ETV Bharat / sports

ಐಪಿಎಲ್ ರಿಟೆನ್ಷನ್​ 2022 : ಫ್ರಾಂಚೈಸಿಗಳು ಉಳಿಸಿಕೊಳ್ಳುವ ಸಾಧ್ಯತೆಯಿರುವ ಆಟಗಾರರು - ಎಂಎಸ್ ಧೋನಿ

2022ರ ಆವೃತ್ತಿಗೂ ಮುನ್ನ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಬಿಸಿಸಿಐಗೆ ಇಂದು ವರದಿ ಸಲ್ಲಿಸಲಿವೆ. ಎಲ್ಲಾ ಫ್ರಾಂಚೈಸಿಗಳು ರಿಟೈನ್ ಮಾಡಿಕೊಳ್ಳಬಹುದಾದ ಆಟಗಾರರು ಮತ್ತು ಸಾಧ್ಯತೆಯಿರುವ ಆಟಗಾರರ ಬಗ್ಗೆ ಒಂದು ಸಂಕ್ಷಿಪ್ತ ವಿವರ ಈ ಸುದ್ದಿಯಲ್ಲಿದೆ..

IPL Retention 2022
ಐಪಿಎಲ್ 2022 ರಿಟೈನ್​
author img

By

Published : Nov 30, 2021, 5:08 PM IST

ಮುಂಬೈ : 2022ರ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವೂ ಉಳಿಸಿಕೊಳ್ಳುವ ಆಟಗಾರರ ಹೆಸರನ್ನು ಮಂಗಳವಾರ ಬಿಸಿಸಿಐಗೆ ಸಲ್ಲಿಸಬೇಕಿದೆ. ಹಾಗಾಗಿ, ಭಾರತೀಯ ಕ್ರಿಕೆಟ್​ನಲ್ಲಿ ಚರ್ಚೆಯಾಗುತ್ತಿರುವಂತೆ ಹಳೆಯ 8 ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ : ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮೊದಲೇ ಹೇಳಿದಂತೆ ನಾಯಕ ಧೋನಿಯನ್ನು ಮೊದಲ ಆಟಗಾರನಾಗಿ ರಿಟೈನ್​ ಮಾಡಿಕೊಳ್ಳಲು ಬಯಸಿದೆ. ಉಳಿದಂತೆ ಆಲ್​ರೌಂಡರ್​ ರವೀಂದ್ರ ಜಡೇಜಾ, ಆರೆಂಜ್ ಕ್ಯಾಪ್​ ಪಡೆದಿರುವ ರುತುರಾಜ್ ಗಾಯಕ್ವಾಡ್​ ಮತ್ತು ವಿದೇಶಿ ಆಟಗಾರರಲ್ಲಿ ಮೊಯೀನ್​ ಅಲಿಯನ್ನು ಅಂತಿಮಗೊಳಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಮುಂಬೈ ಇಂಡಿಯನ್ಸ್ : ಐಪಿಎಲ್​ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೀರನ್​ ಪೊಲಾರ್ಡ್​ರನ್ನು ರಿಟೈನ್ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ, ಉಳಿದ ಒಂದು ಸ್ಥಾನದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಬಹುಶಃ ಇಶಾನ್ ಕಿಶನ್ ಅಥವಾ ಹಾರ್ದಿಕ್ ಪಾಂಡ್ಯರಲ್ಲಿ ಒಬ್ಬರನ್ನು ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು : ಐಪಿಎಲ್​ನ ಅತ್ಯಂತ ಮನರಂಜನಾ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್​ ಕೊಹ್ಲಿ ಮತ್ತು ಗ್ಲೇನ್ ಮ್ಯಾಕ್ಸ್​ವೆಲ್​ರನ್ನು ಉಳಿಸಿಕೊಳ್ಳುವುದು ಪಕ್ಕೈ ಆಗಿದೆ. ಸಿರಾಜ್​, ಪಡಿಕ್ಕಲ್​ ಮತ್ತು ಚಹಾಲ್​ ಮುಂದಿರುವ ಆಯ್ಕೆಯಾಗಿದ್ದರೂ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ : ಸತತ ಮೂರು ಆವೃತ್ತಿಗಳಲ್ಲಿ ಪ್ಲೇಆಫ್​ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ರಿಷಭ್ ಪಂತ್​, ಯುವ ಆಟಗಾರ ಪೃಥ್ವಿ ಶಾ ಮತ್ತು ದಕ್ಷಿಣ ಆಫ್ರಿಕಾದ ವೇಗಿ ಎನ್ರಿಚ್​ ನಾರ್ಕಿಯಾ ಅವರನ್ನು ರಿಟೈನ್ ಮಾಡಿಕೊಳ್ಳುವುದು ಬಹುತೇಕ ಖಚಿತ. ಇನ್ನೊಂದು ಸ್ಥಾನಕ್ಕೆ ಅಕ್ಷರ್ ಪಟೇಲ್ ಮುಂಚೂಣಿಯಲ್ಲಿದ್ದಾರೆ. ಶ್ರೇಯಸ್​ ಅಯ್ಯರ್​ ಹರಾಜಿಗೆ ಹೋಗುವುದಾಗಿ ಈಗಾಗಲೇ ಫ್ರಾಂಚೈಸಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಸನ್​ರೈಸರ್ಸ್ ಹೈದರಾಬಾದ್​: ಸನ್​ರೈಸರ್ಸ್​ ಹೈದರಾಬಾದ್​ ರಶೀದ್ ಖಾನ್​ ಮತ್ತು ಕೇನ್​ ವಿಲಿಯಮ್ಸನ್​ರನ್ನು ಮಾತ್ರ ಉಳಿಸಿಕೊಳ್ಳುವ ಆಲೋಚನೆಯಲ್ಲಿದೆ. ಆದರೆ, ರಶೀದ್​ ಖಾನ್​ ತಮ್ಮನ್ನು ಮೊದಲ ಆಟಗಾರನಾಗಿ ರಿಟೈನ್​ ಮಾಡಿಕೊಂಡರೆ ಮಾತ್ರ ತಂಡದಲ್ಲಿ ಉಳಿಯುವ ಬೇಡಿಕೆಯಿಟ್ಟಿರುವುದರಿಂದ ಅವರನ್ನು ಫ್ರಾಂಚೈಸಿ ಕೈಬಿಡುವ ಸಾಧ್ಯತೆಯಿದೆ.

ರಾಜಸ್ಥಾನ ರಾಯಲ್ಸ್ : ಮೊದಲ ಆವೃತ್ತಿಯ ಚಾಂಪಿಯನ್ ಆಗಿರುವ ರಾಜಸ್ಥಾನ್ ರಾಯಲ್ಸ್​ ನಾಯಕ ಸಂಜು ಸಾಮ್ಸನ್​ರನ್ನು ಆಯ್ಕೆ ಮಾಡಿಕೊಳ್ಳುವುದು ಖಚಿತವಾಗಿದೆ. ವಿದೇಶಿಯರಲ್ಲಿ ಇಬ್ಬರಿಗೆ ಅವಕಾಶ ಇರುವುದರಿಂದ ಜೋಶ್​ ಬಟ್ಲರ್, ಬೆನ್ ಸ್ಟೋಕ್ಸ್​ ಮತ್ತು ಜೋಫ್ರಾ ಆರ್ಚರ್​ ನಡುವೆ ತೀರ್ವ ಪೈಪೋಟಿಯಿದೆ.

ಕೋಲ್ಕತ್ತಾ ನೈಟ್​ ರೈಡರ್ಸ್​ : ಪ್ರಸ್ತುತ ರನ್ನರ್ ಅಪ್ ಆಗಿರುವ ಕೆಕೆಆರ್​ ವಿಂಡೀಸ್​ ಆಲ್​ರೌಂಡರ್​ಗಳಾದ ಆ್ಯಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ರಿಟೈನ್ ಮಾಡಿಕೊಳ್ಳುವುದು ಖಚಿತವಾಗಿದೆ. ದೇಶಿ ಆಟಗಾರರಲ್ಲಿ ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್​ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಶುಬ್ಮನ್​ ಗಿಲ್​ ಕೈಬಿಡುವ ಸಾಧ್ಯತೆಯಿದೆ.

ಪಂಜಾಬ್​ ಕಿಂಗ್ಸ್ : ಈಗಾಗೆಲೇ ಕೆ ಎಲ್ ರಾಹುಲ್​ ತಂಡಕ್ಕೆ ತಾವು ರಿಟೈನ್​ಗೆ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ, ಪಂಜಾಬ್​ ಕನ್ನಡಿಗ ಮಯಾಂಕ್​ ಅಗರ್​ವಾಲ್, ಶಾರುಖ್ ಖಾನ್​​ ಮತ್ತು ಯುವ ಸ್ಪಿನ್ನರ್ ರವಿ ಬಿಷ್ಣೋಯ್​ ಅವರನ್ನು ಉಳಿಸಿಕೊಳ್ಳಲಿದೆ. ಅರ್ಶ್​ದೀಪ್​ ಸಿಂಗ್ ಮತ್ತೊಂದು ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಆಟಗಾರನಾಗಿದ್ದಾರೆ.

ಇದನ್ನೂ ಓದಿ:ಬಿಸಿಸಿಐಗೆ ದೂರು : 2022ರ ಐಪಿಎಲ್ ಆವೃತ್ತಿಯಿಂದ​ ರಾಹುಲ್, ರಶೀದ್ ಖಾನ್​ ಹೊರ ಬೀಳುವ ಭೀತಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.