ದುಬೈ(ಯುಎಇ): ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ನಾಲ್ಕರ ಹಂತದಲ್ಲಿ ಶ್ರೀಲಂಕಾ ಉತ್ತಮ ಆರಂಭ ಪಡೆದಿದೆ. ನಿನ್ನೆ ಸಂಜೆ ದುಬೈ ಅಂಗಣದಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ 4 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದ ಲಂಕಾ ಟೀಂ, ಗುಂಪು ಪಂದ್ಯಗಳ ಸೋಲಿಗೆ ತಕ್ಕ ಪ್ರತ್ಯುತ್ತರ ನೀಡಿತು.
ಇದಕ್ಕೂ ಮುನ್ನ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿತು. ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್ಗಳಲ್ಲಿ 175 ರನ್ ಕಲೆ ಹಾಕಿತು. ಆದ್ರೆ, ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಂಕಾ 5 ಎಸೆತ ಬಾಕಿ ಇರುವಂತೆಯೇ ಪಂದ್ಯ ಗೆದ್ದುಕೊಂಡಿದೆ.
-
Sri Lanka begin Super Four phase of #AsiaCup2022 with a win 👏🏻#SLvAFG | 📝 Scorecard: https://t.co/HqcFCcsaAx pic.twitter.com/pEEx1e7llu
— ICC (@ICC) September 3, 2022 " class="align-text-top noRightClick twitterSection" data="
">Sri Lanka begin Super Four phase of #AsiaCup2022 with a win 👏🏻#SLvAFG | 📝 Scorecard: https://t.co/HqcFCcsaAx pic.twitter.com/pEEx1e7llu
— ICC (@ICC) September 3, 2022Sri Lanka begin Super Four phase of #AsiaCup2022 with a win 👏🏻#SLvAFG | 📝 Scorecard: https://t.co/HqcFCcsaAx pic.twitter.com/pEEx1e7llu
— ICC (@ICC) September 3, 2022
ನಿಸ್ಸಾಂಕ (35) ಮತ್ತು ಮೆಂಡೀಸ್ (36) ಅವರ 50 ರನ್ ಜೊತೆಯಾಟ ಲಂಕಾಗೆ ಉತ್ತಮ ಓಪನಿಂಗ್ ಕೊಟ್ಟಿತು. ನಂತರ ಕ್ರೀಸ್‌ನಲ್ಲಿ ಜತೆಯಾದ ಗುಣತಿಲಕ (33) ಭಾನುಕಾ ರಾಜಪಕ್ಸ (31) ಮತ್ತು ಹಸರಂಗ(16) ರ ಆಟ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.
ಅಫ್ಘನ್ನರ ಮಧ್ಯಮ ಕ್ರಮಾಂಕ ಕುಸಿತ, ರಹಮನುಲ್ಲಾ ಆಸರೆ: ರಹಮನುಲ್ಲಾರ 84 ರನ್ ಕೊಡುಗೆ ಲಂಕಾ ತಂಡಕ್ಕೆ ಉತ್ತಮ ಟಾರ್ಗೆಟ್ ನೀಡಲು ಸಹಕಾರಿಯಾಗಿತ್ತು. ಅವರ ಬಿರುಸಿನ ಆಟದಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ಗಳು ಸೇರಿದ್ದವು. ಆದರೆ, ರಹಮನುಲ್ಲಾ ಹೊರತುಪಡಿಸಿ ಬೇರಾವುದೇ ಆಟಗಾರ ತಂಡಕ್ಕೆ ಯೋಗ್ಯ ರನ್‌ಗಳ ಕಾಣಿಕೆ ನೀಡಲಿಲ್ಲ. ಇನಿಂಗ್ಸ್‌ನ ಕೊನೆಯ 3 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ ಆಟಗಾರರು ಕೇವಲ 25 ರನ್‌ಗಳನ್ನಷ್ಟೇ ಸೇರಿಸಲು ಶಕ್ತರಾದರು. ಇದು ತಂಡ ಬೃಹತ್ ಮೊತ್ತ ಸೇರಿಸಲು ಹಿನ್ನಡೆಯಾಗಿತ್ತು.
ಇದನ್ನೂ ಓದಿ:ವಿಶ್ವಕಪ್ಗೂ ಮೊದಲೇ ಭಾರತಕ್ಕೆ ಆಘಾತ.. ತಾರಾ ಆಲ್ರೌಂಡರ್ ಟಿ20 ವಿಶ್ವಕಪ್ಗೆ ಮಿಸ್ ಸಾಧ್ಯತೆ