ಶಾರ್ಜಾ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಮತ್ತೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ ಪಡೆ ಬೌಲಿಂಗ್ ಆಯ್ದುಕೊಂಡಿದೆ.
-
The wait continues ⌛️
— IndianPremierLeague (@IPL) September 24, 2021 " class="align-text-top noRightClick twitterSection" data="
Toss delayed further.
Next inspection at 5:55 PM (Local Time) & 07.25 PM IST. #VIVOIPL #RCBvCSK pic.twitter.com/6KXEFoZitu
">The wait continues ⌛️
— IndianPremierLeague (@IPL) September 24, 2021
Toss delayed further.
Next inspection at 5:55 PM (Local Time) & 07.25 PM IST. #VIVOIPL #RCBvCSK pic.twitter.com/6KXEFoZituThe wait continues ⌛️
— IndianPremierLeague (@IPL) September 24, 2021
Toss delayed further.
Next inspection at 5:55 PM (Local Time) & 07.25 PM IST. #VIVOIPL #RCBvCSK pic.twitter.com/6KXEFoZitu
ಶಾರ್ಜಾ ಮೈದಾನದಲ್ಲಿ ಈ ಪಂದ್ಯ ನಡೆಯತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಹಳಿಗೆ ಮರಳುವ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ. ಆದರೆ ಈಗಾಗಲೇ ಬಲಿಷ್ಠ ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಸಿಎಸ್ಕೆ ಇಂದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿ, ಗೆಲುವು ದಾಖಲಿಸುವ ಇರಾದೆಯಲ್ಲಿದೆ.
ಉಭಯ ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ(ಕ್ಯಾಪ್ಟನ್), ದೇವದತ್ ಪಡಿಕ್ಕಲ್, ಶ್ರೀಕಾರ್ ಭರತ್(ವಿ.ಕೀ), ಗ್ಲೇನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್, ಥಿಮ್ ಡೇವಿಡ್, ಹಸರಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯಜುವೇಂದ್ರ ಚಹಲ್
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯ್ಕವಾಡ, ಫಾಫ್ ಡುಪ್ಲೆಸಿಸ್, ಮೊಯಿನ್ ಅಲಿ, ಅಬಾಟಿ ರಾಯುಡು, ಸುರೇಶ್ ರೈನಾ, ಎಂ.ಎಸ್.ಧೋನಿ(ಕ್ಯಾ, ವಿ.ಕೀ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಹ್ಯಾಜಲ್ವುಡ್
ಇಂದಿನ ಪಂದ್ಯಕ್ಕಾಗಿ ಆರ್ಸಿಬಿ ಎರಡು ಬದಲಾವಣೆ ಮಾಡಿದ್ದು, ಸಚಿನ್ ಬೇಬಿ ಸ್ಥಾನದಲ್ಲಿ ನವದೀಪ್ ಸೈನಿ ಹಾಗೂ ಜೆಮೀಸನ್ ಸ್ಥಾನಕ್ಕೆ ಡೇವಿಡ್ ಆಗಮಿಸಿದ್ದಾರೆ. ಆದರೆ ಸಿಎಸ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಎರಡು ತಂಡಗಳು ಐಪಿಎಲ್ನಲ್ಲಿ 27 ಬಾರಿ ಮುಖಾಮುಖಿಯಾಗಿದ್ದು ಚೆನ್ನೈ 18 ಬಾರಿ ಮತ್ತು ಬೆಂಗಳೂರು 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈಗಾಗಲೇ ಸಿಎಸ್ಕೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಆರ್ಸಿಬಿ 3ನೇ ಸ್ಥಾನದಲ್ಲಿದೆ.
ಪಂದ್ಯಕ್ಕೆ ಆರಂಭದಲ್ಲಿ ಮರಳು ಮಿಶ್ರಿತ ಬಿರುಗಾಳಿ ಅಡಚಣೆ
-
🚨 Sandstorm Alert 🚨
— IndianPremierLeague (@IPL) September 24, 2021 " class="align-text-top noRightClick twitterSection" data="
Toss delayed in Sharjah by 10 mins! #VIVOIPL #RCBvCSK pic.twitter.com/tERTPwrpGx
">🚨 Sandstorm Alert 🚨
— IndianPremierLeague (@IPL) September 24, 2021
Toss delayed in Sharjah by 10 mins! #VIVOIPL #RCBvCSK pic.twitter.com/tERTPwrpGx🚨 Sandstorm Alert 🚨
— IndianPremierLeague (@IPL) September 24, 2021
Toss delayed in Sharjah by 10 mins! #VIVOIPL #RCBvCSK pic.twitter.com/tERTPwrpGx
ಭಾರತೀಯ ಕಾಲಮಾನದ ಪ್ರಕಾರ, ಟಾಸ್ 7 ಗಂಟೆಗೆ ನಡೆಯಬೇಕಾಗಿತ್ತು. ಆದರೆ ಮೈದಾನದಲ್ಲಿ ಮರಳು ಮಿಶ್ರಿತ ಬಿರುಗಾಳಿ ಬೀಸಿದ ಕಾರಣ 7:30ಕ್ಕೆ ಟಾಸ್ ಮಾಡಲಾಯಿತು. ಹೀಗಾಗಿ ಉಭಯ ತಂಡಗಳ ನಡುವಿನ ಪಂದ್ಯ 7:45ಕ್ಕೆ ಆರಂಭಗೊಂಡಿದೆ.