ETV Bharat / sports

'ಬೆಟ್ಟಿಂಗ್ ಕಂಪನಿಗಳೂ IPL ತಂಡ ಖರೀದಿಸಬಹುದು': ಹೊಸ ಫ್ರಾಂಚೈಸಿ ವಿರುದ್ಧ ಲಲಿತ್ ಮೋದಿ ಗರಂ - CVC ಕ್ಯಾಪಿಟಲ್ ಕಂಪನಿ

ಬೆಟ್ಟಿಂಗ್ ಕಂಪನಿಗಳೂ ಕೂಡ ಐಪಿಎಲ್ ತಂಡವನ್ನು ಖರೀದಿಸಬಹುದು ಎಂದು ನನಗನ್ನಿಸುತ್ತಿದೆ. ಇದೊಂದು ಹೊಸ ನಿಯಮವಿರಬಹುದು ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಆರೋಪಿಸಿದ್ದಾರೆ.

Betting companies can buy an IPL team, says Lalit Modi
ಹೊಸ ಫ್ರಾಂಚೈಸಿ ವಿರುದ್ಧ ಲಲಿತ್ ಮೋದಿ ಗಂಭೀರ ಆರೋಪ
author img

By

Published : Oct 27, 2021, 9:59 AM IST

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಸೋಮವಾರ ಹೊಸದಾಗಿ ಲಕ್ನೋ ಹಾಗೂ ಅಹಮದಾಬಾದ್​​ ಫ್ರಾಂಚೈಸಿಗಳ ಸೇರ್ಪಡೆಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಐಪಿಎಲ್​ನಲ್ಲಿ 'ಬೆಟ್ಟಿಂಗ್ ಕಂಪನಿಗಳೂ ಕೂಡ ತಂಡಗಳನ್ನು ಖರೀದಿಸಬಹುದು' ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

  • just found out new policy of #bcc in regarding ownership of @iplt20 Teams. Betting Companies can own a Team. what Text - Apparently one qualified bidder owns a big betting company. 😳😳😳🙏 @ London, United Kingdom https://t.co/SUZzBHGKST

    — Lalit Kumar Modi (@LalitKModi) October 26, 2021 " class="align-text-top noRightClick twitterSection" data=" ">

ಆರ್​ಪಿಎಸ್​ಜಿ (RPSG) ವೆಂಚರ್ಸ್ ಲಿಮಿಟೆಡ್ ಮತ್ತು ಇರೆಲಿಯಾ ಕಂಪನಿ ಪ್ರೈವೇಟ್​ ಲಿಮಿಟೆಡ್​​ (CVC Capital Partners) ಗಳು ನೂತನ ಫ್ರಾಂಚೈಸಿಗಳಾಗಿದ್ದು, 2022ರಿಂದ ಹೊಸ IPL ತಂಡಗಳ ಮಾಲೀಕರಾಗಲಿದ್ದಾರೆ. RPSG ಗ್ರೂಪ್ 7,090 ಕೋಟಿ ರೂ.ಗೆ ಲಕ್ನೋ ತಂಡ ಹಾಗೂ CVC ಕ್ಯಾಪಿಟಲ್ ಕಂಪನಿಯು 5,600 ಕೋಟಿ ರೂ.ಗೆ ಅಹಮದಾಬಾದ್ ತಂಡದ ಒಡೆತನವನ್ನು ಪಡೆದಿವೆ.

  • i guess betting companies can buy a @ipl team. must be a new rule. apparently one qualified bidder also owns a big betting company. what next 😳😳😳 - does @BCCI not do there homework. what can Anti corruption do in such a case ? #cricket

ಈ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿಯಿಂದ ಘೋಷಣೆ ಹೊರಬಿದ್ದ ಬೆನ್ನಲ್ಲೇ ಲಲಿತ್ ಮೋದಿ ಬಿಸಿಸಿಐ ವಿರುದ್ಧ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ. 'ಬೆಟ್ಟಿಂಗ್ ಕಂಪನಿಗಳೂ ಕೂಡ ಐಪಿಎಲ್ ತಂಡವನ್ನು ಖರೀದಿಸಬಹುದು ಎಂದು ನನಗನ್ನಿಸುತ್ತಿದೆ. ಇದೊಂದು ಹೊಸ ನಿಯಮವಿರಬಹುದು. ಹೊಸ ಬಿಡ್​ದಾರರಲ್ಲಿ ಒಬ್ಬರು ಬೆಟ್ಟಿಂಗ್​ ಕಂಪನಿಯ ಒಡೆಯರಾಗಿದ್ದಾರೆ. ಮುಂದೇನು? ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ದಳವು ಏನು ಮಾಡಲಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಲಿಲಿತ್​ ಮೋದಿ ಟ್ವೀಟ್​ ಬಳಿಕ, CVC ಕ್ಯಾಪಿಟಲ್ ಕಂಪನಿಯು ಅನೇಕ ಬೆಟ್ಟಿಂಗ್​ ಕಂಪನಿಗಳ ಜೊತೆ ಲಿಂಕ್​ ಹೊಂದಿದೆ. ಅಲ್ಲದೆ ಇತರ ಬೆಟ್ಟಿಂಗ್​ ಹಾಗೂ ಜೂಜು ಕಂಪನಿಗಳಲ್ಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದನ್ನೂ ಓದಿ: ಮಕ್ಕಳನ್ನು ಕಟ್ಟಿಹಾಕಿದ ತಾಯಿ, ತಲೆ ಕೆಳಗಾಗಿ ನೇತು ಹಾಕಿದ ವ್ಯಕ್ತಿ​: ಪೊಲೀಸರಿಂದ ತನಿಖೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.