತಿಯಾರ್ಧದಲ್ಲಿ ಪಂಜಾಬ್ ಕಿಂಗ್ಸ್​ ತಂಡ ಹೇಳುವಂತ ಪ್ರದರ್ಶನ ತೋರದೇ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಸತತ ಸೋಲು ಕಾಣುತ್ತಿದ್ದ ತಂಡ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.

ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ಮಯಾಂಕ್ ಅಗರ್ವಾಲ್, ಓಪನಿಂಗ್ ಬ್ಯಾಟ್ಸ್​ಮನ್​ಗಳ ಉತ್ತಮ ಜೊತೆಯಾಟ ಇಡೀ ಪಂದ್ಯಕ್ಕೆ ಅಗತ್ಯವಾದ ಅಂಗವಾಗಿದೆ.

ನಾನೊಬ್ಬ ಆರಂಭಿಕ ಆಟಗಾರನಾಗಿ ಎದುರಾಳಿ ತಂಡದ ಮೇಲೆ ಹೆಚ್ಚಿನ ಒತ್ತಡ ಹೇರಲು ಬಯಸುತ್ತೇನೆ. ಮೊದಲ 6 ಓವರ್​ನಲ್ಲಿ ಹೇಗೆ ಆಡಬೇಕು ಎನ್ನುವುದನ್ನು ತಲೆಯಲ್ಲಿ ಲೆಕ್ಕಚಾರ ಹಾಕಿಕೊಳ್ಳಬೇಕು. ಆರಂಭಿಕ 6 ಓವರ್​ನಲ್ಲಿ ನಾವು 50ರಿಂದ 55 ರನ್ ಗಳಿಸಿದರೆ ದೊಡ್ಡ ಮೊತ್ತ ಚೇಸಿಂಗ್ ಮಾಡಲು ಸಾಧ್ಯ ಎಂದಿದ್ದಾರೆ.

ನಮ್ಮ ನಡುವೆ ಉತ್ತಮ ಹೊಂದಾಣಿಕೆ ಇದೆ

ನಾಯಕ ಕೆ.ಎಲ್ ರಾಹುಲ್ ಜೊತೆಗಿನ ಆಟದ ಕುರಿತು ಪ್ರತಿಕ್ರಿಯಿಸಿ, ನಾವು ನಮ್ಮ ನಡುವೆ ಉತ್ತಮ ಹೊಂದಾಣಿಕೆ ಹೊಂದಿದ್ದೇವೆ. ಬಾಲ್​ನೊಂದಿಗೆ ಒಳ್ಳೆಯ ಟೈಮಿಂಗ್ ಕಾಯ್ದುಕೊಂಡರೆ ನಾವು ಒಳ್ಳೆಯ ರನ್ ಕಲೆ ಹಾಕುತ್ತೇವೆ. ರಾಹುಲ್ ಜೊತೆ ಒಳ್ಳೆಯ ಹೊಂದಾಣಿಕೆಯ ಆಟದಿಂದ ಈ ಮೊತ್ತ ಕಲೆಹಾಕಲು ಕಾರಣವಾಯಿತು ಎಂದಿದ್ದಾರೆ.

ಮಯಾಂಕ್​ 27 ಬಾಲ್​ ಎದುರಿಸಿ 40 ರನ್ ದಾಖಲಿಸಿದ್ದರು. ಇದರ ಜೊತೆ ಕೆ.ಎಲ್ ರಾಹುಲ್ 55 ಬಾಲ್​ನಲ್ಲಿ 67 ರನ್ ದಾಖಲಿಸಿ ತಂಡ ಜಯಗಳಿಸುವಲ್ಲಿ ಪ್ರಮುಖರಾದರು. ಹೀಗಾಗಿ ಮೂರು ಎಸೆತ ಬಾಕಿ ಇರುವಾಗಲೇ 168ರನ್​ ಗಳಿಸಿ ಕೆಕೆಆರ್ ತಂಡ ನೀಡಿದ್ದ ಗುರಿ ತಲುಪಿದ್ದರು.

ಸದ್ಯ ಟೂರ್ನಿಯಲ್ಲಿ ಪಂಜಾಬ್ ಆಡಿರುವ 12 ಪಂದ್ಯದಲ್ಲಿ 5 ಪಂದ್ಯ ಗೆದ್ದು 7ರಲ್ಲಿ ಸೋಲನುಭವಿಸಿದೆ. ಒಟ್ಟು 10 ಅಂಕ ಪಡೆದು ಪ್ಲೇ ಆಫ್​ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.