ಶಾರ್ಜಾ (ದುಬೈ): ಐಪಿಎಲ್ ಸೀಸನ್ 14ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಇಂದು ಸಂಜೆ ಕಣಕ್ಕಿಳಿಯಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಜಯಗಳಿಸುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿರ್ಣಾಯಕ ಪಂದ್ಯವಾಡಲಿದೆ. ಆ ಬಳಿಕ ಫೈನಲ್ನಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ.
ಕೊಹ್ಲಿ ನಾಯಕತ್ವದಲ್ಲಿ ಕೊನೆಯ ಐಪಿಎಲ್ ಟೂರ್ನಿ ಇದಾಗಿದ್ದು, ನಿರೀಕ್ಷೆಯಂತೆ ಪ್ರಶಸ್ತಿ ಗೆಲ್ಲುವ ತಂಡಗಳ ಸಾಲಿನಲ್ಲಿ ಆರ್‌ಸಿಬಿ ಸಹ ಮುಂಚೂಣಿಯಲ್ಲಿದೆ. ಆದರೆ 2 ಬಾರಿ ಐಪಿಎಲ್ ಟೈಟಲ್ ಗೆದ್ದಿರುವ ಕೆಕೆಆರ್ ಈ ಬಾರಿಯೂ ಫೈನಲ್ ಪ್ರವೇಶಿಸಿ ಮೂರನೇ ಬಾರಿ ಪ್ರಶಸ್ತಿ ಪಡೆಯುವ ಹಂಬಲದಲ್ಲಿದೆ.
-
Let’s make this a night to remember in Sharjah! 🤩💪🏻
— Royal Challengers Bangalore (@RCBTweets) October 11, 2021 " class="align-text-top noRightClick twitterSection" data="
It’s MATCH DAY, 12th Man Army! 🥳#PlayBold #WeAreChallengers #IPL2021 #RCBvKKR #PlayOffs pic.twitter.com/vdNzG1EtYi
">Let’s make this a night to remember in Sharjah! 🤩💪🏻
— Royal Challengers Bangalore (@RCBTweets) October 11, 2021
It’s MATCH DAY, 12th Man Army! 🥳#PlayBold #WeAreChallengers #IPL2021 #RCBvKKR #PlayOffs pic.twitter.com/vdNzG1EtYiLet’s make this a night to remember in Sharjah! 🤩💪🏻
— Royal Challengers Bangalore (@RCBTweets) October 11, 2021
It’s MATCH DAY, 12th Man Army! 🥳#PlayBold #WeAreChallengers #IPL2021 #RCBvKKR #PlayOffs pic.twitter.com/vdNzG1EtYi
ಆದರೆ, ಕೋಲ್ಕತ್ತಾ ತಂಡ ಗೌತಮ್ ಗಂಭೀರ್ ನಿರ್ಗಮನದ ಬಳಿಕ ಮಂಕಾಗಿದೆ. ನಾಯಕ ಇಯಾನ್ ಮಾರ್ಗನ್ ಕಳಪೆ ಫಾರ್ಮ್ನಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿದೆ. ಬೌಲಿಂಗ್ ವಿಭಾಗ ಉತ್ತಮವಾಗಿದ್ದು, ಆರಂಭಿಕರ ಹೊಡಿಬಡಿ ಆಟದಿಂದಾಗಿ ಕೋಲ್ಕತ್ತಾ ಪ್ಲೇ ಆಫ್ ತಲುಪಿದೆ.
-
Yesterday's history. Now, it's all about fighting to see another day! ⚔️#RCBvKKR #Playoffs #KKR #AmiKKR #KorboLorboJeetbo #আমিKKR #IPL2021 pic.twitter.com/fWUopcSuq8
— KolkataKnightRiders (@KKRiders) October 11, 2021 " class="align-text-top noRightClick twitterSection" data="
">Yesterday's history. Now, it's all about fighting to see another day! ⚔️#RCBvKKR #Playoffs #KKR #AmiKKR #KorboLorboJeetbo #আমিKKR #IPL2021 pic.twitter.com/fWUopcSuq8
— KolkataKnightRiders (@KKRiders) October 11, 2021Yesterday's history. Now, it's all about fighting to see another day! ⚔️#RCBvKKR #Playoffs #KKR #AmiKKR #KorboLorboJeetbo #আমিKKR #IPL2021 pic.twitter.com/fWUopcSuq8
— KolkataKnightRiders (@KKRiders) October 11, 2021
ಟೂರ್ನಿಯಲ್ಲಿ ಸಮಬಲ:
ಕಳೆದೆರಡು ವರ್ಷದ 28 ಪಂದ್ಯಗಳಲ್ಲಿ ಕೆಕೆಆರ್ 15 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದೆ. ಈ ವರ್ಷವೂ ಅಂಕಪಟ್ಟಿಯಲ್ಲಿ ಒಟ್ಟು 14 ಪಂದ್ಯದಲ್ಲಿ 7ರಲ್ಲಿ ಗೆಲುವು ಸಾಧಿಸಿ ಉಳಿದ 7 ಪಂದ್ಯ ಕೈಚೆಲ್ಲಿದೆ. ಈ ಮೂಲಕ 14 ಅಂಕಗಳಿಸಿ 4ನೇ ಸ್ಥಾನದಲ್ಲಿದೆ.
ಕೋಲ್ಕತ್ತಾ ತಂಡಕ್ಕೆ ಹೊಲಿಸಿದರೆ ಈ ವರ್ಷ ಆರ್‌ಸಿಬಿ ಉತ್ತಮ ಲಯದಲ್ಲಿದೆ. ಆಡಿದ 14 ಪಂದ್ಯದಲ್ಲಿ 9 ಪಂದ್ಯ ಗೆದ್ದು, 5 ಪಂದ್ಯದಲ್ಲಿ ಸೋತಿದೆ. ಈ ಮೂಲಕ ಒಟ್ಟು 18 ಅಂಕ ಪಡೆದು 3ನೇ ಸ್ಥಾನದಲ್ಲಿದೆ. ಆದರೆ ಟೂರ್ನಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿರುವ ಉಭಯ ತಂಡಗಳು ತಲಾ ಒಂದೊಂದು ಬಾರಿ ಗೆಲುವು ಕಂಡು ಸಮಬಲ ಸಾಧಿಸಿವೆ.
ಕೋಲ್ಕತ್ತಾ ತಂಡಕ್ಕೆ ಆರಂಭಿಕ ವೆಂಕಟೇಶ್ ಐಯ್ಯರ್, ಶುಭಮನ್ ಗಿಲ್, ನಿತೀಶ್ ರಾಣಾ ಮತ್ತು ತ್ರಿಪಾಠಿ ಬ್ಯಾಟಿಂಗ್ ಬಲವಿದೆ. ಬೌಲಿಂಗ್ ವಿಭಾಗದಲ್ಲಿ ಶಿವಂ ಮಾವಿ, ಸುನೀಲ್ ನರೈನ್, ವರುಣ್ ಚಕ್ರವರ್ತಿ ಅತ್ಯುತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ತಂಡದಲ್ಲಿ ಐಯ್ಯರ್ ಹಾಗೂ ಗಿಲ್ ಕೀ ಪ್ಲೇಯರ್ಸ್ ಎನಿಸಿಕೊಂಡಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್ ಅಬ್ಬರ:
ಇತ್ತ ಆರ್‌ಸಿಬಿ ಅಂಗಳದಲ್ಲಿ ಆರಂಭಿಕ ದೇವ್ದತ್ ಪಡಿಕ್ಕಲ್ ಹಾಗೂ ನಾಯಕ ಕೊಹ್ಲಿ ಫಾರ್ಮ್ನಲ್ಲಿದ್ದರೆ ಮಧ್ಯಮ ಕ್ರಮಾಂಕದಲ್ಲಿ ಕೆ.ಎಸ್.ಭರತ್ ಬಿರುಸಿನ ಆಟ ಪ್ರದರ್ಶಿಸಬಲ್ಲರು. ಎಬಿ ಡಿ ವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಎಂತಹ ಪರಿಸ್ಥಿತಿಯಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲರು. ಈಗಾಗಲೇ 4 ಅರ್ಧಶತಕ ಗಳಿಸಿರುವ ಮ್ಯಾಕ್ಸ್‌ವೆಲ್ ಆರ್ಸಿಬಿಯ ಕೀ ಪ್ಲೇಯರ್ ಆಗಿದ್ದಾರೆ. ಬರೀ ಬ್ಯಾಟಿಂಗ್ನಲ್ಲಷ್ಟೇ ಅಲ್ಲ ಬೌಲಿಂಗ್ನಲ್ಲೂ ಮ್ಯಾಕ್ಸಿ ನೆರವಾಗುತ್ತಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ಕೊನೆಯ 5 ಓವರ್ನಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕುವ ಮೂಲಕ ರನ್ ಹರಿವಿಗೆ ಕಡಿವಾಣ ಹಾಕುತ್ತಿದೆ. ಆದರೆ ಬ್ಯಾಟಿಂಗ್ ಪವರ್ ಪ್ಲೇನಲ್ಲಿ ಎದುರಾಳಿ ತಂಡ ಆರ್‌ಸಿಬಿ ಬೌಲರ್ಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯಲು ಬೌಲರ್ಗಳು ವಿಫಲವಾಗುತ್ತಿರುವುದು ತಂಡಕ್ಕೆ ಹಿನ್ನಡೆಯೆಂದೇ ಹೇಳಬೇಕು.
ಆರ್‌ಸಿಬಿ ಬೌಲಿಂಗ್ ಟ್ರಂಪ್ಕಾರ್ಡ್ ಹರ್ಷಲ್ ಪಟೇಲ್ 30 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಜತೆಗೆ ಯಜುವೇಂದ್ರ ಚಾಹಲ್ ಫಾರ್ಮ್ನಲ್ಲಿದ್ದರೆ, ಮೊಹಮ್ಮದ್ ಸಿರಾಜ್ ಎಕಾನಮಿ ಕಾಪಾಡಿಕೊಂಡಿದ್ದಾರೆ.
ಸಂಭಾವ್ಯ ತಂಡಗಳು ಇಂತಿವೆ..
ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB): ವಿರಾಟ್ ಕೊಹ್ಲಿ (ನಾ), ದೇವ್ದತ್ ಪಡಿಕ್ಕಲ್, ಕೆ.ಎಸ್.ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಕ್ರಿಶ್ಚಿಯನ್, ಎಬಿ ಡಿ ವಿಲಿಯರ್ಸ್, ಮೊಹಮ್ಮದ್ ಶಹಬಾಜ್ ಅಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್ ಹಾಗು ಯುಜುವೇಂದ್ರ ಚಹಲ್.
ಕೋಲ್ಕತ್ತಾ ನೈಟ್ ರೈಡರ್ಸ್(KKR): ಇಯಾನ್ ಮಾರ್ಗನ್ (ನಾ), ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಎಂ.ಪ್ರಸಿದ್ ಕೃಷ್ಣ, ಶಿವಂ ದುಬೆ, ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್, ಶಕೀಬ್ ಅಲ್ ಹಸನ್ ಹಾಗು ಸುನಿಲ್ ನರೈನ್.