ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಪಂದ್ಯ 31ನೇ ಪಂದ್ಯ ಮುಂಬೈ ಇಂಡಿಯನ್ಸ್ (MI) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ನಡೆದಿದ್ದು, ಈ ಆವೃತ್ತಿಯ ಮತ್ತೊಂದು ಅಂತಿಮ-ಓವರ್ ಥ್ರಿಲ್ಲರ್ ಮ್ಯಾಚ್ ಇದಾಗಿತ್ತು. ಕೊನೆಯ ಆರು ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿತ್ತು. ಕ್ಯಾಮರೂನ್ ಗ್ರೀನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ನ ಬಲದಿಂದ ಗೆಲುವಿನ ಸನಿಹದಲ್ಲಿದ್ದ ಎಂಐಗೆ ಕೊನೆಯ ಓವರ್ ಸಂಕಷ್ಟಕ್ಕೆ ಒಡ್ಡಿದ್ದಲ್ಲೇ 215 ರನ್‌ನ ಗುರಿ ಮುಟ್ಟುವಲ್ಲಿ 13 ರನ್ನಿಂದ ವಿಫಲವಾಯಿತು.
ಪಂಜಾಬ್‌ನ ಎಡಗೈ ವೇಗಿ ಮುಂಬೈ ಇಂಡಿಯನ್ಸ್‌ನ ತಿಲಕ್ ವರ್ಮಾ ಮತ್ತು ನೆಹಾಲ್ ವಧೇರಾ ಅವರನ್ನು ಸತತ ಎರಡು ಎಸೆತಗಳಲ್ಲಿ ಒಂದರ ಹಿಂದೆ ಒಂದರಂತೆ ಯಾರ್ಕರ್ ಹಾಕಿ ಸ್ಟಂಪ್ನ್ನು ಅರ್ಧಕ್ಕೆ ಮುರಿದರು. ಅರ್ಷದೀಪ್ ಅವರ ಎಸೆತಗಳು ಎಷ್ಟು ನಿಖರವಾಗಿತ್ತೆಂದರೆ ಚೆಂಡು ನಿಖರವಾಗಿ ಕ್ಯಾಮರಾ ಹೋಲ್ ಇರುವಲ್ಲಿಗೆ ಬಡಿದು, ವಿಕೆಟ್ ಎರಡು ತುಂಡಾಗಿ ಸ್ಟಂಪ್ ಮೈಕ್ ಹೊರಗೆ ಹಾರಿಹೋಯಿತು.
ಒಂದು ಎಲ್‌ಇಡಿ ಸ್ಟಂಪ್‌ನ ಬೆಲೆ ಎಷ್ಟು?: ಬ್ರ್ಯಾಂಡ್, ವಿನ್ಯಾಸ ಮತ್ತು ವೈಶಿಷ್ಟ್ಯಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿ ಕ್ರಿಕೆಟ್‌ನಲ್ಲಿ ಕ್ಯಾಮೆರಾ ಮತ್ತು ಜಿಂಗ್ ಬೈಲ್‌ಗಳೊಂದಿಗಿನ ಎಲ್‌ಇಡಿ ಸ್ಟಂಪ್‌ಗಳ ಬೆಲೆ ಹೆಚ್ಚು ಕಮ್ಮಿಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ, ಕ್ಯಾಮೆರಾ ಮತ್ತು ಜಿಂಗ್ ಬೈಲ್‌ಗಳೊಂದಿಗೆ ಉನ್ನತ ಮಟ್ಟದ ಎಲ್‌ಇಡಿ ಸ್ಟಂಪ್‌ಗಳ ಬೆಲೆ ಲಕ್ಷಗಳಾಗುತ್ತದೆ ಎನ್ನಲಾಗಿದೆ.
-
The Arhsdeep Singh effect 🔥🔥
— IndianPremierLeague (@IPL) April 22, 2023 " class="align-text-top noRightClick twitterSection" data="
When the left-arm pacer executed his yorkers to perfection 👌👌
WATCH here 🎥🔽 #TATAIPL | #MIvPBKShttps://t.co/u3ClO3fo9I
">The Arhsdeep Singh effect 🔥🔥
— IndianPremierLeague (@IPL) April 22, 2023
When the left-arm pacer executed his yorkers to perfection 👌👌
WATCH here 🎥🔽 #TATAIPL | #MIvPBKShttps://t.co/u3ClO3fo9IThe Arhsdeep Singh effect 🔥🔥
— IndianPremierLeague (@IPL) April 22, 2023
When the left-arm pacer executed his yorkers to perfection 👌👌
WATCH here 🎥🔽 #TATAIPL | #MIvPBKShttps://t.co/u3ClO3fo9I
ಕ್ಯಾಮೆರಾಗಳು ಮತ್ತು ಝಿಂಗ್ ಬೈಲ್‌ಗಳೊಂದಿಗೆ ಎಲ್‌ಇಡಿ ಸ್ಟಂಪ್‌ಗಳನ್ನು ಒಳಗೊಂಡಿರುವ ಝಿಂಗ್ ಸಿಸ್ಟಮ್, ಬಹು ಸೆಟ್‌ಗಳ ಸ್ಟಂಪ್‌ಗಳು ಮತ್ತು ಬೈಲ್‌ಗಳ ಸಂಪೂರ್ಣ ಸೆಟ್ಗೆ 40,000 ದಿಂದ 50,000 ಡಾಲರ್ ಅಂದರೆ 32 ಲಕ್ಷದಿಂದ 41 ಲಕ್ಷದವರೆಗೆ ಬೆಲೆ ಇದೆ ಎನ್ನಲಾಗಿದೆ. ಸ್ಟಂಪ್ ವಿಷನ್ ಮತ್ತು ಇಂಟೆಲಿಕಾನ್ ವಿಕೆಟ್ಗಳಿಗೆ 5,000 ದಿಂದ 20,000 ಡಾಲರ್ ಅಂದರೆ 4 ಲಕ್ಷದಿಂದ 16 ಲಕ್ಷವರೆಗೆ ಆಗುತ್ತದೆ.
ಕೆಲ ವಿಮರ್ಶೆಗಳ ಪ್ರಕಾರ ಇಬ್ಬರು ಭಾರತೀಯ ಆಟಗಾರರ ಐಪಿಎಲ್ ಹರಾಜಿನ ಮೂಲ ಬೆಲೆಯಷ್ಟರ ಸ್ಟಂಪ್ನ್ನು ನಿನ್ನೆ ಅರ್ಷದೀಪ್ ಮುರಿದಿದ್ದಾರೆ. ಭಾರತೀ ಆಟಗಾರನ ಮೂಲ ಬೆಲೆ 20 ಲಕ್ಷ ಇದೆ. ಎರಡು ಸ್ಟಂಪ್‌ನ ಬೆಲೆ ಸರಿಸುಮಾರು 40 ಲಕ್ಷ ಎಂದು ಹೇಳಳಾಗುತ್ತಿದೆ. ಹೀಗಾಗಿ ಎರಡು ಭಾರತೀಯ ಆಟಗಾರರ ಮೂಲ ಬೆಲೆಯಷ್ಟು ನಿನ್ನೆ ಬಿಸಿಸಿಐಗೆ ನಷ್ಟವಾಗಿದೆ ಎನ್ನಬಹುದು.
ಸ್ಟಂಪ್ ಕ್ಯಾಮೆರಾಗಳ ಪ್ರಾರಂಭ ಯಾವಾಗ? : ಸ್ಟಂಪ್‌ಗಳಲ್ಲಿ ಕ್ಯಾಮೆರಾಗಳನ್ನು ಮೊದಲು ಕ್ರಿಕೆಟ್‌ನಲ್ಲಿ 2008ರಲ್ಲಿ ಬಳಸಲಾಯಿತು. ಆರಂಭದಲ್ಲಿ ಬಿಬಿಜಿ ಸ್ಪೋರ್ಟ್ಸ್ ಎಂಬ ಆಸ್ಟ್ರೇಲಿಯನ್ ಕಂಪನಿಯು ಈ ರೀತಿಯ ವಿಕೆಟ್ನ್ನು ಪರಿಚಯಿಸಿತ್ತು. ನಂತರ ಇದನ್ನು ಬ್ರಿಟಿಷ್ ಕಂಪನಿ ಸ್ಟಂಪ್ ಕ್ಯಾಮ್ ಲಿಮಿಟೆಡ್ ಕ್ರಿಕೆಟ್‌ನಲ್ಲಿ ಬಳಕೆಗೆ ಪರಿಚಯಿಸಿತು.
ಮಾರ್ಚ್ 23, 2008 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ ವೃತ್ತಿಪರ ಕ್ರಿಕೆಟ್‌ನಲ್ಲಿ ಬಳಸಲಾಯಿತು. ನಂತರ ತಂತ್ರಜ್ಞಾನವನ್ನು ಝಿಂಗ್ ಸೇರಿದಂತೆ ಹಲವಾರು ಇತರ ಕಂಪನಿಗಳು ಅಭಿವೃದ್ಧಿಪಡಿಸಿದವು. ಇಂಟೆಲ್ ವಿಕೆಟ್ಗಳು ಈಗ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಬಳಕೆಯಲ್ಲಿದೆ.
ಇದನ್ನೂ ಓದಿ: RCB vs RR: ಮ್ಯಾಕ್ಸ್ವೆಲ್ - ಡು ಪ್ಲೆಸಿಸ್ ಭರ್ಜರಿ ಬ್ಯಾಟಿಂಗ್, ರಾಜಸ್ಥಾನಕ್ಕೆ 190 ರನ್ ಸ್ಪರ್ಧಾತಕ ಗುರಿ