ದುಬೈ:ಪೃಥ್ವಿ ಶಾ ಮತ್ತು ನಾಯಕ ರಿಷಭ್ ಪಂತ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ನ ಮೊದಲ ಕ್ವಾಲಿಫೈಯರ್ನಲ್ಲಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ಗೆ 173 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಪವರ್ ಪ್ಲೇ ಮುಗಿಯುವುದರೊಳಗೆ ಶಿಖರ್ ಧವನ್(7) ಮತ್ತು ಶ್ರೇಯಸ್ ಅಯ್ಯರ್(1) ವಿಕೆಟ್ ಕಳೆದುಕೊಂಡಿತು.
-
Innings Break!
— IndianPremierLeague (@IPL) October 10, 2021 " class="align-text-top noRightClick twitterSection" data="
An all important 83-run partnership between Hetmyer and Pant and a fine knock of 60 from Prithvi Shaw propel #DelhiCapitals to a total of 172/5 on the board.#CSK chase coming up shortly.
Scorecard - https://t.co/38XLwtuZDX #Qualifier1 #VIVOIPL pic.twitter.com/83y74L89Gg
">Innings Break!
— IndianPremierLeague (@IPL) October 10, 2021
An all important 83-run partnership between Hetmyer and Pant and a fine knock of 60 from Prithvi Shaw propel #DelhiCapitals to a total of 172/5 on the board.#CSK chase coming up shortly.
Scorecard - https://t.co/38XLwtuZDX #Qualifier1 #VIVOIPL pic.twitter.com/83y74L89GgInnings Break!
— IndianPremierLeague (@IPL) October 10, 2021
An all important 83-run partnership between Hetmyer and Pant and a fine knock of 60 from Prithvi Shaw propel #DelhiCapitals to a total of 172/5 on the board.#CSK chase coming up shortly.
Scorecard - https://t.co/38XLwtuZDX #Qualifier1 #VIVOIPL pic.twitter.com/83y74L89Gg
ನಂತರ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಅಕ್ಷರ್ ಪಟೇಲ್ ಕೇವಲ 10 ರನ್ಗಳಿಸಿ ಔಟಾದರು. ಕೇವಲ 34 ಎಸೆತಗಳಲ್ಲಿ 7 ಬೌಂಡರಿ,3 ಸಿಕ್ಸರ್ಗಳ ಸಹಿತ 60 ರನ್ಗಳಿಸಿದ್ದ ಪೃಥ್ವಿ ಶಾ ಕೂಡ ಪಟೇಲ್ ಔಟಾದ ನಂತರದ ಓವರ್ನಲ್ಲೇ ವಿಕೆಟ್ ಒಪ್ಪಿಸಿದರು.
80 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಸಂದರ್ಭದಲ್ಲಿ ಜೊತೆಯಾದ ನಾಯಕ ಪಂತ್ ಮತ್ತು ಹೆಟ್ಮಾಯರ್ 5ನೇ ವಿಕೆಟ್ಗೆ 83 ರನ್ಗಳನ್ನು ಸೇರಿಸಿದರು. ಪಂತ್ 35 ಎಸೆತಗಳಲ್ಲಿ 3 ಬೌಂಡರಿ ಮತ್ತು ಸಿಕ್ಸರ್ ಸಹಿತ 51 ರನ್ಗಳಿಸಿದರೆ, ಹೆಟ್ಮಾಯರ್ 24 ಎಸೆಗಳಲ್ಲಿ 37 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಸಿಎಸ್ಕೆ ಪರ ಜೋಸ್ ಹೆಜಲ್ವುಡ್ 29ಕ್ಕೆ 2, ಜಡೇಜಾ 23ಕ್ಕೆ1, ಮೊಯೀನ್ ಅಲಿ 27ಕ್ಕೆ1, ಬ್ರಾವೋ 31ಕ್ಕೆ 1 ವಿಕೆಟ್ ಪಡೆದು ಮಿಂಚಿದರು.