ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಬಂದೇ ಬಿಟ್ಟಿತು. ಮುಂದಿನ ಎರಡು ದಿನದಲ್ಲಿ ಮಿಲಿಯನ್ ಡಾಲರ್ ಟೂರ್ನಿ ಅದ್ಧೂರಿ ಆರಂಭ ಕಾಣಲಿದೆ. ಮಾರ್ಚ್ 31ರಿಂದ ಶುರುವಾಗುವ ಲೀಗ್ 74 ದಿನಗಳ ಕಾಲ ನಡೆಯಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಟೈಟನ್ಸ್ ತವರು ನೆಲವಾದ ಅಹಮದಾಬಾದ್ನಲ್ಲಿ ಈ ಪಂದ್ಯ ನಡೆಯಲಿದೆ.
ಪಂದ್ಯಾರಂಭಕ್ಕೂ ಮುನ್ನ ಭರ್ಜರಿ ಮನರಂಜನಾ ಕಾರ್ಯಕ್ರಮ ಜರುಗಲಿದೆ. ಅದ್ಧೂರಿ ಕಾರ್ಯಕ್ರಮಕ್ಕೆ ದೇಶದ ಅತಿ ಹೆಚ್ಚು ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗುತ್ತಿದೆ. ಈ ಸ್ಟೇಡಿಯಂಗೆ ಗ್ಲಾಮರ್ ಟಚ್ ನೀಡಲು ಬಾಲಿವುಡ್‌ನ ಹಲವು ದೊಡ್ಡ ತಾರೆಯರು ಆಗಮಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ವಿಮೆನ್ಸ್ ಪ್ರೀಮಿಯರ್ ಲೀಗ್ನ ಆರಂಭಿಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಉದ್ಘಾಟನಾ ಸಮಾರಂಭದಲ್ಲಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ರಂಜಿಸಿದ್ದರು. ಖ್ಯಾತ ಗಾಯಕ ಎಪಿ ಧಿಲ್ಲೋನ್ ಮಹಿಳಾ ಪ್ರೀಮಿಯರ್ ಲೀಗ್ನ ಗೀತೆ ಜೊತೆಗೆ ಹಿಟ್ ಹಾಡುಗಳನ್ನು ಹಾಡಿ ಮನರಂಜನೆ ನೀಡಿದ್ದರು.
ನಿರೀಕ್ಷಿತ ತಾರೆಗಳ ಪಟ್ಟಿ: ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಯಾವೆಲ್ಲ ತಾರೆಯರು ಇರಲಿದ್ದಾರೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ಆದರೆ ಕಾರ್ಯಕ್ರಮದ ಭಾಗವಾಗುವ ಸಂಭವನೀಯರ ಹೆಸರುಗಳು ಇಲ್ಲಿವೆ. ಈ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಹೆಸರು ಮುಂಚೂಣಿಯಲ್ಲಿದೆ. ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಹೊಂದಿರುವ ಅವರು ಭಾರತದ ಬಹು ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರ ಜೊತೆಗೆ ತಮನ್ನಾ ಭಾಟಿಯಾ, ಗಾಯಕರಾದ ಅರಿಜಿತ್ ಸಿಂಗ್, ಟೈಗರ್ ಶ್ರಾಫ್ ಮತ್ತು ಕತ್ರಿನಾ ಕೈಫ್ ಕೂಡ ಸಮಾರಂಭದಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.
ಮೊದಲ ಫೈಟ್ನಲ್ಲಿ ಭರ್ಜರಿ ಮನರಂಜನೆ ನಿರೀಕ್ಷೆ: ಈ ಐಪಿಎಲ್ ಆವೃತ್ತಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕೊನೆಯದ್ದು ಎಂದೇ ಹೇಳಲಾಗುತ್ತಿದೆ. ಇದರ ಬಗ್ಗೆ ಫ್ರಾಂಚೈಸಿ ಅಥವಾ ಧೋನಿ ಏನೂ ಹೇಳಿಕೊಂಡಿಲ್ಲ. ಕೊನೆಯ ಆವೃತ್ತಿಯಾಗಿದ್ದಲ್ಲಿ ಮೊದಲ ಪಂದ್ಯವೇ ಚೆನ್ನೈಗೆ ಮಹತ್ವದ್ದಾಗಲಿದೆ. ಅಲ್ಲದೇ ಐಪಿಎಲ್ ನಾಯಕತ್ವದ ಪ್ರಭಾವದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮುನ್ನಡೆಸಿ ಅನುಭವ ಹೊಂದಿರುವ ಹಾರ್ದಿಕ್ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ತಂಡಗಳು ಇಂತಿದೆ: ಗುಜರಾತ್ ಟೈಟಾನ್ಸ್: ಕೋನಾ ಶ್ರೀಕರ್ ಭರತ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಅಭಿನವ್ ಮನೋಹರ್, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ಉರ್ವಿಲ್ ಪಟೇಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರವಿಶ್ರೀನಿವಾಸನ್ ಸಾಯಿ ಕಿಶೋರ್, ರಾಹುಲ್ ತೆವಾಟಿಯಾ, ಜಯಂತ್ ಸ್ಮಿತ್, ಜಯಂತ್ ಸ್ಮಿತ್ ಖಾನ್, ಶಿವಂ ಮಾವಿ, ಅಲ್ಜಾರಿ ಜೋಸೆಫ್, ಜೋಶ್ ಲಿಟಲ್, ದರ್ಶನ್ ನಲ್ಕಂಡೆ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಪ್ರದೀಪ್ ಸಾಂಗ್ವಾನ್, ಮೋಹಿತ್ ಶರ್ಮಾ, ಯಶ್ ದಯಾಳ್
ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ, ಡೆವೊನ್ ಕಾನ್ವೇ, ಅಂಬಟಿ ರಾಯುಡು, ರುತುರಾಜ್ ಗಾಯಕ್‌ವಾಡ್, ಅಜಿಂಕ್ಯ ರಹಾನೆ, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಮೊಯಿನ್ ಅಲಿ, ನಿಶಾಂತ್ ಸಿಂಧು, ಬೆನ್ ಸ್ಟೋಕ್ಸ್, ಶಿವಂ ದುಬೆ, ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಚಾಂಟ್ ವರ್ಮಾ, ಭಕ್‌ಗಾತ್ ವರಮ ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರ್ಗೇಕರ್, ಕೈಲ್ ಜೇಮಿಸನ್, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶ ಪತಿರಣ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ
ಇದನ್ನೂ ಓದಿ: IPL 2023: ಐಪಿಎಲ್ ವೀಕ್ಷಕ ವಿವರಣೆಗಾರನಾಗಿ ಸ್ಟೀವ್ ಸ್ಮಿತ್