ETV Bharat / sports

2022 ರಿಂದ ಐಪಿಎಲ್​ನಲ್ಲಿ 10 ತಂಡಗಳು ಭಾಗಿ - ಐಪಿಎಲ್

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ ಸೇರಿದಂತೆ ಬಿಸಿಸಿಐ ಉನ್ನತ ಅಧಿಕಾರಿಗಳು ಶನಿವಾರ ಐಪಿಎಲ್ ಆಡಳಿತ ಮಂಡಳಿ ಅಂಗೀಕರಿಸಿದ ವಿವಿಧ ನೀತಿ ನಿರ್ಧಾರಗಳನ್ನು ವರ್ಷದ ಆರಂಭದಲ್ಲಿ ಜಾರಿಗೊಳಿಸುವ ಕುರಿತು ಸಭೆ ನಡೆಸಿದರು.

BCCI AGM: Two new teams in IPL from 2022; Women's team to tour NZ, AUS
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
author img

By

Published : Mar 14, 2021, 7:55 AM IST

ನವದೆಹಲಿ: 2022 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 10 ತಂಡಗಳು ಸೆಣಸಾಡಲಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಮುಂಬರುವ ಆವೃತ್ತಿಯ ಅಂತಿಮ ಹಂತದಲ್ಲಿ ಮೇ ತಿಂಗಳಲ್ಲಿ ಎರಡು ಹೊಸ ತಂಡಗಳನ್ನು ಹರಾಜು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ ಸೇರಿದಂತೆ ಬಿಸಿಸಿಐ ಉನ್ನತ ಅಧಿಕಾರಿಗಳು ಶನಿವಾರ ಐಪಿಎಲ್ ಆಡಳಿತ ಮಂಡಳಿ ಅಂಗೀಕರಿಸಿದ ವಿವಿಧ ನೀತಿ ನಿರ್ಧಾರಗಳನ್ನು ವರ್ಷದ ಆರಂಭದಲ್ಲಿ ಜಾರಿಗೊಳಿಸುವ ಕುರಿತು ಸಭೆ ನಡೆಸಿದರು.

"ಮುಂದಿನ ವರ್ಷದಿಂದ 10 ತಂಡಗಳ ಐಪಿಎಲ್ ನಡೆಯಲಿದೆ ಮತ್ತು ಹೊಸ ಫ್ರಾಂಚೈಸಿಗಳ ಬಿಡ್ಡಿಂಗ್ ಪ್ರಕ್ರಿಯೆ ಮತ್ತು ಅಂತಿಮಗೊಳಿಸುವಿಕೆ ಈ ವರ್ಷದ ಮೇ ತಿಂಗಳೊಳಗೆ ಪೂರ್ಣಗೊಳ್ಳುತ್ತದೆ" ಎಂದು ಬಿಸಿಸಿಐನ ಮೂಲಗಳು ತಿಳಿಸಿದೆ.

ಓದಿ : ಉತ್ತುಂಗದ ಕಾಲದಲ್ಲಿ 6 ಬಾಲಿಗೆ 6 ಸಿಕ್ಸ್​, ನಿವೃತ್ತಿಯಲ್ಲಿ 4 ಎಸೆತಕ್ಕೆ 4 ಸಿಕ್ಸ್, ಆದ್ರೂ ಖುಷಿಯಿದೆ : ಯುವಿ

ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಗೆ ಭಾರತ ತಂಡವನ್ನ ಇಂದು ಪ್ರಕಟಿಸಲಾಗುತ್ತದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗುತ್ತದೆ ಎನ್ನಲಾದ ಊಹಾಪೋಹಗಳಿಗೆ ಬಿಸಿಸಿಐ ತೆರೆ ಎಳೆದಿದ್ದು, ಯಾವ ಹಿರಿಯ ಆಟಗಾರರಿಗೂ ವಿಶ್ರಾಂತಿ ನೀಡುವುದಿಲ್ಲ ಎಂದು ತಿಳಿಸಿದೆ.

ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಇಬ್ಬರೂ ತುಂಬಾ ಉತ್ತಮವಾಗಿ ಆಡಿದ್ದಾರೆ, ಇಬ್ಬರೂ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ, ಎಂದು ಬಿಸಿಸಿಐ ತಿಳಿಸಿದೆ.

2020 ರ ಅಂತ್ಯದಲ್ಲಿ ಭಾರತೀಯ ಮಹಿಳಾ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನಂತರ ವಿಶ್ವಕಪ್‌ಗೆ ಮೊದಲು ನ್ಯೂಜಿಲೆಂಡ್‌ನಲ್ಲಿ ಸರಣಿ ಆಡಲಿದೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.