ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದಾಖಲೆ ನಿರ್ಮಾಣಗೊಳ್ಳುವುದು, ಮೇಲಿಂದ ಮೇಲೆ ಅವುಗಳನ್ನ ಬ್ರೇಕ್ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹೊಸದೊಂದು ರೆಕಾರ್ಡ್ ಬರೆದಿದ್ದಾರೆ. ಈ ಸಾಧನೆ ನಿರ್ಮಾಣ ಮಾಡಿರುವ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಭುವನೇಶ್ವರ್ ಕುಮಾರ್ ಬರೋಬ್ಬರಿ 1,400+ ಡಾಟ್ ಬಾಲ್ ಹಾಕಿದ್ದಾರೆ. ಈ ದಾಖಲೆ ಮಾಡಿರುವ ಏಕೈಕ ಬೌಲರ್ ಎಂಬ ಹಿರಿಮೆಗೆ ಈ ವೇಗಿ ಪಾತ್ರರಾಗಿದ್ದಾರೆ. ಐಪಿಎಲ್ನಲ್ಲಿ ಸದ್ಯ ಸನ್ರೈಸರ್ಸ್ ಹೈದರಾಬಾದ್ ಪರ ಬೌಲ್ ಮಾಡುತ್ತಿರುವ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶ ನೀಡ್ತಿದ್ದಾರೆ.
-
Silencing batsmen and run-rates since 2014. 🤫🔥@BhuviOfficial | #OrangeArmy #ReadyToRise #TATAIPL pic.twitter.com/nZIeLLaoQo
— SunRisers Hyderabad (@SunRisers) May 19, 2022 " class="align-text-top noRightClick twitterSection" data="
">Silencing batsmen and run-rates since 2014. 🤫🔥@BhuviOfficial | #OrangeArmy #ReadyToRise #TATAIPL pic.twitter.com/nZIeLLaoQo
— SunRisers Hyderabad (@SunRisers) May 19, 2022Silencing batsmen and run-rates since 2014. 🤫🔥@BhuviOfficial | #OrangeArmy #ReadyToRise #TATAIPL pic.twitter.com/nZIeLLaoQo
— SunRisers Hyderabad (@SunRisers) May 19, 2022
ಇಲ್ಲಿಯವರೆಗೆ 145 ಪಂದ್ಯಗಳನ್ನಾಡಿರುವ ಭುವನೇಶ್ವರ್ ಕುಮಾರ್ 1400+ ಡಾಟ್ ಬಾಲ್ ಎಸೆದಿದ್ದಾರೆ. ಇನ್ನೂ ಐಪಿಎಲ್ನಲ್ಲಿ ಅತಿ ಹೆಚ್ಚು ಮೆಡನ್ ಓವರ್ ಎಸೆದಿರುವರ ಪೈಕಿ ಭುವಿ ಎರಡನೇ ಸ್ಥಾನದಲ್ಲಿದ್ದಾರೆ. ಐಪಿಎಲ್ನಲ್ಲಿ ಪ್ರವೀಣ್ ಕುಮಾರ್ 14. ಭುವನೇಶ್ವರ್ ಕುಮಾರ್ 10 ಮೆಡನ್ ಓವರ್ ಮಾಡಿದ್ದಾರೆ. ಇನ್ನೂ ಐಪಿಎಲ್ ಇತಿಹಾಸದಲ್ಲಿ ವೇಗಿ ಭುವಿ 150 ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ತಂದೆ 2-3 ದಿನ ಊಟ ಮಾಡಿರಲಿಲ್ಲ: ಕಷ್ಟದ ದಿನ ಸ್ಮರಿಸಿ, ಸೋಲಿನ ಬಳಿಕ ಕಣ್ಣೀರಿಟ್ಟ ರಿಂಕು ಸಿಂಗ್!
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಹೈದರಾಬಾದ್ ತಂಡ ಇಲ್ಲಿಯವರೆಗೆ ಆಡಿರುವ 13 ಪಂದ್ಯಗಳ ಪೈಕಿ 6ರಲ್ಲಿ ಗೆಲುವು ದಾಖಲಿಸಿ,12 ಪಾಯಿಂಟ್ಗಳಿಕೆ ಮಾಡಿದೆ.