ETV Bharat / sports

ಬೂಮ್ರಾ ಬೌಲಿಂಗ್ ಎದುರಿಸಲು ABDಯಿಂದ ಮಾತ್ರ ಸಾಧ್ಯ: ಗೌತಮ್ ಗಂಭೀರ್ - ಕೋಲ್ಕತ್ತಾ ನೈಟ್ ರೈಡರ್ಸ್

ಐಪಿಎಲ್​​-2021ರ ಎರಡನೇ ಹಂತದ ಪಂದ್ಯ ಶೀಘ್ರದಲ್ಲೇ ಶುರುವಾಗಲಿದೆ. ಈ ಮಧ್ಯೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೀಡಿರುವ ಆ ಒಂದು ಹೇಳಿಕೆ ಭಾರಿ ಕುತೂಹಲ ಮೂಡಿಸಿದೆ.

ಗೌತಮ್ ಗಂಭೀರ್
ಗೌತಮ್ ಗಂಭೀರ್
author img

By

Published : Sep 16, 2021, 2:00 PM IST

ನವದೆಹಲಿ: ಜಸ್​ಪ್ರೀತ್​ ಬುಮ್ರಾ ಬೌಲಿಂಗ್ ಎದುರಿಸಲು ಎಬಿ ಡಿವಿಲಿಯರ್ಸ್​ರಿಂದ ಮಾತ್ರ ಸಾಧ್ಯ ಎಂದು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್​ ಕೊಹ್ಲಿ (ಆರ್​ಸಿಬಿ) ತಂಡ ಹಲವಾರು ಉತ್ತಮ ಆಟಗಾರರನ್ನು ಹೊಂದಿದ್ದು, ಎದುರಾಳಿ ತಂಡವನ್ನು ಸಲೀಸಾಗಿ ಮಣಿಸಿ, ಪ್ರಾಬಲ್ಯ ಸಾಧಿಸಬಹುದು ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಹೇಳಿದ್ದಾರೆ.

2021 ರ ಐಪಿಎಲ್​ ಮುಂದೂಡುವ ಮುನ್ನ ಆರ್​ಸಿಬಿ ಆಡಿದ ಏಳು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಗೆದ್ದು, ಮೂರನೇ ಸ್ಥಾನದಲ್ಲಿದೆ. ಐಪಿಎಲ್ 2021 ರ ಎರಡನೇ ಹಂತದ ಪಂದ್ಯಕ್ಕೆ ಮೂರು ದಿನಗಳು ಬಾಕಿ ಇದ್ದು, ಆರ್​ಸಿಬಿ ಮೊದಲ ಕಪ್ ಕೈ ವಶ ಮಾಡಿಸಿಕೊಳ್ಳಲು ಹವಣಿಸುತ್ತಿದೆ.

ಕೊಹ್ಲಿ ಪಡೆಯಲ್ಲಿ ಎಬಿಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್​ ಅವರಂತಹ ಅದ್ಭುತ ಆಟಗಾರರಿದ್ದಾರೆ. ಅದರಲ್ಲೂ ಎಬಿಡಿ ಅತ್ಯದ್ಭುತ ಆಟಗಾರನಾಗಿದ್ದಾನೆ ಎಂದು ಗಂಭೀರ್ ಹೇಳಿದ್ದಾರೆ.

ಈ ಬಾರಿ ಕೊಹ್ಲಿ ಹಾಗೂ ಡಿವಿಲಿಯರ್ಸ್ ನೇತೃತ್ವದಲ್ಲಿ ಆರ್​ಸಿಬಿ ಪಂದ್ಯ ಗೆಲ್ಲಲೇಬೇಕು. ಇಲ್ಲವಾದಲ್ಲಿ ವರ್ಷದಿಂದ ವರ್ಷಕ್ಕೆ ಅವರ ಮೇಲೆ ಒತ್ತಡ ಹೆಚ್ಚುತ್ತಲೇ ಇರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಪಂಜಾಬ್​ ಪರ ಕ್ರಿಸ್​​ ಗೇಲ್ ಆರಂಭಿಕರಾಗಿ ಬ್ಯಾಟಿಂಗ್ ಮಾಡಬೇಕು: ಗಂಭೀರ್​​​

ಐಪಿಎಲ್ 2021 ರ ಎರಡನೇ ಹಂತದ ಪಂದ್ಯ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್ 20 ರಂದು ಆರ್​ಸಿಬಿ, ಕೋಲ್ಕತ್ತಾ ವಿರುದ್ಧ ಸೆಣಸಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.