ಅಬುಧಾಬಿ: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 3 ವಿಕೆಟ್ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಐಪಿಎಲ್ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಗೆ ಪಾತ್ರರಾದರು.
ಹರ್ಷಲ್ ಈ ಆವೃತ್ತಿಯಲ್ಲಿ ಆಡಿರುವ 13 ಪಂದ್ಯಗಳಿಂದ 29 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಟೂರ್ನಿಯ ಮೊದಲ ಪಂದ್ಯದಿಂದ ಇಲ್ಲಿಯವರೆಗೂ ಪರ್ಪಲ್ ಕ್ಯಾಪ್ಅನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಇದೀಗ ಹೈದರಾಬಾದ್ ವಿರುದ್ಧ 3 ವಿಕೆಟ್ ಪಡೆಯುತ್ತಿದ್ದಂತೆ ಜಸ್ಪ್ರೀತ್ ಬುಮ್ರಾ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
2020ರಲ್ಲಿ ಮುಂಬೈ ಇಂಡಿಯನ್ಸ್ನ ಬುಮ್ರಾ 27 ವಿಕೆಟ್ ಪಡೆದಿದ್ದು, ಐಪಿಎಲ್ನಲ್ಲಿ ಭಾರತೀಯ ಬೌಲರ್ನ ಇಲ್ಲಿಯವರೆಗಿನ ದಾಖಲೆಯಾಗಿತ್ತು. ಅವರನ್ನು ಬಿಟ್ಟರೆ 2 ಬಾರಿಯ ಪರ್ಪಲ್ ಕ್ಯಾಪ್ ವಿಜೇತ ಭುವನೇಶ್ವರ್ ಕುಮಾರ್ 2017ರಲ್ಲಿ 26, ಜಯದೇವ್ ಉನಾದ್ಕಟ್ 2017ರಲ್ಲಿ 24 ಮತ್ತು ಹರ್ಭಜನ್ ಸಿಂಗ್ 2013ರಲ್ಲಿ 24 ವಿಕೆಟ್ ಪಡೆದಿದ್ದರು.
ಇದನ್ನು ಓದಿ:World Championship: ಹಾಲಿ ಚಾಂಪಿಯನ್ಗೆ ಶಾಕ್ ನೀಡಿದ ಸರಿತಾ, ಸೆಮಿಫೈನಲ್ಸ್ ಪ್ರವೇಶಿಸಿದ ಅನ್ಶು ಮಲಿಕ್