ಮುಂಬೈ (ಮಹಾರಾಷ್ಟ್ರ) : ಇತ್ತೀಚಿನ ದಿನಗಳಲ್ಲಿ ಪುರುಷರಷ್ಟೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಇನ್ನೂ ಹೆಚ್ಚಿನ ಅವಕಾಶ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಬಿಸಿಸಿಐ(ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಇದೀಗ ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಘೋಷಿಸಿದೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಇಂದು ಆಟಗಾರ್ತಿಯರ ಹರಾಜು ಪ್ರಕಿಯೆ ಮುಂಬೈನಲ್ಲಿ ನಡೆಯಲಿದೆ. ಒಟ್ಟು 5 ಫ್ರಾಂಚೈಸಿಗಳನ್ನು ಒಳಗೊಂಡ ಈ ಟೂರ್ನಿ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಋತುವಿನ ಹರಾಜಿನಲ್ಲಿ 1525 ಆಟಗಾರ್ತಿಯರು ನೋಂದಣಿ ಮಾಡಿಕೊಂಡಿದ್ದು, ಅಂತಿಮವಾಗಿ ಬಿಸಿಸಿಐ 409 ಆಟಗಾರ್ತಿಯರನ್ನು ಫೈನಲ್ ಮಾಡಿದೆ.
ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಇಂದು ಮಧ್ಯಾಹ್ನ 2.30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಇನ್ನು, ವಿಶ್ವದ ಎಲ್ಲಾ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡಲು ವರ್ಷಗಳಿಂದ ಕಾಯುತ್ತಿದ್ದಾರೆ. ಯಾವ ರೀತಿ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆಯುತ್ತದೆಯೋ ಅದೇ ಮಾದರಿಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ನ ಆಟಗಾರ್ತಿಯರನ್ನು ಹರಾಜಿನಲ್ಲಿ ಫ್ರಾಂಚೈಸಿಗಳು ಖರೀದಿಸಲಿವೆ.
ಯಾವುದೇ ಆಟಗಾರ್ತಿ ಅತ್ಯಧಿಕ ಮೂಲ ಬೆಲೆ 50 ಲಕ್ಷ ರೂ ಇದ್ದು, ಇಲ್ಲಿ ಅಗ್ರ ಭಾರತೀಯ ಮತ್ತು ಸಾಗರೋತ್ತರ ಆಟಗಾರ್ತಿರನ್ನು ಒಳಗೊಂಡಿರುತ್ತದೆ. ಈ ಪೈಕಿ ಒಟ್ಟು 24 ಆಟಗಾರರನ್ನು ಒಳಗೊಂಡಿದೆ. ಇನ್ನೂ ಇತರ ಆಟಗಾರ್ತಿಯರ ಮೂಲ ಬೆಲೆಗಳು ರೂ. 40 ಲಕ್ಷ ರೂಗಲಾಗಿದ್ದು, ಅನ್‌ಕ್ಯಾಪ್ಡ್ ತೋಡದ ಆಟಗಾರ್ತಿಯರ ಮೂಲ ಬೆಲೆ 10 ರಿಂದ 20 ಲಕ್ಷ ರೂ ಗಳನ್ನು ಹೊಂದಿರುತ್ತಾರೆ. ಇನ್ನೂ ಹರಾಜು ಪ್ರಕ್ರಿಯೆ ಮೂರು ಸೆಟ್ ಗಳಲ್ಲಿ ನಡೆಯುತ್ತಿದೆ.
ಈ ಪ್ರತಿಷ್ಠಿತ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 30 ವಿದೇಶಿ ಹಾಗೂ 60 ಭಾರತೀಯ ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾದ 28, ಇಂಗ್ಲೆಂಡ್‌ನ 27 ಆಟಗಾರ್ತಿಯರು ಮಹಿಳೆಯರ ಐಪಿಎಲ್ ಹರಾಜಿನಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್‌ನಿಂದ 23 ಮತ್ತು ನ್ಯೂಜಿಲೆಂಡ್‌ನ 19 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಇನ್ನು, ದಕ್ಷಿಣ ಆಫ್ರಿಕಾದ 17, ಶ್ರೀಲಂಕಾದ 15 ಮತ್ತು ಜಿಂಬಾಬ್ವೆಯ 11, ಬಾಂಗ್ಲಾದೇಶದ 9, ಐರ್ಲೆಂಡ್‌ನ 6 ಮತ್ತು ಅಸೋಸಿಯೇಟ್ ದೇಶದ 8 ಆಟಗಾರ್ತಿಯರು ಭಾಗವಹಿಸಲಿದ್ದಾರೆ.
ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಬ್ಯಾಟರ್ ಜೆಮಿಮಾ ರಾಡ್ರಿಗಸ್ ಈ ಟೂರ್ನಿ ಕುರಿತು ಮಾತನಾಡಿದ್ದಾರೆ. "ಇದು ವಿಶ್ವದಾದ್ಯಂತ ಮಹಿಳಾ ಕ್ರಿಕೆಟ್‌ನಲ್ಲಿ ಏನಾದರೂ ಒಂದು ಆರಂಭದ ಹಂತವಾಗಲಿದೆ ಎಂದು ನಾನು ಭಾವಿಸುತ್ತೇವೆ ಹಾಗೂ ಮಹಿಳಾ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆ ತರಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ನಂತರ ಭಾರತೀಯ ಜೆರ್ಸಿ ಧರಿಸಿದರೆ ನಮ್ಮ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದಿದ್ದಾರೆ.
ನಂತರ ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಈ ಪ್ರತಿಕ್ರಿಯಿಸಿದ್ದು, ಮಹಿಳಾ ಕ್ರಿಕೆಟ್‌ಗೆ ಇದು ಒಂದು ದೊಡ್ಡ ಕ್ಷಣವಾಗಿದೆ. ನಾನು ಯಾವಾಗಲೂ ಪುರುಷರ ಐಪಿಎಲ್ ಮತ್ತು ಹರಾಜನ್ನು ನೋಡುತ್ತೇನೆ ಮತ್ತು ಅದು ಹೇಗೆ ನಡೆಯುತ್ತದೆ ಎಂದು ನಾನು ನಿಜವಾಗಿ ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಜೆಮಿಮಾ ರೋಡ್ರಿಗಸ್ ಆಕರ್ಷಕ ಅರ್ಧ ಶತಕ.. ಪಾಕ್ ವಿರುದ್ಧ ಗೆದ್ದ ಭಾರತದ ವನಿತೆಯರು