ETV Bharat / sports

ಇಂದು ಗುಜರಾತ್​ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಸೆಣಸಾಟ.. ತಂಡವನ್ನು ಹುರಿದುಂಬಿಸಲು ಬರ್ತಿದ್ದಾರೆ ರಿಷಭ್​ ಪಂತ್​! - ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ

ಡಗ್​ಔಟ್​ನಲ್ಲಿ ರಿಷಭ್​ ಪಂತ್​ ಅವರ ಜೆರ್ಸಿ ನೇತು ಹಾಕಿ ಡೆಲ್ಲಿ ಕ್ಯಾಪಿಟಲ್ಸ್​ ಗೌರವ ಸೂಚಿಸಿದ್ದ ಬಗ್ಗೆ ಬಿಸಿಸಿಐ ಗರಂ ಆಗಿದ್ದು, ಇನ್ಮುಂದೆ ಆ ರೀತಿ ಮಾಡದಂತೆ ಎಚ್ಚರಿಕೆ ನೀಡಿದೆ.

BCCI reaction about delhi capitals  delhi capitals captain rishabh pant  rishabh pant jersey in dugout  Indian Premier League 2023  Indian Premier League  ತಂಡಕ್ಕೆ ಹುರಿದುಂಬಿಸಲು ಬರ್ತಿದ್ದಾರೆ ರಿಷಬ್​ ಪಂತ್  ಗುಜರಾತ್​ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಡಗ್​ಔಟ್​ನಲ್ಲಿ ರಿಷಬ್​ ಪಂತ್​ ಅವರ ಜೆರ್ಸಿ  ಜೆರ್ಸಿ ನೇತು ಹಾಕಿ ಡೆಲ್ಲಿ ಕ್ಯಾಪಿಟಲ್ಸ್​ ಗೌರವ  ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್  ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ  ಲಕ್ನೋ ಸೂಪರ್ ಜೈಂಟ್ಸ್
ಇಂದು ಗುಜರಾತ್​ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಸೆಣಸಾಟ
author img

By

Published : Apr 4, 2023, 10:52 AM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕಳೆದ ನಾಲ್ಕು ತಿಂಗಳಿನಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಭ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದು ಬೂಸ್ಟರ್ ಡೋಸ್ ಸಿಗಲಿದೆ. ಇಂದಿನ ಪಂದ್ಯದಲ್ಲಿ ರಿಷಭ್​ ಪಂತ್ ಕೂಡ ಇರಲಿದ್ದಾರೆ ಎನ್ನಲಾಗ್ತಿದೆ. ದೆಹಲಿಯ ಅರುಣ್ ಜೇಟ್ಲಿಯಲ್ಲಿ ನಡೆಯಲಿರುವ ಈ ಪಂದ್ಯದ ವೇಳೆ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಉಪಸ್ಥಿತರಿರುತ್ತಾರೆ ಮತ್ತು ಅವರ ತಂಡವನ್ನು ಪ್ರೋತ್ಸಾಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದೀಗ ಅವರ ಎರಡನೇ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಅವರ ಮನೆಯಂಗಳದಲ್ಲಿ ಆಡಲಿದೆ. ಐಪಿಎಲ್ 2023 ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಗುಜರಾತ್ ಸೋಲಿಸಿದೆ. ಅದೇ ಉತ್ಸಾಹದಲ್ಲಿ ಇಂದು ಕಣಕ್ಕಿಳಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂದಿರುವ ಸವಾಲು ದೊಡ್ಡದಿದ್ದರೂ ರಿಷಭ್​ ಪಂತ್ ಪ್ರವೇಶ ಅವರ ಮನೋಬಲವನ್ನು ಹೆಚ್ಚಿಸಿದೆ.

ಟೀ ಶರ್ಟ್ ನೇತು ಹಾಕಿ ಪಂತ್​ರನ್ನು ನೆನಪಿಸಿಕೊಂಡ ಡೆಲ್ಲಿ: ಲಕ್ನೋ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂತ್ ಅವರ ಟೀ ಶರ್ಟ್ ಅನ್ನು ಡಗ್‌ಔಟ್‌ನಲ್ಲಿ ನೇತುಹಾಕುವ ಮೂಲಕ ತಮ್ಮ ಸ್ಫೋಟಕ ನಾಯಕನನ್ನು ನೆನಪಿಸಿಕೊಂಡಿತ್ತು. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್​ ಪಂತ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ನಿಧಾನವಾಗಿ ನಡೆಯಲು ಆರಂಭಿಸಿದ್ದು, ಇನ್ನು ಕೆಲವೇ ತಿಂಗಳಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸುವ ನಿರೀಕ್ಷೆ ಇದೆ. ಈ ನಾಲ್ಕು ತಿಂಗಳಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಬಿಸಿಸಿಐ ಗರಂ: ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರಿಷಭ್​ ಪಂತ್‌ಗೆ ಗೌರವ ಸಲ್ಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ನಡೆ ಬಿಸಿಸಿಐಗೆ ಇಷ್ಟವಾಗಲಿಲ್ಲ. ಮೊದಲ ಪಂದ್ಯದಲ್ಲಿ ಪಂತ್ ಗೌರವಾರ್ಥವಾಗಿ ಅವರ ಜೆರ್ಸಿಯನ್ನು ಪೆವಿಲಿಯನ್ ಮೇಲೆ ನೇತುಹಾಕಲಾಗಿತ್ತು. ಪ್ರಮುಖ ಘಟನೆ ಅಥವಾ ನಿವೃತ್ತಿಯ ನಂತರ ಇಂತಹ ಗೌರವವನ್ನು ನೀಡಲಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಂತ್ ಪ್ರಕರಣದಲ್ಲಿ ಎರಡೂ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಇನ್ಮುಂದೆ ಈ ರೀತಿ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.

ಪಂದ್ಯ ವೀಕ್ಷಿಸಲು ಪಂತ್ ಬರಬಹುದು: ಮಂಗಳವಾರ ದೆಹಲಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ವೀಕ್ಷಿಸಲು ರಿಷಭ್​​ ಪಂತ್ ಬರಬಹುದು. ಇದಕ್ಕಾಗಿ ಫ್ರಾಂಚೈಸಿ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕದಿಂದ ಅನುಮತಿ ಪಡೆಯಬೇಕು. ಅವಕಾಶ ನೀಡಿದರೆ ರಿಷಭ್ ಕೂಡ ಡಗ್​ಔಟ್​ನಲ್ಲಿ ಕುಳಿತುಕೊಳ್ಳಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಪಂದ್ಯದಲ್ಲಿ ರಿಷಭ್​ ಪಂತ್ ಕ್ರೀಡಾಂಗಣಕ್ಕೆ ಬರುವುದು ಮಾತ್ರವಲ್ಲದೇ ತಮ್ಮ ತಂಡದ ಆಟಗಾರರೊಂದಿಗೆ ಇರುತ್ತಾರೆ ಎಂದು ಡಿಡಿಸಿಎಂ ಕಾರ್ಯದರ್ಶಿ ತಿಳಿಸಿದ್ದಾರೆ. 2022 ರಲ್ಲಿ ರಿಷಬ್ ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಪಂದ್ಯಗಳಲ್ಲಿ 7 ಅನ್ನು ಗೆದ್ದು ಐದನೇ ಸ್ಥಾನವನ್ನು ಗಳಿಸಿತು.

ಓದಿ: ಹೀಗೆ ಮಾಡಿದಲ್ಲಿ ಆಟ ಗೆಲ್ಲಲ್ಲ.. ಚೆನ್ನೈ ಬೌಲರ್​ಗಳಿಗೆ ನಾಯಕ ಧೋನಿ ವಾರ್ನಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.