ಮುಂಬೈ: ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವೇಗವಾಗಿ 150 ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ ಚಹಲ್ ಈ ವಿಶೇಷ ಮೈಲುಗಲ್ಲು ಸ್ಥಾಪಿಸಿದರು. ಭಾರತೀಯ ಸ್ಪಿನ್ನರ್ ಒಟ್ಟಾರೆ ಐಪಿಎಲ್ನಲ್ಲಿ ವೇಗವಾಗಿ ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಂಡರು. ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ್ ಮೊದಲ ಸ್ಥಾನದಲ್ಲಿದ್ದಾರೆ.
ಚಹಲ್ 118 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, 2ನೇ ಸ್ಥಾನದಲ್ಲಿರುವ ಅಮಿತ್ ಮಿಶ್ರಾ 140, ಪಿಯುಷ್ ಚಾವ್ಲಾ 156, ಹರ್ಭಜನ್ ಸಿಂಗ್ 159 ಪಂದ್ಯಗಳಲ್ಲಿ 150 ವಿಕೆಟ್ ಪಡೆದಿದ್ದಾರೆ. ವೇಗಿಗಳ ವಿಭಾಗದಲ್ಲಿ ಮಾಲಿಂಗ 105 ಪಂದ್ಯಗಳಲ್ಲಿ ಮತ್ತು ಡ್ವೇನ್ ಬ್ರಾವೋ137 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
2014ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ಚಹಲ್ 139 ವಿಕೆಟ್ ಪಡೆದಿದ್ದರು. ಅವರನ್ನು 2022ರ ಐಪಿಎಲ್ನಲ್ಲಿ ಆರ್ಸಿಬಿ ಬಿಡುಗಡೆ ಮಾಡಿತ್ತು. ಮೆಗಾ ಹರಾಜಿನಲ್ಲಿ 6.50 ಕೋಟಿ ರೂ. ನೀಡಿ ಖರೀದಿಸಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 165 ರನ್ಗಳಿಸಿದರೆ, ಲಖನೌ ತಂಡ 162 ರನ್ಗಳಿಸಲಷ್ಟೇ ಶಕ್ತವಾಗಿ 3 ರನ್ಗಳ ಸೋಲು ಕಂಡಿತು.
ಇದನ್ನೂ ಓದಿ:ಮಗನ ಕ್ರಿಕೆಟ್ ಕನಸಿಗೆ ಚಿನ್ನ, ಜಮೀನು ಅಡವಿಟ್ಟ ತಂದೆ-ತಾಯಿ: ರಣಜಿ ತ್ರಿಶತಕ ವೀರನ ರೋಚಕ ಜರ್ನಿ!