ಹೈದರಾಬಾದ್: ಕೊರೊನಾ ವೈರಸ್ನಿಂದಾಗಿ ಅರ್ಧಕ್ಕೆ ಮೊಟಕುಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಪುನಾರಂಭಗೊಳ್ಳಲಿದೆ. ಭಾರತೀಯ ಕ್ರಿಕೆಟ್ ಮಂಡಳಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೀಗಾಗಿ ಅನೇಕ ಫ್ರಾಂಚೈಸಿಗಳು ಫುಲ್ ಖುಷ್ ಆಗಿವೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಮುಂದೂಡಿಕೆಯಾಗಿರುವ ಐಪಿಎಲ್ ಯುಎಇನಲ್ಲಿ ಆಯೋಜನೆಗೊಳ್ಳಲಿದೆ. ಮಹತ್ವದ ನಿರ್ಧಾರ ಹೊರಬರುತ್ತಿದ್ದಂತೆ ರಾಜಸ್ಥಾನ ರಾಯಲ್ಸ್ ವಿಶೇಷ ವಿಡಿಯೋ ಶೇರ್ ಮಾಡಿಕೊಂಡು ಸಂಭ್ರಮಿಸಿದೆ.
-
Wait, what? 🤔🙊😂#HallaBol | #RoyalsFamily | #IPL2021 pic.twitter.com/63GIT4BGAp
— Rajasthan Royals (@rajasthanroyals) May 29, 2021 " class="align-text-top noRightClick twitterSection" data="
">Wait, what? 🤔🙊😂#HallaBol | #RoyalsFamily | #IPL2021 pic.twitter.com/63GIT4BGAp
— Rajasthan Royals (@rajasthanroyals) May 29, 2021Wait, what? 🤔🙊😂#HallaBol | #RoyalsFamily | #IPL2021 pic.twitter.com/63GIT4BGAp
— Rajasthan Royals (@rajasthanroyals) May 29, 2021
ರಾಜಸ್ಥಾನ ರಾಯಲ್ಸ್ ಟ್ವಿಟರ್ ಅಕೌಂಟ್ನಲ್ಲಿ ಹಿಂದಿಯ 'ಹೇ ಬೇಬಿ' ಹಾಡಿನ ತುಣುಕು ಪೋಸ್ಟ್ ಮಾಡಿದೆ. ಇದರಲ್ಲಿ ತಮ್ಮ ತಂಡದ ಪ್ಲೇಯರ್ಸ್ ಮುಖ ಮತ್ತು ಐಪಿಎಲ್ ಲೋಗೋ ಅಟ್ಟಿಸಿದೆ. ಇದರ ಬೆನ್ನಲ್ಲೇ ಕಳೆದ ವರ್ಷದ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ಸಂತಸಗೊಂಡಿದ್ದು, 'UAE, we are coming back' ಎಂದು ಬರೆದುಕೊಂಡಿದೆ.
-
UAE, we are coming back! 🇦🇪#OneFamily #MumbaiIndians #IPL2021 pic.twitter.com/M5iCXgZaMi
— Mumbai Indians (@mipaltan) May 29, 2021 " class="align-text-top noRightClick twitterSection" data="
">UAE, we are coming back! 🇦🇪#OneFamily #MumbaiIndians #IPL2021 pic.twitter.com/M5iCXgZaMi
— Mumbai Indians (@mipaltan) May 29, 2021UAE, we are coming back! 🇦🇪#OneFamily #MumbaiIndians #IPL2021 pic.twitter.com/M5iCXgZaMi
— Mumbai Indians (@mipaltan) May 29, 2021
ಭಾರತದಲ್ಲಿ ಆಯೋಜನೆಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾ ಕಾರಣ ಮುಂದೂಡಿಕೆಯಾಗಿತ್ತು. ಟೂರ್ನಿ ವೇಳೆ ವಿವಿಧ ತಂಡದ ಪ್ಲೇಯರ್ಸ್ಗಳಿಗೆ ಸೋಂಕು ದೃಢಗೊಂಡಿತ್ತು. ಕಳೆದ ವರ್ಷ ಯುಎಇನಲ್ಲಿ ಆಯೋಜನೆಗೊಂಡಿದ್ದ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು.