ETV Bharat / sports

ಐಪಿಎಲ್​ 2023: ಡಿಸೆಂಬರ್​​ನಲ್ಲಿ ಮಿನಿ ಹರಾಜು, ಬಿಡ್ ಮಾಡಲು ತಂಡಗಳ ಬಳಿ ಉಳಿದ ಹಣವೆಷ್ಟು? - Retained players list requested from teams

ಮುಂದಿನ ವರ್ಷದ ಐಪಿಎಲ್​ಗೂ ಮೊದಲು ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ತಂಡದಲ್ಲಿ ಈಗಿರುವ ಆಟಗಾರರ ಬದಲಿಗೆ, ಬೇರೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ipl-mini-auction-likely-in-december
ಡಿಸೆಂಬರ್​​ನಲ್ಲಿ ಮಿನಿ ಹರಾಜು
author img

By

Published : Oct 17, 2022, 7:18 AM IST

ಐಪಿಎಲ್​ ಮೆಗಾ ಹರಾಜಿನಲ್ಲಿ ಖರೀದಿಯಾಗದ ಮತ್ತು ಉಳಿದ ಆಟಗಾರರನ್ನು ಖರೀದಿಸಲು ಕಿರು ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಮುಂದಾಗಿದ್ದು, ಎಲ್ಲ ಪ್ರಾಂಚೈಸಿಗಳು ತಾವು ಉಳಿಸಿಕೊಂಡ ಆಟಗಾರರ ಪಟ್ಟಿ ನೀಡಲು ಕೋರಿದೆ.

ಐಪಿಎಲ್​-2023 ಸಿದ್ಧತೆಯ ಭಾಗವಾಗಿ ಈ ಕಿರು ಹರಾಜು ನಡೆಸಲಾಗುತ್ತಿದೆ. ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್​ನಲ್ಲಿ ಮಿನಿ ಹರಾಜು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನೂ ಯಾವುದೇ ದಿನಾಂಕ ನಿಗದಿ ಮಾಡಿಲ್ಲ. ನವೆಂಬರ್​ 15 ರೊಳಗೆ ಫ್ರಾಂಚೈಸಿಗಳಿಗೆ ಎಲ್ಲ ಆಟಗಾರರ ಪಟ್ಟಿ ನೀಡಲು ಸೂಚಿಸಲಾಗಿದೆ.

ಮೆಗಾ ಹರಾಜಿಗೂ ಮೊದಲು ಎಲ್ಲ ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಈ ಮಿನಿ ಹರಾಜಿನಲ್ಲಿ ಅಂತಹ ಆಯ್ಕೆ ಇರುವುದಿಲ್ಲ. ತಂಡ ಹಿಂದಿನ ಹರಾಜಿನಲ್ಲಿ ಖರ್ಚು ಮಾಡಿದ ಹಣದ ಮೇಲೆ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಖರ್ಚು ಮಾಡಲು ಈ ಬಾರಿ ಅವಕಾಶವಿದೆ. ಇದು 95 ಕೋಟಿ ರೂಪಾಯಿ ದಾಟಬಾರದು ಎಂಬ ನಿಯಮ ವಿಧಿಸಲಾಗಿದೆ.

ತಂಡಗಳ ಬಳಿ ಉಳಿದ ಹಣವೆಷ್ಟು?: ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಬಿಡ್​ ಮಾಡಿದ ಬಳಿಕ ಈಗ ಪ್ರತಿ ತಂಡಗಳಲ್ಲಿ ಕಡಿಮೆ ಹಣ ಉಳಿದಿದೆ. ಇದರಲ್ಲಿ ಪಂಜಾಬ್​ ಕಿಂಗ್ಸ್​ 3.45 ಕೋಟಿ ರೂಪಾಯಿ ಉಳಿಸಿಕೊಂಡಿದ್ದು, ಅತ್ಯಧಿಕವಾಗಿದೆ. ಹಾಗೆಯೇ ಲಖನೌ ಸೂಪರ್ ಜೈಂಟ್ಸ್ ತನ್ನೆಲ್ಲಾ ಹಣವನ್ನು ಬಿಡ್​ನಲ್ಲಿ ಬಳಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 1.55 ಕೋಟಿ, ರಾಜಸ್ಥಾನ್ ರಾಯಲ್ಸ್ 0.95 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 0.45 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 2.95 ಕೋಟಿ, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಬಳಿ 0.15 ಕೋಟಿ ಉಳಿದಿದ್ದರೆ, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಲಾ 0.10 ಕೋಟಿ ರೂಪಾಯಿ ಹಣವನ್ನು ಹೊಂದಿವೆ.

ಮಿನಿ ಹರಾಜಿನಲ್ಲಿ ದುಬಾರಿ ಬಿಡ್​: ಈ ಹಿಂದೆ ನಡೆದ ಮಿನಿ ಹರಾಜಿನಲ್ಲಿ ದುಬಾರಿ ಬಿಡ್​ ಕೂಡ ಹೂಡಿ ಆಟಗಾರರನ್ನು ಖರೀದಿ ಮಾಡಲಾಗಿದೆ. 2021ರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್​ 16.25 ಕೋಟಿ ರೂಪಾಯಿ ನೀಡಿ ದಕ್ಷಿಣ ಆಫ್ರಿಕಾದ ವೇಗಿ ಕ್ರಿಸ್​ ಮೋರಿಸ್​ರನ್ನು ಖರೀದಿಸಿತ್ತು. ಇದು ಈವರೆಗೂ ದೊಡ್ಡ ಮೊತ್ತದ ಖರೀದಿಯಾಗಿದೆ.

2015ರಲ್ಲಿ ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್‌ರನ್ನು ದೆಹಲಿ ತಂಡ 16 ಕೋಟಿ ರೂಪಾಯಿ ನೀಡಿದರೆ, 2020 ರಲ್ಲಿ ನೈಟ್ ರೈಡರ್ಸ್‌ 15.5 ಕೋಟಿ ರೂಪಾಯಿ ನೀಡಿ ಪ್ಯಾಟ್ ಕಮ್ಮಿನ್ಸ್​ರನ್ನು ಖರೀದಿಸಿತ್ತು. 2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ನಿಂದ ಬೆನ್ ಸ್ಟೋಕ್ಸ್​ಗೆ 14.50 ಕೋಟಿ ನೀಡಲಾಗಿತ್ತು.

ಮಿನಿ ಹರಾಜಿನಲ್ಲಿ ಫ್ರಾಂಚೈಸಿಗಳು ವಿದೇಶಿ ಆಟಗಾರರ ಮೇಲೆ ಗಮನಹರಿಸಿದ್ದಾರೆ. ಇಂಗ್ಲೆಂಡ್​ನ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರ್ರನ್ ಮತ್ತು ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ರೇಸ್​ನಲ್ಲಿದ್ದಾರೆ.

ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಮೆಗಾ ಹರಾಜಿನಲ್ಲಿ 7 ವಿದೇಶಿ ಆಟಗಾರರನ್ನು ಮಾತ್ರ ಖರೀದಿಸಿವೆ. ಹೀಗಾಗಿ ಅವರು ಮತ್ತಷ್ಟು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಿಡ್​ ಹೂಡಲಿವೆ. ಬಿಡ್​ ಹಣ ಹೆಚ್ಚಿಸಲು ತಂಡಗಳು ಈಗಿರುವ ವಿದೇಶಿಗರಲ್ಲಿ ಒಬ್ಬರು ಅಥವಾ ಅದಕ್ಕಿಂತಲೂ ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡಬಹುದು.

ಓದಿ: ಬೆಂಗಾಲ್ ಕ್ರಿಕೆಟ್ ಸಂಸ್ಥೆಯಲ್ಲಿ ಈಗ ದಾದಾರದ್ದೇ ಸದ್ದು...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.