ಮುಂಬೈ: ಕೋವಿಡ್ 19 ಕಾರಣದಿಂದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದರಿಂದ ಬಿಸಿಸಿಐ, ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಸ್ಫೋರ್ಟ್ಸ್ ಮತ್ತು 8 ಐಪಿಎಲ್ ಫ್ರಾಂಚೈಸಿಗಳು ಭಾರಿ ನಷ್ಟ ಅನುಭವಿಸಲಿವೆ.
ಕಳೆದ ಆವೃತ್ತಿಗೆ ಹೋಲಿಸಿದರೆ ಬಿಸಿಸಿಐ ಸರಿಸುಮಾರು 2000 ಕೋಟಿಗಿಂತಲೂ ಹೆಚ್ಚು ನಷ್ಟ ಅನುಭವಿಸಲಿದೆ. ಆದರೆ, ಐಪಿಎಲ್ನಲ್ಲಿ ಭಾಗವಹಿಸುವ ಆಟಗಾರರು ಮಾತ್ರ ಸಂಪೂರ್ಣ ವೇತನ ಪಡೆಯಲಿದ್ದಾರೆ.
ಆಟಗಾರರ ಒಪ್ಪಂದದ ನಿಯಮಗಳ ಪ್ರಕಾರ ಫ್ರಾಂಚೈಸಿಗಳು ಆಟಗಾರರಿಗೆ ಮೂರು ಕಂತುಗಳಲ್ಲಿ ವೇತನವನ್ನು ನೀಡಲಿವೆ. ಈಗಾಗಲೇ ಮೊದಲ ಕಂತನ್ನು ನೀಡಿವೆ. ಉಳಿದ 2 ಕಂತುಗಳಿ ಟೂರ್ನಿ ಮುಗಿಯುವ ವೇಳೆಗೆ ನೀಡಬೇಕಿರುತ್ತದೆ. ಒಂದು ವೇಳೆ ಬಿಸಿಸಿಐ ಟೂರ್ನಿಯನ್ನು ಮುಂದುವರಿಸಲು ಸಾಧ್ಯವಾಗದಿದ್ದರೂ ಆಟಗಾರರಿಗೆ ಸಂಪೂರ್ಣ ವೇತನವನ್ನು ಪಡೆಯುತ್ತಾರೆ.
ಆಟಗಾರರ ವೇತನವನ್ನು ಫ್ರಾಂಚೈಸಿ ವಿಮಾ ಪಾಲಿಸಿಗಳ ಅಡಿ ಮೊದಲೇ ವಿಮೆ ಮಾಡಲಾಗಿರುತ್ತದೆ. ಟೂರ್ನಿಯ ವೇಳೆ ಆಟಗಾರರು ಗಾಯಕ್ಕೊಳಗಾದರೆ, ಇನ್ಯಾವುದೇ ಅವಘಡದ ಸಂದರ್ಭದಲ್ಲಿ ಇನ್ಸೂರೆನ್ಸ್ ಮೂಲಕ ಹಣ ಪಡೆಯಲಿದ್ದಾರೆ. ವರದಿಯ ಪ್ರಕಾರ 2021ರ ಐಪಿಎಲ್ ಆಟಗಾರರ ಒಟ್ಟು ವೇತನ 483 ಕೋಟಿ ರೂಪಾಯಿಗಳಾಗಿವೆ.
ಇದನ್ನು ಓದಿ:ಜನ ಸೋಂಕಿನಿಂದ ಸಾಯುತ್ತಿರುವಾಗ ಐಪಿಎಲ್ ನೋಡುವುದು ಅಸಹ್ಯ; ನಾಸಿರ್ ಹುಸೇನ್