ಹೈದರಾಬಾದ್: ಐಪಿಎಲ್ 2024ಕ್ಕೆ ಸಿದ್ಧತೆ ಆರಂಭವಾಗಿದೆ. ಇದಕ್ಕಾಗಿ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ದೇಶದ ಹೊರಗೆ ಬಿಡ್ಡಿಂಗ್ ಮಾಡಲಾಗುತ್ತಿದೆ. ಸುಮಾರು 1,166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 830 ಭಾರತೀಯರಿದ್ದು, 18 ಕ್ಯಾಪ್ಡ್ ಆಟಗಾರರು ಮತ್ತು 336 ವಿದೇಶಿ ಆಟಗಾರರಿದ್ದಾರೆ.
ಕಳೆದ ಏಕದಿನ ವಿಶ್ವಕಪ್ ಪ್ರದರ್ಶನದ ಆಧಾರದಲ್ಲಿ ಬಿಡ್ಡಿಂಗ್ ಮಹತ್ವ ಪಡೆಯಲಿದೆ. ಈ ಹರಾಜು 2024ರ ಟಿ20 ವಿಶ್ವಕಪ್‌ಗಾಗಿ ತಂಡದ ಆಯ್ಕೆಗೂ ದಾರಿಯಾಗಲಿದೆ. ಐಪಿಎಲ್ ಮುಗಿದ ತಿಂಗಳ ಅಂತರದಲ್ಲಿ ಟೂರ್ನಿ ನಡೆಯಲಿದ್ದು, ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆಯಲು ಆಟಗಾರರಿಗೆ ಪ್ರಮುಖ ವೇದಿಕೆಯಾಗಲಿದೆ.
-
𝗜𝗣𝗟 𝟮𝟬𝟮𝟰 𝗔𝘂𝗰𝘁𝗶𝗼𝗻 🔨
— IndianPremierLeague (@IPL) December 3, 2023 " class="align-text-top noRightClick twitterSection" data="
🗓️ 19th December
📍 𝗗𝗨𝗕𝗔𝗜 🤩
ARE. YOU. READY ❓ #IPLAuction | #IPL pic.twitter.com/TmmqDNObKR
">𝗜𝗣𝗟 𝟮𝟬𝟮𝟰 𝗔𝘂𝗰𝘁𝗶𝗼𝗻 🔨
— IndianPremierLeague (@IPL) December 3, 2023
🗓️ 19th December
📍 𝗗𝗨𝗕𝗔𝗜 🤩
ARE. YOU. READY ❓ #IPLAuction | #IPL pic.twitter.com/TmmqDNObKR𝗜𝗣𝗟 𝟮𝟬𝟮𝟰 𝗔𝘂𝗰𝘁𝗶𝗼𝗻 🔨
— IndianPremierLeague (@IPL) December 3, 2023
🗓️ 19th December
📍 𝗗𝗨𝗕𝗔𝗜 🤩
ARE. YOU. READY ❓ #IPLAuction | #IPL pic.twitter.com/TmmqDNObKR
ಬಿಡ್ಡಿಂಗ್ನಲ್ಲಿ ಗಮನ ಸೆಳೆಯಲಿರುವ ಆಟಗಾರರು:
ಟ್ರಾವಿಸ್ ಹೆಡ್: ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಇವರು ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಉತ್ತಮ ಫಾರ್ಮ್‌ನಲ್ಲಿದ್ದು ಭಾರತದ ಪಿಚ್‌ಗಳಲ್ಲಿ ಸ್ಪಿನ್ ಬೌಲರ್‌ಗಳ ವಿರುದ್ಧ ಸಾಕಷ್ಟು ರನ್ ಗಳಿಸಿದ್ದಾರೆ. 23 ಟಿ20 ಪಂದ್ಯಗಳ 22 ಇನ್ನಿಂಗ್ಸ್‌ನಲ್ಲಿ 1 ಅರ್ಧಶತಕದೊಂದಿಗೆ 554 ರನ್ ಕಲೆಹಾಕಿದ್ದಾರೆ. ಈ ಅಂಕಿಅಂಶ ದೊಡ್ಡದಾಗಿ ಕಾಣದಿದ್ದರೂ ವಿಶ್ವಕಪ್ ಪ್ರದರ್ಶನದಿಂದ ಬೇಡಿಕೆ ಹೆಚ್ಚು ಸಾಧ್ಯತೆ ಇದೆ. ಈ ಆಟಗಾರನ ಮೇಲೆ ಚೆನ್ನೈ, ಬೆಂಗಳೂರು ಮತ್ತು ಗುಜರಾತ್‌ನಂತಹ ತಂಡಗಳು ಭಾರಿ ಮೊತ್ತ ಹೂಡಿಕೆ ಮಾಡಲು ಸಿದ್ಧವಿದೆ.
ರಚಿನ್ ರವೀಂದ್ರ: ನ್ಯೂಜಿಲೆಂಡ್‌ನ ಯುವ ಆಲ್‌ರೌಂಡರ್ ರಚಿನ್ ರವೀಂದ್ರ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ಪಿಚ್‌ಗಳಲ್ಲಿ ಸ್ಪಿನ್ ಬೌಲಿಂಗ್ ವಿರುದ್ಧ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದು, ಶತಕಗಳ ಸುರಿಮಳೆಗೈದರು. ಆರಂಭಿಕರಾಗಿ ಮತ್ತು ಇತರೆ ಸ್ಥಾನದಲ್ಲೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇವರ ಮೇಲಿನ ಬೇಡಿಕೆಗೆ ಕಾರಣ. ಅಲ್ಲದೇ ಸ್ಪಿನ್ ಬೌಲರ್ ಆಗಿಯೂ ತಂಡಕ್ಕೆ ಕೊಡುಗೆ ನೀಡುತ್ತಾರೆ. ತಂಡದಲ್ಲಿ ಓರ್ವ ಹೆಚ್ಚುವರಿ ಬೌಲಿಂಗ್ ಬಲ ಇದ್ದಂತೆಯೂ ಆಗುತ್ತದೆ. ನ್ಯೂಜಿಲೆಂಡ್ ಪರ 18 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 145 ರನ್ ಗಳಿಸಿದ್ದಾರೆ. 11 ವಿಕೆಟ್ ಪಡೆದಿದ್ದಾರೆ. ಬೆಂಗಳೂರು, ಹೈದರಾಬಾದ್, ಮುಂಬೈ ಫ್ರಾಂಚೈಸಿಗಳು ಇವರ ಮೇಲೆ ಕಣ್ಣಿಟ್ಟಿವೆ.
ಜೆರಾಲ್ಡ್ ಕೋಟ್ಜಿ: ದಕ್ಷಿಣ ಆಫ್ರಿಕಾದ ಅತ್ಯುತ್ತಮ ಬೌಲರ್ ಗೆರಾಲ್ಡ್ ಕೋಟ್ಜಿ ಮೇಲೆ ತಂಡಗಳು ಹೆಚ್ಚಿನ ಬಿಡ್ ಮಾಡಬಹುದು. ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪಿಚ್‌ಗಳಲ್ಲಿ ಎದುರಾಳಿಗೆ ಹೆಚ್ಚು ತಲೆಬಿಸಿ ಉಂಟುಮಾಡಿದ್ದರು. ಕೇವಲ 8 ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ. 2 ಕೋಟಿ ರೂ.ಗಳ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದಾರೆ. ಆರ್‌ಸಿಬಿಗೆ ವಿದೇಶಿ ಬೌಲರ್ನ ಅಗತ್ಯವಿದ್ದು ಇವರ ಮೇಲೆ ದೊಡ್ಡ ಮಟ್ಟದ ಹೂಡಿಕೆ ಮಾಡುವ ಸಾಧ್ಯತೆ ಇದೆ. ಇದುವರೆಗೆ ದಕ್ಷಿಣ ಆಫ್ರಿಕಾ ಪರ 3 ಟಿ20 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ.
ಶಾರ್ದೂಲ್ ಠಾಕೂರ್: 2 ಕೋಟಿ ಮೂಲ ಬೆಲೆಗೆ ಹರಾಜಿಗಿರುವ ಭಾರತೀಯ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಹೆಚ್ಚಿನ ಬಿಡ್ ಪಡೆಯಬಹುದು ಎಂಬ ನಿರೀಕ್ಷೆ ಇದೆ. ಠಾಕೂರ್ ಬ್ಯಾಟ್ ಮತ್ತು ಬೌಲ್ನಲ್ಲಿ ತಂಡಕ್ಕೆ ನೆರವಾಗುತ್ತಾರೆ. ಈ ಹಿಂದೆ ಐಪಿಎಲ್‌ನಲ್ಲಿ ಹಲವು ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಕೆಕೆಆರ್ ಇವರನ್ನು ಈ ವರ್ಷ ಬಿಡುಗಡೆ ಮಾಡಿದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ಪರ ಆಡಿದ್ದಾರೆ. ಮತ್ತೊಮ್ಮೆ ಅದೇ ತಂಡಗಳು ಶಾರ್ದೂಲ್ ಮೇಲೆ ನಂಬಿಕೆ ಇಡುತ್ತಾವಾ ಎಂಬುದನ್ನು ಕಾದುನೋಡಬೇಕಿದೆ. ಐಪಿಎಲ್‌ನಲ್ಲಿ ಒಟ್ಟು 86 ಪಂದ್ಯಗಳಿಂದ 286 ರನ್ ಗಳಿಸಿದ್ದಾರೆ. 83 ಓವರ್ ಬೌಲಿಂಗ್ ಮಾಡಿರುವ ಇವರು 89 ವಿಕೆಟ್ ಪಡೆದಿದ್ದಾರೆ.
ಮಿಚೆಲ್ ಸ್ಟಾರ್ಕ್/ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಕೂಡ ಈ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯವ ಸಾಧ್ಯತೆ ಹೆಚ್ಚಿದೆ. ಸ್ಟಾರ್ಕ್ ಐಪಿಎಲ್‌ನಲ್ಲಿ ತಮ್ಮ ಬೌಲಿಂಗ್ ಛಾಪನ್ನು ಈಗಾಗಲೇ ಮೂಡಿಸಿದ್ದಾರೆ. ಕಮಿನ್ಸ್ ತಂಡಕ್ಕೆ ಆಲ್‌ರೌಂಡರ್ ಆಗಿ ಕೊಡುಗೆ ನೀಡಬಲ್ಲರು. ಸ್ಟಾರ್ಕ್ 27 ಐಪಿಎಲ್ ಪಂದ್ಯಗಳ 26 ಇನ್ನಿಂಗ್ಸ್‌ಗಳಲ್ಲಿ 34 ವಿಕೆಟ್ ಪಡೆದಿದ್ದಾರೆ. ಪ್ಯಾಟ್ ಕಮ್ಮಿನ್ಸ್ 42 ಪಂದ್ಯಗಳಲ್ಲಿ 45 ವಿಕೆಟ್ ಪಡೆದರೆ, 3 ಅರ್ಧಶತಕಗಳೊಂದಿಗೆ 379 ರನ್ ಪೇರಿಸಿದ್ದಾರೆ.
ಇದನ್ನೂ ಓದಿ: ಎಟಿಪಿ ಶ್ರೇಯಾಂಕ: ಅಗ್ರಪಟ್ಟ ಉಳಿಸಿಕೊಂಡ ನೊವಾಕ್ ಜೊಕೊವಿಚ್