ETV Bharat / sports

ಐಪಿಎಲ್ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರಿಗೆ ಜಾಕ್‌ಪಾಟ್‌!: ಜಮ್ಮುವಿನ ಶರ್ಮಾಗೆ ₹2.6 ಕೋಟಿ

ಇಂದು ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಅನ್‌ಕ್ಯಾಪ್ಡ್ (ರಾಷ್ಟೀಯ ತಂಡದಲ್ಲಿ ಇನ್ನೂ ಆಡದೇ ಇರುವ, ಪ್ರಥಮ ದರ್ಜೆ ಕ್ರಿಕೆಟಿಗರು) ಆಟಗಾರರಾದ ಶಿವಂ ಮಾವಿ, ಮುಖೇಶ್ ಕುಮಾರ್ ಹಾಗೂ ವಿವ್ರಾಂತ್ ಶರ್ಮಾ ದುಬಾರಿ ಬೆಲೆಗೆ ಮಾರಾಟವಾಗಿ ಮಿಂಚಿದ್ದಾರೆ.

jammu-and-kashmirs-vivrant-sharma
ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟಿಗ ವಿವ್ರಾಂತ್ ಶರ್ಮಾ
author img

By

Published : Dec 23, 2022, 9:53 PM IST

ಕೊಚ್ಚಿ (ಕೇರಳ): ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟಿಗ ವಿವ್ರಾಂತ್ ಶರ್ಮಾ ಅನ್‌ಕ್ಯಾಪ್ಡ್ ಆಟಗಾರರಾಗಿ ಬಾರಿ ಬೆಲೆಗೆ ಮಾರಾಟವಾಗಿದ್ದಾರೆ. ಸನ್​​ ರೈಸರ್ಸ್ ಹೈದರಾಬಾದ್ ತಂಡ ಶರ್ಮಾ ಅವರನ್ನು 2.6 ಕೋಟಿ ರೂ ಕೊಟ್ಟು ಖರೀದಿಸಿದೆ.

ಕೇರಳದ ಕೊಚ್ಚಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಉತ್ತರ ಪ್ರದೇಶದ ಶಿವಂ ಮಾವಿ ಅನ್‌ಕ್ಯಾಪ್ಡ್ ವಿಭಾಗದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಶಿವಂ ಅವರ ಮೂಲ ಬೆಲೆ 40 ಲಕ್ಷ ರೂಪಾಯಿ ಆಗಿತ್ತು. ಆದರೆ, ಗುಜರಾತ್ ಟೈಟಾನ್ಸ್ ಅವರ ಬೆಲೆಯನ್ನು 15 ಪಟ್ಟು ಹೆಚ್ಚಿಸಿ 6 ಕೋಟಿ ರೂಪಾಯಿಗೆ ಕೊಂಡುಕೊಂಡಿತು.

Shivam Mavi
ಶಿವಂ ಮಾವಿ

ಇದೇ ವೇಳೆ ಪಶ್ಚಿಮ ಬಂಗಾಳದ ವೇಗಿ, ಅನ್‌ಕ್ಯಾಪ್ಡ್ ಆಟಗಾರ ಮುಖೇಶ್ ಕುಮಾರ್ ಸಹ ದುಬಾರಿ ಬೆಲೆಗೆ ಬಿಕರಿಯಾಗಿದ್ದು, ಡೆಲ್ಲಿ ತಂಡ 5.50 ಕೋಟಿ ರೂ.ಗೆ ಖರೀದಿಸಿದೆ. ಅದೇ ರೀತಿ ಜಮ್ಮುವಿನ ವಿವ್ರಾಂತ್ ಶರ್ಮಾ ಅನ್‌ಕ್ಯಾಪ್ಡ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೂರನೇ ದುಬಾರಿ ಆಟಗಾರರಾಗಿದ್ದಾರೆ.

ಇದನ್ನೂ ಓದಿ: ₹2.4 ಕೋಟಿಗೆ ಡೆಲ್ಲಿ ಪಾಲಾದ ಮನೀಶ್ ಪಾಂಡೆ; ಮಿನಿ ಹರಾಜಿನಲ್ಲಿ ಆರ್​ಸಿಬಿಗೆ ಯಾರೆಲ್ಲಾ?

ಶರ್ಮಾ ಅವರ ಮೂಲ ಬೆಲೆ 20 ಲಕ್ಷ ರೂಪಾಯಿ ಆಗಿತ್ತು. ಸನ್ ರೈಸರ್ಸ್ ಹೈದರಾಬಾದ್ ತಂಡ ಅವರನ್ನು 2.6 ಕೋಟಿ ರೂ.ಗೆ ಖರೀದಿಸಿತು. ಈ ಮೂಲಕ ತಮ್ಮ ಬೇಸ್‌ ಬೆಲೆಗಿಂತ ಶರ್ಮಾ 13 ಪಟ್ಟು ಹೆಚ್ಚು ಮೊತ್ತ ಪಡೆದರು.

ಐಪಿಎಲ್ ಹರಾಜಿನಲ್ಲಿ ಮತ್ತೊಂದು ದಾಖಲೆಯೂ ನಿರ್ಮಾಣವಾಗಿದೆ. ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ವಿಕೆಟ್‌ ಕೀಪರ್ ಆಗಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಪೂರನ್​ ಅವರನ್ನು 16 ಕೋಟಿ ರೂ.ಗೆ ಲಖನೌ ಸೂಪರ್‌ ಜೈಂಟ್ಸ್ ಖರೀದಿಸಿದೆ.

Mukesh Kumar
ಮುಖೇಶ್ ಕುಮಾರ್

ಈ ಹಿಂದೆ ಮುಂಬೈ ತಂಡದ ಇಶಾನ್ ಕಿಶನ್ (15.25 ಕೋಟಿ ರೂ) ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ವಿಕೆಟ್ ಕೀಪರ್ ಆಗಿದ್ದರು. ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸನ್‌ ಅವರನ್ನು ಗುಜರಾತ್ ಟೈಟಾನ್ಸ್ ತಂಡ 2 ಕೋಟಿ ರೂ ಮೂಲ ಬೆಲೆಗೆ ಖರೀದಿಸಿತ್ತು. 2022ರ ಐಪಿಎಲ್‌ನಲ್ಲಿ ಕೇನ್ ವಿಲಿಯಮ್ಸನ್‌ ಸನ್‌ರೈಸರ್ಸ್ ಹೈದರಾಬಾದ್‌ ಫ್ರಾಂಚೈಸಿಯ ಭಾಗವಾಗಿದ್ದರು.

ಇದನ್ನೂ ಓದಿ: IPL ಹರಾಜಿನಲ್ಲಿ ವಿದೇಶಿಗರಿಗೆ ರತ್ನಗಂಬಳಿ; ಕೋಟಿ ಬಾಚಿದ ಸ್ವದೇಶಿ ಆಟಗಾರರು ಇವರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.