ETV Bharat / sports

CSK vs MI: ಚೆನ್ನೈ ಸಮತೋಲನದ ಪ್ರದರ್ಶನ, ಮುಂಬೈ ವಿರುದ್ಧ 6 ವಿಕೆಟ್​ಗಳ ಜಯ

ಮುಂಬೈ ಇಂಡಿಯನ್ಸ್​ ನೀಡಿದ್ದ 140 ರನ್​ ಗುರಿಯನ್ನು ಚೆನ್ನೈ 17.4 ಓವರ್​ನಲ್ಲೇ ಗೆದ್ದುಕೊಂಡಿದೆ.

Etv Bharat
Etv Bharat
author img

By

Published : May 6, 2023, 5:32 PM IST

Updated : May 6, 2023, 8:10 PM IST

ಚೆನ್ನೈ (ತವಿಳುನಾಡು): ಚೆನ್ನೈನ ಐದು ಬ್ಯಾಟರ್​ಗಳ ಸಮತೋಲನದ ಆಟದ ಪ್ರದರ್ಶನದಿಂದ ವಿಕೆಟ್​ ನಷ್ಟದ ನಡುವೆಯೂ ಮುಂಬೈ ಇಂಡಿಯನ್ಸ್​ ನೀಡಿದ್ದ 140 ರನ್​ ಸಾಧಾರಣ ಗುರಿಯನ್ನು 17.4 ಓವರ್​ನಲ್ಲಿ ಸಾಧಿಸಿದೆ. ಈ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ಸೂಪರ್​ ಕಿಂಗ್ಸ್​​​ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಕಾನ್ವೆ, ಗಾಯಕ್ವಾಡ್​, ದುಬೆ ರೆಹಾನೆಯ ಸಮಯೋಚಿನ ರನ್​ 6 ವಿಕೆಟ್​ಗಳ ಗೆಲುವನ್ನು ಚೆನ್ನೈಗೆ ಪಡೆಯಿತು.

ಚೆನ್ನೈನ ಆರಂಭಿಕ ಆಟಗಾರರಾದ ಕಾನ್ವೆ ಮತ್ತು ಗಾಯಕ್ವಾಡ್​ ತಮ್ಮ ಫಾರ್ಮ್​ನ್ನು ಈ ಪಂದ್ಯದಲ್ಲೂ ಮುಂದುವರೆಸಿದರು. ಈ ಜೋಡಿ ಮೊದಲ ವಿಕೆಟ್​ಗೆ 46 ರನ್​ ಸೇರಿಸಿತು. 16 ಬಾಲ್​ನಲ್ಲಿ 2 ಸಿಕ್ಸ್​ ಮತ್ತು 4 ಬೌಂಡರಿಯಿಂದ 30 ರನ್​ ಗಳಿಸಿ ಆಡುತ್ತಿದ್ದ ಗಾಯಕ್ವಾಡ್​ ಅನುಭವಿ ಚಾವ್ಲಾಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ರಹಾನೆಯೂ ಬಿರುಸಿನ ಇನ್ನಿಂಗ್ಸ್​ ಕಟ್ಟಿದರು. 17 ಎಸೆತದಲ್ಲಿ 21 ರನ್​ಗಳಿಸಿದ ಔಟ್​ ಆದರು. ನಂತರ ಬಂದ ಅಂಬಟಿ ರಾಯುಡು 12 ರನ್​ಗೆ ವಿಕೆಟ್​ ಕೊಟ್ಟರು.

ಇಷ್ಟು ವಿಕೆಟ್​ ಪತನದ ನಡುವೆ ಆರಂಭಿಕರಾಗಿ ಬಂದಿದ್ದ ಕಾನ್ವೆ ನಿಧಾನ ಗತಿಯಲ್ಲಿ ರನ್​ ಗಳಿಸುತ್ತಾ ವಿಕೆಟ್​ ಕಾದರು. ಕಾನ್ವೆ ಈ ಇನ್ನಿಂಗ್ಸ್​ನಲ್ಲಿ 42 ಬಾಲ್​ ಎದುರಿಸಿ 4 ಫೋರ್​ನಿಂದ 44 ರನ್​ ಕಲೆಹಾಕಿ ಗೆಲುವಿಗೆ 10 ರನ್​ ಬಾಕಿ ಇರುವಂತೆ ವಿಕೆಟ್​ ಕೊಟ್ಟರು. ಶಿವಂ ದುಬೆ ತಮ್ಮ ಎಂದಿನ ಫಾರ್ಮ್​ ಮುಂದುವರೆಸಿ 18 ಬಾಲ್​ನಲ್ಲಿ 3 ಸಿಕ್ಸ್​ನಿಂದ ಅಜೇಯ 26 ರನ್​ ಕಲೆಹಾಕಿದರು. ಕೊನೆಗೆ ಬಂದಿದ್ದ ಧೋನಿ 3 ಬಾಲ್​ ಎದುರಿಸಿ 2 ರನ್​ ಗಳಿಸಿದರು. ಮುಂಬೈ ಪರ ಪಿಯೂಷ್​ ಚಾವ್ಲಾ 2, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಆಕಾಶ್ ಮಧ್ವಲ್ ತಲಾ ಒಂದು ವಿಕೆಟ್​ ಪಡೆದರು.

ಮುಂಬೈ ಇನ್ನಿಂಗ್ಸ್​: ಇದಕ್ಕೂ ಮುನ್ನ ನೆಹಾಲ್ ವಾಧೇರಾ ಅವರ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್​ ತಂಡ ನಿಗದಿತ ಓವರ್​ ಅಂತ್ಯಕ್ಕೆ 8 ವಿಕೆಟ್​ ನಷ್ಟಕ್ಕೆ 139 ರನ್ ಗಳಿಸಿದೆ. ರೋಹಿತ್​ ಪಡೆಯ ಆರಂಭಿಕರ ವೈಫಲ್ಯದ ನಡುವೆಯೂ, ಮಧ್ಯಮ ಕ್ರಮಾಂಕದ ವಧೇರಾ ಗಳಸಿದ ರನ್​ ತಂಡ ಚನ್ನೈಗೆ 140 ರನ್​ ಗುರಿ ನೀಡುವಲ್ಲಿ ಸಹಕಾರಿ ಆಯಿತು.

ಟಾಸ್​ ಸೋತು ಮುಂಬೈ ಇಂಡಿಯನ್ಸ್​ ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಆರಂಭಿಕ ಆಟಗಾರರಲ್ಲಿ ಪ್ರಯೋಗ ಮಾಡಿದ ಎಂಐ ತಂಡ ಯಶಸ್ವಿಯಾಗಲಿಲ್ಲ. ಸಾಮಾನ್ಯವಾಗಿ ಆರಂಭಿಕರಾಗಿ ಕಣಕ್ಕಿಳಿಯುವ ರೋಹಿತ್​ ಶರ್ಮಾ ಕ್ಯಾಮರೂನ್ ಗ್ರೀನ್​ಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ಗ್ರೀನ್​ ಬಡ್ತಿ ನೀಡಿ ಬೃಹತ್​ ಮೊತ್ತ ಕೆಲೆ ಹಾಕುವ ಚಿಂತನೆ ವ್ಯರ್ಥವಾಯಿತು. 4 ಬಾಲ್​ನಲ್ಲಿ 6 ರನ್​ ಗಳಿಸಿ ಕ್ಯಾಮರೂನ್ ಗ್ರೀನ್ ಚೆನ್ನೈನ ತುಷಾರ್​ ದೇಷಪಾಂಡೆಗೆ ವಿಕೆಟ್​ ಒಪ್ಪಿಸಿದರು. ಅವರ ಬೆನ್ನಲ್ಲೆ ಇಶಾನ್​ ಕಿಶನ್​ (7) ಸಹ ವಿಕೆಟ್​ ಒಪ್ಪಿಸಿದರು.

ನಂತರ ಬಂದ ನಾಯಕ ರೋಹಿತ್​ ಶರ್ಮಾ ದಾಖಲೆ ಬರೆದರು. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ವಿಕೆಟ್​ ಕೊಟ್ಟ ಬ್ಯಾಟರ್​ ಎಂಬ ದಾಖಲೆ ಮಾಡಿದರು. ಮೂರನೇ ಬ್ಯಾಟರ್​ ಆಗಿ ಬಂದ ರೋಹಿತ್​ ಮೂರು ಬಾಲ್​ ಎದುರಿಸಿ ಡಕ್​​ ಔಟ್​ ಆದರು. ಒಟ್ಟಾರೆ ಐಪಿಎಲ್​​ನಲ್ಲಿ ದೀಪಕ್​ ಚಹಾರ್​ ಅವರ 49 ಬಾಲ್​ ಎದುರಿಸಿರುವ ರೋಹಿತ್​ ಶರ್ಮಾ 60 ಕೇವಲ ರನ್​ ಗಳಿಸಿದ್ದಾರೆ. ಅಷ್ಟೇ ಅಲ್ಲ ಇಂದಿನ ವಿಕೆಟ್​ ಸೇರಿ ಅವರ ಬೌಲಿಂಗ್​ನಲ್ಲೇ 3 ಬಾರಿ ಔಟ್​ ಆಗಿದ್ದಾರೆ. ನಾಯಕನ ವಿಕೆಟ್ ತೆಗೆದುಕೊಂಡ​ ನಂತರ ಈ ಹಿಂದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸೂರ್ಯ ಕ್ರೀಸ್​ಗೆ ಬಂದರು.

ಸೂರ್ಯಕುಮಾರ್ ಯಾದವ್ ಮತ್ತು ನೆಹಾಲ್ ವಾಧೇರಾ ತಂಡಕ್ಕೆ ರನ್​ ಗಳಿಸುವ ಸೂಚನೆ ನೀಡಿದರು. ಎಂದಿನಂತೆ ಅಬ್ಬರದ ಬ್ಯಾಟಿಂಗ್​ಗೆ ಮುಂದಾದ ಸೂರ್ಯ ರವೀಂದ್ರ ಜಡೇಜಾಗೆ ವಿಕೆಟ್​ ಒಪ್ಪಿಸಿದರು. ಇಂದಿನ ಇನ್ನಿಂಗ್ಸ್​ನಲ್ಲಿ ಸೂರ್ಯ ಕುಮಾರ್​​ 22 ಬಾಲ್​​​​ ಗಳನ್ನು ಎದುರಿಸಿ 3 ಬೌಂಡರಿಗಳಿಂದ 26 ರನ್​ ಗಳಿಸಿದ್ದರು. ಸೂರ್ಯ ನಂತರ ಬಂದ ಟ್ರಿಸ್ಟಾನ್ ಸ್ಟಬ್ಸ್ ವಾಧೇರಾಗೆ ಜೋಡಿಯಾಗಿ ಬ್ಯಾಟಿಂಗ್​ ಮುಂದುವರಿಸಿದರು.

ನೆಹಾಲ್ ವಾಧೇರಾ ತಂಡಕ್ಕೆ ಆಸರೆಯಾಗಿ ಅರ್ಧಶತಕ (64, 51 ಬಾಲ್​, 8x4, 1x6) ಗಳಿಸಿ ವಿಕೆಟ್​ ಕೊಟ್ಟರು. ಅವರ ನಂತರ ಬಂದ ಟಿಮ್ ಡೇವಿಡ್ (2), ಅರ್ಷದ್ ಖಾನ್ (1) ಬೇಗ ಔಟ್​ ಆದರು. ಇವರ ಬೆನ್ನಲ್ಲೇ 20 ರನ್​ ಗಳಿಸಿ ಟ್ರಿಸ್ಟಾನ್ ಸ್ಟಬ್ಸ್ ಔಟ್ ​ ಆದರು. ಜೋಫ್ರಾ ಆರ್ಚರ್ (3) ಮತ್ತು ಪಿಯೂಷ್ ಚಾವ್ಲಾ (2) ಅಜೇಯರಾಗಿ ಉಳಿದು ಆಲ್​ಔಟ್​ನಿಂದ ತಪ್ಪಿಸಿದರು.

ಚೆನ್ನೈ ಪರ , ಮಹೇಶ್ ತೀಕ್ಷ್ಣ 3, ತುಷಾರ್​ ದೇಶಪಾಂಡೆ ಮತ್ತು ದೀಪಕ್​ ಚಹಾರ್​ ತಲಾ 2 ವಿಕೆಟ್​ ಪಡೆದರೆ, ಅನುಭವಿ ಜಡೇಜಾ ಒಂದು ವಿಕೆಟ್​ ಕಬಳಿಸಿದರು.

ಇದನ್ನೂ ಓದಿ: IPL 2023: ಮುಂಬೈ ವಿರುದ್ಧ ಟಾಸ್​ ಗೆದ್ದ ಚೆನ್ನೈ ಬೌಲಿಂಗ್​ ಆಯ್ಕೆ

Last Updated : May 6, 2023, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.