ETV Bharat / sports

IPL 2021: ಗಾಯಕ್ವಾಡ್​ ಭರ್ಜರಿ ಆಟ... ಮುಂಬೈ ವಿರುದ್ಧ ಚೆನ್ನೈ ಜಯಭೇರಿ - ಮಹೇಂದ್ರ ಸಿಂಗ್​ ಧೋನಿ

ಪ್ರಾರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ, ಆ ಬಳಿಕ ದಿಟ್ಟ ಮತ್ತು ಅದ್ಭುತ ಆಟವಾಡಿ 6 ವಿಕೆಟ್​ ನಷ್ಟಕ್ಕೆ 156 ರನ್​ ಗಳಿಸಿತ್ತು. ರುತುರಾಜ್ ಗಾಯಕ್ವಾಡ್ ಅಜೇಯ 58 ಬಾಲ್​ಗೆ 88 ರನ್​ ಬಾರಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಇವರ ಈ ಆಟ ಚೆನ್ನೈ ಗೆಲುವಿಗೆ ಮುಖ್ಯ ಹಾದಿ ಮಾಡಿಕೊಟ್ಟಿತ್ತು.

Chennai Super Kings
ಮುಂಬೈ ವಿರುದ್ಧ ಚೆನ್ನೈ ಜಯಭೇರಿ
author img

By

Published : Sep 20, 2021, 7:37 AM IST

Updated : Sep 20, 2021, 9:57 AM IST

ದುಬೈ: ಕೋವಿಡ್​-19 ಕಾರಣದಿಂದ ಮುಂದೂಡಲ್ಪಟ್ಟಿದ್ದ 14ನೇ ಆವೃತ್ತಿಯ ಐಪಿಎಲ್​ ಎರಡನೇ ಆವೃತ್ತಿ ಆರಂಭಗೊಂಡಿದೆ. ಮರಳುನಾಡಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ 20 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನ ಗಳಿಸಿದೆ.

ಪ್ರಾರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ, ಆ ಬಳಿಕ ದಿಟ್ಟ ಮತ್ತು ಅದ್ಭುತ ಆಟವಾಡಿ 6 ವಿಕೆಟ್​ ನಷ್ಟಕ್ಕೆ 156 ರನ್​ ಗಳಿಸಿತ್ತು. ರುತುರಾಜ್ ಗಾಯಕ್ವಾಡ್ ಅಜೇಯ 58 ಬಾಲ್​ಗೆ 88 ರನ್​ ಬಾರಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಇವರ ಈ ಆಟ ಚೆನ್ನೈ ಗೆಲುವಿಗೆ ಮುಖ್ಯ ಹಾದಿ ಮಾಡಿಕೊಟ್ಟಿತ್ತು.

ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್​ಗೆ 157 ರನ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ ಕಲಿಗಳು ನಿರೀಕ್ಷಿತ ಸಾಧನೆ ಮಾಡಿಲ್ಲ. ಕ್ವಿಂಟನ್ ಡಿಕಾಕ್ 17 ರನ್ ಸಿಡಿಸಿ ಔಟಾದರೆ, ಇತ್ತ ರೋಹಿತ್ ಶರ್ಮಾ ಬದಲು ಸ್ಥಾನ ಪಡೆದ ಅನ್ಮೋಲ್‌ ಪ್ರೀತ್ ಸಿಂಗ್ 16 ರನ್ ಸಿಡಿಸಿ ಪೆವಿಲಿಯನ್​ ಸೇರಿದರು.

ಇನ್ನು ಸೂರ್ಯಕುಮಾರ್ ಯಾದವ್ 3, ಇಶಾನ್ ಕಿಶನ್ 11 ರನ್ ಸಿಡಿಸಿ ಔಟಾದರು. ಆದರೆ, ಸೌರಬ್ ತಿವಾರಿ ಏಕಾಂಗಿ ಹೋರಾಟ ನಡೆಸಿದರು. ರೋಹಿತ್ ಅನುಪಸ್ಥಿತಿಯಲ್ಲಿ ನಾಯಕ ಸ್ಥಾನ ವಹಿಸಿಕೊಂಡ​ ಕೀರಾನ್ ಪೊಲಾರ್ಡ್ ಕೇವಲ 15 ರನ್ ಸಿಡಿಸಿ ಎದುರಾಳಿ ತಂಡಕ್ಕೆ ವಿಕೆಟ್​ ಒಪ್ಪಿಸಿದರು.

ಇದನ್ನು ಓದಿ: ರುತುರಾಜ್ ​- ಬ್ರಾವೋ ಆಟದ ವೈಖರಿ ಕೊಂಡಾಡಿದ ಕ್ಯಾಪ್ಟನ್​ ಕೂಲ್​ ಮಾಹಿ

ಮುಂಬೈ ಗೆಲುವಿಗೆ ಅಂತಿಮ ಎರಡು ಓವರ್​ನಲ್ಲಿ 39 ರನ್ ಅವಶ್ಯಕತೆ ಇತ್ತು. ಸೌರವ್ ತಿವಾರಿ ಹಾಗೂ ಆ್ಯಡಮ್ ಮಿಲ್ನೆ ಉತ್ತಮ ಪ್ರದರ್ಶನ ನೀಡಲು ಮುಂದಾದರೂ ಸಹ, 15 ರನ್ ನೀಡಿ ಮಿಲ್ನೆ ಔಟಾದರು. ಈ ಬಳಿಕ ರಾಹುಲ್ ಚಹಾರ್ ವಿಕೆಟ್ ಪತನಗೊಂಡಿತು. ಅಷ್ಟರಲ್ಲಿ ಓವರ್ ಮುಕ್ತಾಯಗೊಂಡು ಮುಂಬೈ 8 ವಿಕೆಟ್ ನಷ್ಟಕ್ಕೆ 136 ರನ್ ಸಿಡಿಸಿ ಸೋಲು ಒಪ್ಪಿಕೊಂಡಿತು.

ಗಾಯಕ್ವಾಡ್​ ಭರ್ಜರಿ ಆಟ... ಚೆನ್ನೈಗೆ ಗೆಲುವು: ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಆಕರ್ಷಕ ಪ್ರದರ್ಶನ ಚೆನ್ನೈ ಗೆಲುವಿಗೆ ಬಹುದೊಡ್ಡ ಕೊಡುಗೆ ನೀಡಿದೆ. 88 ರನ್​ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್‌ ಗಳಿಸಿತ್ತು. ರವೀಂದ್ರ ಜಡೇಜಾ 26, ಡ್ವೇನ್ ಬ್ರಾವೋ 23, ಧೋನಿ 3, ಸುರೇಶ್​ ರೈನಾ 4 ರನ್​ ಗಳಿಸಿದರು.

Last Updated : Sep 20, 2021, 9:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.