ಚೆನ್ನೈ (ತಮಿಳುನಾಡು): ಕೊನೆಯ ಎರಡು ಓವರ್ನಲ್ಲಿ ಸಿಕಂದರ್ ರಾಜಾ ಮತ್ತು ಶಾರುಖ್ ಖಾನ್ ಅವರ ಚಾಣಾಕ್ಷ್ಯ ಬ್ಯಾಟಿಂಗ್ನಿಂದಾಗಿ ಚೆನ್ನೈ ವಿರುದ್ಧ ಪಂಜಾಬ್ 4 ವಿಕೆಟ್ಗಳ ಗೆಲುವು ದಾಖಲಿಸಿತು. ಕೊನೆಯ ಎರಡು ಓವರ್ನಲ್ಲಿ ಪಂಜಾಬ್‌ಗೆ 22 ರನ್ ಬೇಕಿತ್ತು. 19ನೇ ಓವರ್ನಲ್ಲಿ ರಾಜಾ ಮತ್ತು ಶಾರುಖ್ ಜೋಡಿ ತುಷಾರ್ ದೇಶಪಾಂಡೆ ಓವರ್ನಲ್ಲಿ 13 ರನ್ ಗಳಿಸಿದರು. ಕೊನೆಯ ಓವರ್ಗೆ 9 ರನ್ ಬೇಕಿತ್ತು. ಬೌಂಡರಿ, ಸಿಕ್ಸ್ ಇಲ್ಲದೇ ಬರೀ ಓಟದಿಂದಲೇ ಈ ಇಬ್ಬರು ಬ್ಯಾಟರ್ಗಳು ವಿಜಯದ ರನ್ ಕಲೆಹಾಕಿ ಸಂಭ್ರಮಿಸಿದರು.
8 ಮಂದಿ ಬ್ಯಾಟರ್ಗಳ ಸಹಾಯದಿಂದ ಪಂಜಾಬ್ ಕಿಂಗ್ಸ್ ಚೆನ್ನೈನ ತವರು ನೆಲದಲ್ಲಿಯೇ ಗೆದ್ದು ಬೀಗಿತು. ಚೆನ್ನೈ ನೀಡಿದ್ದ 200 ರನ್ ಗುರಿ ಬೆನ್ನತ್ತಿದ ಪಂಜಾಬ್‌ಗೆ 50 ರನ್ ಆರಂಭಿಕರ ಜೊತೆಯಾಟ ಸಿಕ್ಕಿತು. ನಾಯಕ ಶಿಖರ್ ಧವನ್ ಬೇಗ ವಿಕೆಟ್ ಒಪ್ಪಿಸಿದ್ದರು. ಇಂದು 15 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 1 ಸಿಕ್ಸ್ನಿಂದ 28 ರನ್ ಕಲೆಹಾಕಿ ಔಟಾದರು.
-
For his opening brilliance of 92*(52), Devon Conway becomes our 🔝 performer of the first innings of the #CSKvPBKS clash in the #TATAIPL 👌🏻👌🏻
— IndianPremierLeague (@IPL) April 30, 2023 " class="align-text-top noRightClick twitterSection" data="
A look at his batting summary 🔽 pic.twitter.com/6sGVu4w1Wm
">For his opening brilliance of 92*(52), Devon Conway becomes our 🔝 performer of the first innings of the #CSKvPBKS clash in the #TATAIPL 👌🏻👌🏻
— IndianPremierLeague (@IPL) April 30, 2023
A look at his batting summary 🔽 pic.twitter.com/6sGVu4w1WmFor his opening brilliance of 92*(52), Devon Conway becomes our 🔝 performer of the first innings of the #CSKvPBKS clash in the #TATAIPL 👌🏻👌🏻
— IndianPremierLeague (@IPL) April 30, 2023
A look at his batting summary 🔽 pic.twitter.com/6sGVu4w1Wm
ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಆರಂಭಿಕ ಪ್ರಭಾಸಿಮ್ರಾನ್ ಸಿಂಗ್ ಭರ್ಜರಿ ಇನ್ನಿಂಗ್ಸ್ ಕಟ್ಟಿದರು. 24 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸ್ನಿಂದ 42 ರನ್ ಕಲೆಹಾಕಿದರು. ಅಥರ್ವ ಟೈಡೆ (13) ಹೆಚ್ಚು ಹೊತ್ತು ಆಡಲಿಲ್ಲ. ಲಿಯಾಮ್ ಲಿವಿಂಗ್‌ಸ್ಟೋನ್ ವೇಗವಾಗಿ 24 ಬಾಲ್ನಲ್ಲಿ 40 ರನ್ ಗಳಿಸಿ ಔಟಾದರು. ಸ್ಯಾಮ್ ಕರನ್ (29) ಮತ್ತು ಜಿತೇಶ್ ಶರ್ಮಾ (21) ಕೊನೆಯಲ್ಲಿ ತಂಡದ ಮೊತ್ತವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಆದರೆ ಅಂತಿಮವಾಗಿ ಶಾರುಖ್ ಖಾನ್ (2) ಮತ್ತು ಸಿಕಂದರ್ ರಾಜಾ (13) ಪಂದ್ಯ ಗೆಲ್ಲಿಸಿಕೊಟ್ಟರು. ಕೊನೆಯ ಬಾಲ್ಗೆ ಮೂರು ರನ್ ಓಡಿ, ಪಂದ್ಯ ಸೂಪರ್ ಓವರ್ಗೆ ಹೋಗುವುದನ್ನು ತಪ್ಪಿಸಿದರು.
ಇದಕ್ಕೂ ಮುನ್ನ, ಡೆವೊನ್ ಕಾನ್ವೆ ಅವರ ಆಕರ್ಷಕ 92 ರನ್‌ಗಳ ಇನ್ನಿಂಗ್ಸ್ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಪಂಜಾಬ್ ಕಿಂಗ್ಸ್ ತಂಡದ ಐವರು ಬೌಲರ್ಗಳು ಸರಾಸರಿ 30ಕ್ಕಿಂತ ಹೆಚ್ಚು ರನ್ ಚಚ್ಚಿಸಿಕೊಂಡರು. ಪಂಜಾಬ್ ಗೆಲುವಿಗೆ 201 ರನ್ ಬೇಕಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಚೆನ್ನೈ ಎಂದಿನಂತೆ ಉತ್ತಮ ಆರಂಭ ಕಂಡಿತು. ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ 86 ರನ್‌ಗಳ ಜೊತೆಯಾಟ ನೀಡಿದರು. ಗಾಯಕ್ವಾಡ್ ಎಂದಿನಂತೆ ವೇಗವಾಗಿ ರನ್ ಗಳಿಸಲಿಲ್ಲ. 119.35 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿ 37 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು.
ರಾಜಸ್ಥಾನ ರಾಯಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಿವಂ ದುಬೆ ಈ ಬಾರಿ ಬೃಹತ್ ಇನ್ನಿಂಗ್ಸ್ ಕಟ್ಟಲಿಲ್ಲ. ಆದರೆ, ಕಾನ್ವೆಗೆ ಉತ್ತಮ ಬೆಂಬಲ ನೀಡಿದರು. 17 ಎಸೆತ ಎದುರಿಸಿದ ದುಬೆ 28 ರನ್ ಗಳಿಸಿ ಅರ್ಷದೀಪ್ ಸಿಂಗ್ಗೆ ವಿಕೆಟ್ ಕೊಟ್ಟರು. ನಂತರ ಬಂದ ಮೊಯಿನ್ ಅಲಿ (10) ಮತ್ತು ಜಡೇಜಾ (12) ದೊಡ್ಡ ಕೊಡುಗೆ ನೀಡಲಿಲ್ಲ.
ತಮ್ಮ ಲಯ ಮುಂದುವರೆಸಿಕೊಂಡು ಸಾಗಿದ ಕಾನ್ವೆ 52 ಬಾಲ್ನಲ್ಲಿ 16 ಬೌಂಡರಿ ಮತ್ತು 1 ಸಿಕ್ಸ್ನಿಂದ ಅಜೇಯರಾಗಿ 92 ರನ್ ಪೇರಿಸಿದರು. ಕೊನೆಯ ಓವರ್ನಲ್ಲಿ 9 ರನ್ ಕಲೆಹಾಕಿದ್ದರೆ ಶತಕ ಗಳಿಸುವ ಅವಕಾಶವಿತ್ತಾದರೂ ಸಾಧ್ಯವಾಗಲಿಲ್ಲ. 8 ರನ್ನಿಂದ ಈ ಆವೃತ್ತಿಯ ಮೂರನೇ ಶತಕ ಗಳಿಸುವುದರಿಂದ ಕಾನ್ವೆ ವಂಚಿತರಾದರು. ಕೊನೆಯ ಓವರ್ನ ನಾಲ್ಕು ಎಸೆತಗಳನ್ನು ಎದುರಿಸಿದ ನಾಯಕ ಧೋನಿ ಎರಡು ಸಿಕ್ಸ್ನಿಂದ ಅಜೇಯರಾಗಿ 13 ರನ್ ಕಲೆ ಹಾಕಿದರು. ಇದರಿಂದ ಚೆನ್ನೈ ತಂಡ 200 ರನ್ ತಲುಪಿತು.
ಪಂಜಾಬ್ ಕಿಂಗ್ಸ್ ಬೌಲರ್ಗಳು ಸತತ ಎರಡು ಪಂದ್ಯಗಳಿಂದ ಹೆಚ್ಚು ರನ್ ಬಿಟ್ಟು ಕೊಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಇದೇ ಬೌಲಿಂಗ್ ಪಡೆಯಿಂದ ಐಪಿಎಲ್ನ ಎರಡನೇ ಅತಿ ಹೆಚ್ಚಿನ ಸ್ಕೋರ್ (257) ದಾಖಲಾಗಿತ್ತು. ಇಂದು 200ರ ಗಡಿ ತಲುಪಿದೆ. ರಾಹುಲ್ ಚಾಹರ್, ಅರ್ಷದೀಪ್ ಸಿಂಗ್ ಸ್ಯಾಮ್ ಕರನ್ ಮತ್ತು ಸಿಕಂದರ್ ರಜಾ ತಲಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: ಮಿಚಲ್ ಸಿಡಿಲಬ್ಬರದ ಆಟಕ್ಕೆ ಒಲಿಯದ ಜಯ: ದಿಲ್ಲಿಯಲ್ಲಿ 'ಸನ್ರೈಸ್'