ಅಹಮದಾಬಾದ್: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಆರ್ಆರ್ ತಂಡದ ಪ್ರಮುಖ ವೇಗಿ ಆಂಡ್ರ್ಯೂ ಟೈ ಕೂಡ ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳುವ ನಿರ್ಧಾರ ಕೈಗೊಂಡು ಆಸ್ಟ್ರೇಲಿಯಾಗೆ ವಾಪಸಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ಈಗಾಗಲೇ ಪ್ರಮುಖ ಆಟಗಾರರ ಸೇವೆಯಿಂದ ವಂಚಿತವಾಗಿದೆ. ಬೆನ್ ಸ್ಟೋಕ್ಸ್ ಗಾಯಗೊಂಡು ಟೂರ್ನಿಯಿಂದ ಹೊರನಡೆದರೆ, ವೇಗಿ ಜೋಫ್ರಾ ಆರ್ಚರ್ ಈ ಬಾರಿಯ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂದು ಇಸಿಬಿ ಘೋಷಿಸಿತ್ತು. ಈ ಮಧ್ಯೆ ಲಿಯಾಮ್ ಲಿವಿಂಗ್ಸ್ಟನ್ ಕೂಡ ಬಯೋಬಬಲ್ ಕಾರಣ ನೀಡಿ ತವರಿಗೆ ಮರಳಿದ್ದಾರೆ.
-
"A lot of positives to take and build on from here!" #HallaBol | #RoyalsFamily | #RRvKKR | @KumarSanga2 pic.twitter.com/VWo2OxfhsI
— Rajasthan Royals (@rajasthanroyals) April 25, 2021 " class="align-text-top noRightClick twitterSection" data="
">"A lot of positives to take and build on from here!" #HallaBol | #RoyalsFamily | #RRvKKR | @KumarSanga2 pic.twitter.com/VWo2OxfhsI
— Rajasthan Royals (@rajasthanroyals) April 25, 2021"A lot of positives to take and build on from here!" #HallaBol | #RoyalsFamily | #RRvKKR | @KumarSanga2 pic.twitter.com/VWo2OxfhsI
— Rajasthan Royals (@rajasthanroyals) April 25, 2021
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಂಡ್ರ್ಯೂ ಟೈ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶವನ್ನೂ ಪಡೆದುಕೊಂಡಿರಲಿಲ್ಲ. ಈಗ ರಾಜಸ್ಥಾನ್ ರಾಯಲ್ಸ್ ಕೇವಲ ನಾಲ್ಕು ವಿದೇಶಿ ಆಟಗಾರರನ್ನು ಹೊಂದಿದೆ. ಆಂಡ್ರೋ ಟೈ ತವರಿಗೆ ಮರಳಿದ ಬಗ್ಗೆ ಕುಮಾರ್ ಸಂಗಕ್ಕಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹೆಚ್ಚುತ್ತಿರುವ ಕೋವಿಡ್ -19 : ಐಪಿಎಲ್ ಬಿಟ್ಟು ತವರಿಗೆ ಮರಳಲು ಆಸೀಸ್ ಆಟಗಾರರ ಚಿಂತನೆ..