ಅಹಮದಾಬಾದ್ (ಗುಜರಾತ್): ಗುಜರಾತ್ ಟೈಟಾನ್ಸ್ ಫೈನಲ್ ಪಂದ್ಯದಲ್ಲಿ ತನ್ನ ಬಲಿಷ್ಠ ಬ್ಯಾಟಿಂಗ್ ಮುಂದುವರೆಸಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ 215 ರನ್ನ ಬೃಹತ್ ಗುರಿ ನೀಡಿದೆ. ನಾಲ್ಕು ರನ್ನಿಂದ ಸಾಯಿ ಸುದರ್ಶನ್ ಶತಕ ವಂಚಿತರಾದರೆ, ಅರ್ಧಶತಕ ಗಳಿಸಿ ವೃದ್ದಿಮಾನ್ ಸಹ ವಿಕೆಟ್ ಕೊಟ್ಟರು. ಈ ಇಬ್ಬರು ಬ್ಯಾಟರ್ಗಳ ಇನ್ನಿಂಗ್ಸ್ನ ಸಹಾಯದಿಂದ ನಿಗದಿತ ಓವರ್ ಅಂತ್ಯಕ್ಕೆ ಗುಜರಾತ್ ಟೈಟಾನ್ಸ್ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು.
-
Innings break!
— IndianPremierLeague (@IPL) May 29, 2023 " class="align-text-top noRightClick twitterSection" data="
Gujarat Titans set a mammoth target of 215 for the Chennai Super Kings 👌🏻
This will take some beating and we're in for an entertaining run-chase in the FINAL folks 🙌
Scorecard ▶️ https://t.co/WsYLvLrRhp#TATAIPL | #Final | #CSKvGT pic.twitter.com/2XBf0vDcuc
">Innings break!
— IndianPremierLeague (@IPL) May 29, 2023
Gujarat Titans set a mammoth target of 215 for the Chennai Super Kings 👌🏻
This will take some beating and we're in for an entertaining run-chase in the FINAL folks 🙌
Scorecard ▶️ https://t.co/WsYLvLrRhp#TATAIPL | #Final | #CSKvGT pic.twitter.com/2XBf0vDcucInnings break!
— IndianPremierLeague (@IPL) May 29, 2023
Gujarat Titans set a mammoth target of 215 for the Chennai Super Kings 👌🏻
This will take some beating and we're in for an entertaining run-chase in the FINAL folks 🙌
Scorecard ▶️ https://t.co/WsYLvLrRhp#TATAIPL | #Final | #CSKvGT pic.twitter.com/2XBf0vDcuc
ಟಾಸ್ ಸೋರು ಮೊದಲು ಬ್ಯಾಟಿಂಗ್ ಬಂದ ಗುಜರಾತ್ ಎಂದಿನಂತೆ ಉತ್ತಮ ಆರಂಭ ಕಂಡಿತು. ಜಿಟಿಯ ಆರಂಭಿಕ ಜೋಡಿ ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಎಂದಿನಂತೆ ಅರ್ಧಶತಕದ ಜೊತೆಯಾಟವನ್ನು ಮೊದಲ ಐದು ಓವರ್ನಲ್ಲೇ ಪೂರೈಸಿದರು. ಈ ಜೋಡಿ ಇಂದು 67 ರನ್ನ ಜೊತೆಯಾಟವನ್ನು ಮಾಡಿತು. ಕಳೆದ ನಾಲ್ಕು ಪಂದ್ಯದಲ್ಲಿ ಮೂರು ಶತಕ ಗಳಿಸಿದ್ದ ಗಿಲ್ ತಮ್ಮ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದರು. ಪವರ್ ಪ್ಲೇ ಮುಗಿಯುತ್ತಿದ್ದಂತೆ ಬೌಲಿಂಗ್ಗೆ ಇಳಿದ ರವೀಂದ್ರ ಜಡೇಜಾ ತಮ್ಮ ಸ್ಪಿನ್ ಕೈಚಳ ತೋರಿದರು.
20 ಬಾಲ್ನಲ್ಲಿ 7 ಬೌಂಡರಿಯಿಂದ 39 ರನ್ ಗಳಿಸಿ ಆಡುತ್ತಿದ್ದ ಶುಭಮನ್ ಗಿಲ್ ಜಡೇಜಾ ಅವರ ಬಾಲ್ನಲ್ಲಿ ಕ್ರೀಸ್ ಬಿಟ್ಟು ಮುಂದೆ ಬಂದು ಧೋನಿ ಕೈಯಲ್ಲಿ ಸ್ಟಂಪ್ ಔಟ್ ಆದರು. ಗಿಲ್ ವಿಕೆಟ್ ನಂತರ ಸಾಯಿ ಸುದರ್ಶನ್ ಮೈದಾನಕ್ಕಿಳಿದರು. ಗಿಲ್ ನಿಲ್ಲಿಸಿದ್ದ ಇನ್ನಿಂಗ್ಸ್ ಅನ್ನು ಅದೇ ವೇಗದಲ್ಲಿ ಸಾಯಿ ಮುಂದುವರೆಸಿದರು. ಗಿಲ್ ಪಾತ್ರವನ್ನು ಸಮರ್ಥವಾಗಿಯೇ ನಿಭಾಯಿಸಿದರು.
ಆರಂಭಿಕ ವೃದ್ಧಿಮಾನ್ ಸಹಾರ ಜೊತೆಗೂಡಿ ಸಾಯಿ ಅರ್ಧಶತಕದ ಇನ್ನೊಂದು ಜೊತೆಯಾಟ ನಿರ್ಮಿಸಿದರು. ಲೀಗ್ನಲ್ಲಿ ಕೇವಲ 1 ಅರ್ಧಶತಕ ಗಳಿಸಿ 20 -30 ರನ್ ನಡುವೆ ವಿಕೆಟ್ ಕೊಡುತ್ತಿದ್ದ ಸಹಾ ಇಂದು ಈ ಆವೃತ್ತಿಯ ಎರಡನೇ ಅರ್ಧಶತಕ ದಾಖಲಿಸಿದರು. 39 ಬಾಲ್ ಎದರಿಸಿದ ಸಹಾ 5 ಬೌಂಡರಿ ಮತ್ತು 1 ಸಿಕ್ಸ್ನಿಂದ 54 ರನ್ ಕಲೆ ಹಾಕಿ ದೀಪಕ್ ಚಾಹರ್ಗೆ ವಿಕೆಟ್ ಒಪ್ಪಿಸಿದರು. ಈ ವರೆಗೆ ತಂಡದಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದರೂ ಮತ್ತೆ ಮತ್ತೆ ಅವಕಾಶಕೊಟ್ಟಿದ್ದನ್ನು ಕೊನೆಯ ಪಂದ್ಯದಲ್ಲಿ ಸದ್ಬಳಕೆ ಮಾಡಿಕೊಂಡರು.
4 ರನ್ನಿಂದ ಶತಕ ವಂಚಿತರಾದ ಸಾಯಿ: ಎರಡು ವಿಕೆಟ್ ಬಿದ್ದರೂ ಸಾಯಿ ಸುದರ್ಶನ್ ತಮ್ಮ ಬ್ಯಾಟಿಂಗ್ ವೇಗವನ್ನು ತಗ್ಗಿಸದೇ ಸಿಕ್ಸ್, ಫೋರ್ಗಳ ಸುರಿಮಳೆಯನ್ನೇ ಹರಿಸಿದರು. ಆದರೆ, ಶತಕಕ್ಕೆ 4 ರನ್ ಇರಬೇಕಾದರೆ ಎಡವಿದ ಸಾಯಿ ಮಥೀಶ ಪತಿರಣ ಬಾಲ್ನಲ್ಲಿ ಎಲ್ಬಿಡಬ್ಲೂಗೆ ಬಲಿಯಾಗಿ ಶತಕ ವಂಚಿತರಾದರು. ಸಾಯಿ ಇನ್ನಿಂಗ್ಸ್ನಲ್ಲಿ 47 ಬಾಲ್ ಫೇಸ್ ಮಾಡಿ 8 ಬೌಂಡರಿ ಮತ್ತು 6 ಸಿಕ್ಸ್ನಿಂದ 96 ರನ್ ಕಲೆಹಾಕಿದ್ದರು. 4 ರನ್ನಿಂದ ಐಪಿಎಲ್ನ ಚೊಚ್ಚಲ ಶತಕ ತಪ್ಪಿಸಿಕೊಂಡರು.
13 ಓವರ್ನಲ್ಲಿ ಸಹಾ ವಿಕೆಟ್ ಬಿದ್ದಾಗ ಬಂದ ನಾಯಕ ಹಾರ್ದಿಕ್ ಪಾಂಡ್ಯ ಹೆಚ್ಚು ಕ್ರೀಸ್ ಅನ್ನು ಸಾಯಿ ಬಿಟ್ಟುಕೊಟ್ಟಿದ್ದರಿಂದ 12 ಬಾಲ್ನಲ್ಲಿ 2 ಸಿಕ್ಸ್ ಗಳಿಸಿ ಅಜೇಯ 21 ರನ್ ಮಾತ್ರ ಮಾಡಿದರು. ಸಾಯಿ ವಿಕೆಟ್ ನಂತರ ಕೊನೆಯ 3 ಬಾಲ್ ಇದ್ದಾಗ ಬಂದ ರಶೀದ್ ಖಾನ್ ಶೂನ್ಯಕ್ಕೆ ಔಟ್ ಆದರು. ಚೆನ್ನೈ ಪರ ಮಥೀಶ ಪತಿರಣ 2, ಜಡೇಜ ಮತ್ತು ಚಾಹರ್ ತಲಾ 1 ವಿಕೆಟ್ ಕಿತ್ತರು.
ಇದನ್ನೂ ಓದಿ: ಸಚಿನ್, ವಿರಾಟ್ ಆಟವನ್ನು ಗಿಲ್ ಮುಂದುವರೆಸುತ್ತಾರೆ ಎಂದ ಅಭಿಮಾನಿಗಳು: ಇದಕ್ಕೆ ಶುಭಮನ್ ಪ್ರತಿಕ್ರಿಯೆ ಹೀಗಿದೆ...