ETV Bharat / sports

ಕೊಹ್ಲಿ ಪಡೆ ವಿರುದ್ದ ಸನ್​ರೈಸರ್ಸ್ ಹೈದರಾಬಾದ್​ಗೆ 4 ರನ್​ಗಳ ರೋಚಕ ಜಯ

IPL ಕ್ರಿಕೆಟ್ ಟೂರ್ನಿಯಲ್ಲಿ ಹೈದರಾಬಾದ್ ಸರ್​ರೈಸರ್ಸ್ ತಂಡದ ವಿರುದ್ಧ ಆರ್​ಸಿಬಿ 4 ರನ್​ಗಳಿಂದ ಸೋಲನುಭವಿಸಿದೆ.

ipl
ipl
author img

By

Published : Oct 7, 2021, 12:09 AM IST

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ 4 ರನ್​ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ಕೊಹ್ಲಿ ಪಡೆ ನಿರಾಸೆ ಅನುಭವಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್ ತಂಡವನ್ನು ಕೊಹ್ಲಿ ಪಡೆ 142 ರನ್​ಗಳಿಗೆ ಕಟ್ಟಿ ಹಾಕಿತು. ಬಳಿಕ ಗುರಿ ಬೆನ್ನತ್ತಿದ ಆರ್​ಸಿಬಿ ಆರಂಭದಲ್ಲೇ ಕೊಹ್ಲಿ (5) ಹಾಗೂ ಡೇನಿಯಲ್ ಕ್ರಿಸ್ಟಿಯನ್ (1) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಒಂದೆಡೆ ಆರಂಭಿಕರಾಗಿ ಆಗಮಿಸಿ ಉತ್ತಮವಾಗಿ ಆಡುತ್ತಿದ್ದ ದೇವದತ್ ಪಡಿಕಲ್​ಗೆ ಜೊತೆಯಾದ ಶ್ರೀಕಾರ್ ಭರತ್ (12) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಈ ವೇಳೆ 38 ರನ್​ಗೆ 3 ವಿಕೆಟ್ ಕಳೆದುಕೊಂಡು ಆರ್​ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಗ್ಲೇನ್ ಮ್ಯಾಕ್ಸವೆಲ್, ಪಡಿಕಲ್ ಜೊತೆಯಾದರು. ಬಿರುಸಿನ ಆಟಕ್ಕಿಳಿದಿದ್ದ ಮ್ಯಾಕ್ಸವೆಲ್ 40 ರನ್​ಗಳಿಗೆ ರನೌಟ್ ಆದರು. ನಂತರ ಪಡಿಕಲ್ (41) ಕೂಡ ರಶಿದ್ ಖಾನ್​ಗೆ ವಿಕೆಟ್ ಒಪ್ಪಿಸಿದರು.

ಕ್ರೀಸ್​ನಲ್ಲಿ ಎಬಿ ಡಿಬಿಲಿಯರ್ಸ್ ಇದ್ದಿದ್ದರಿಂದ ಆರ್​ಸಿಬಿ ಜಯದ ಕನಸು ಕಾಣುತ್ತಿತ್ತು. ಗೆಲ್ಲಲು ಕೊನೆಯ ಎಸೆತದಲ್ಲಿ ತಂಡಕ್ಕೆ 6 ರನ್ ಬೇಕಿತ್ತು. ಆದ್ರೆ ಎಬಿಡಿ 2 ರನ್​ ಗಳಿಸಿದ್ದರಿಂದ, ಹೈದರಾಬಾದ್ ತಂಡ 4 ರನ್​ಗಳ ಜಯ ಸಾಧಿಸಿತು.

ಹೈದರಾಬಾದ್ ಪರ ಭುವನೇಶ್ವರ್ ಕುಮಾರ, ಜಾಸನ್ ಹೋಲ್ಡರ್, ಸಿದ್ದಾರ್ಥ ಕೌಲ್, ಉಮ್ರಾನ್ ಮಲಿನ್, ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಇನ್ನು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಹೈದರಾಬಾಡ್ ತಂಡ ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿದ್ದರಿಂದ 142 ರನ್​ಗಳ ಸಾಧಾರಣ ಗುರಿ ಗಳಿಸಿತು.

ಯುವ ಬ್ಯಾಟರ್​ ಅಭಿಷೇಕ್ ಶರ್ಮಾ(13) ವಿಕೆಟ್​ ಕಳೆದುಕೊಂಡರೂ ನಾಯಕ ವಿಲಿಯಮ್ಸನ್ ಮತ್ತು ಜೇಸನ್​ ರಾಯ್​ ಅತ್ಯುತ್ತಮ ಜೊತೆಯಾಟದಿಂದ 2ನೇ ವಿಕೆಟ್​ಗೆ 70 ರನ್​ ಗಳಿಸಿತು. ಆದರೆ 29 ಎಸೆತಗಳಲ್ಲಿ 31ರನ್​ಗಳಿಸಿದ್ದ ವಿಲಿಯಮ್ಸನ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಹೈದರಾಬಾದ್​ ಕುಸಿತ ಆರಂಭವಾಯಿತು.

ಯುವ ಬ್ಯಾಟರ್​ ಪ್ರಿಯಂ ಗರ್ಗ್​ 11ಎಸೆತಗಳಲ್ಲಿ ಕೇವಲ14 ರನ್​ಗಳಿಸಿ ಕ್ರಿಸ್ಚಿಯನ್​ಗೆ ವಿಕೆಟ್​ ಒಪ್ಪಿಸಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಅದೇ ಓವರ್​ ಕೊನೆಯ ಎಸೆತದಲ್ಲಿ 38 ಎಸೆತಗಳಲ್ಲಿ 44 ರನ್​ಗಳಿಸಿದ್ದ ಆರಂಭಿಕ ಜೇಸನ್ ರಾಯ್​ ಬೌಲರ್​ ಕ್ರಿಶ್ಚಿಯನ್​ಗೆ ರಿವರ್ಸ್ ಕ್ಯಾಚ್​ ನೀಡಿ ಪೆವಿಲಿಯನ್ ಸೇರಿಕೊಂಡರು. ಭರವಸೆಯ ಬ್ಯಾಟರ್​ ಅಬ್ದುಲ್ ಸಮದ್​ (1) ಮತ್ತು ವೃದ್ಧಿಮಾನ್ ಸಹಾ 10ರನ್​ಗಳಿಗೆ ಸುಸ್ತಾದರು.

ಕೊನೆಯಲ್ಲಿ ಜೇಸನ್ ಹೋಲ್ಡರ್​ 16 ಮತ್ತು ರಶೀದ್ ಅಜೇಯ 7 ರನ್​ಗಳಿಸಿದರು. ಆರ್​ಸಿಬಿ ಪರ ಹರ್ಷಲ್ ಪಟೇಲ್ 33 ರನ್​ ನೀಡಿ 3 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿದ ಡೇನಿಯಲ್ ಕ್ರಿಶ್ಚಿಯನ್​ 14ಕ್ಕೆ 2, ಯುಜ್ವೇಂದ್ರ ಚಹಾಲ್ 27ಕ್ಕೆ 1 ಮತ್ತು ಜಾರ್ಜ್​ ಗಾರ್ಟನ್​ 29ಕ್ಕೆ 1 ವಿಕೆಟ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.