ETV Bharat / sports

ಹೊಸ ಐಪಿಎಲ್​ ಸೀಸನ್ ಬಂದೇ ಬಿಡ್ತು!: ಆರ್​ಸಿಬಿ ಕಪ್ತಾನ್‌ಗಿರಿಗೆ ಯಾರು ಸೂಕ್ತ?

author img

By

Published : Mar 1, 2022, 8:56 PM IST

ವಿರಾಟ್​ ಕೊಹ್ಲಿ 2021ರ ಆವೃತ್ತಿಯ ಐಪಿಎಲ್‌ ಕ್ರಿಕೆಟ್‌ ಮುಗಿಯುತ್ತಿದ್ದಂತೆ ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದರು. ಅಂದಿನಿಂದಲೂ ಕ್ರಿಕೆಟ್​ ವಲಯದಲ್ಲಿ ಬೆಂಗಳೂರು ಪ್ರಾಂಚೈಸಿಯನ್ನು ಮುನ್ನಡೆಸುವುದಕ್ಕೆ ಯಾರು ಸೂಕ್ತ? ಎನ್ನುವ ಚರ್ಚೆ ನಡೆಯುತ್ತಲೇ ಇದೆ.

RCB will Soon announce their Captain
ರಾಯಲ್ ಚಾಲೆಂಜರ್ಸ್ ಬೆಂಗಳೂರು

ನವದೆಹಲಿ: 2022ರ ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಆವೃತ್ತಿಯ ಆರಂಭಕ್ಕೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿವೆ. ಎಲ್ಲಾ ತಂಡಗಳು ಈಗಾಗಲೆ ತಮ್ಮ ನಾಯಕನನ್ನು ಘೋಷಿಸಿಕೊಂಡಿವೆ. ಆದರೆ, ಆರ್​ಸಿಬಿ ಮಾತ್ರ ಇನ್ನೂ ತನ್ನ ನಾಯಕನನ್ನು ಅಂತಿಮಗೊಳಿಸಿಲ್ಲ. ಮೂಲಗಳ ಪ್ರಕಾರ, ಹಿರಿಯ ಕ್ರಿಕೆಟರ್​ ಫಾಫ್ ಡು ಪ್ಲೆಸಿಸ್​​ ನಾಯಕತ್ವ ಸ್ಥಾನಕ್ಕೆ ಕೇಳಿ ಬರುತ್ತಿರುವ ಮುಂಚೂಣಿಯ ಹೆಸರು.

ವಿರಾಟ್​ ಕೊಹ್ಲಿ 2021ರ ಆವೃತ್ತಿ ಮುಗಿಯುತ್ತಿದ್ದಂತೆ ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದರು. ಅಂದಿನಿಂದಲೂ ಕ್ರಿಕೆಟ್​ ವಲಯದಲ್ಲಿ ಬೆಂಗಳೂರು ಪ್ರಾಂಚೈಸಿಯನ್ನು ಮುನ್ನಡೆಸುವುದಕ್ಕೆ ಯಾರು ಸೂಕ್ತ ಎನ್ನುವ ಜಿಜ್ಞಾಸೆ ನಡೆಯುತ್ತಿದೆ.

ಕ್ರಿಕೆಟಿಗರ ಮೆಗಾ ಹರಾಜಿನ ನಂತರ ಫಾಫ್ ಡು ಪ್ಲೆಸಿಸಿ, ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ದಿನೇಶ್​ ಕಾರ್ತಿಕ್ ಅವರ ಹೆಸರುಗಳು ಆರ್​ಸಿಬಿ ನಾಯಕತ್ವದ ಚರ್ಚೆಯಲ್ಲಿ ಬಳಕೆಯಾಗುತ್ತಿದೆ. ಆದರೆ ಗ್ಲೇನ್​ ಮ್ಯಾಕ್ಸ್​ವೆಲ್​ ವಿವಾಹವಾಗುತ್ತಿದ್ದು ಸೀಸನ್​ ಆರಂಭಕ್ಕೆ ಅಲಭ್ಯರಾಗಲಿದ್ದಾರೆ. ಹಾಗಾಗಿ ಫ್ರಾಂಚೈಸಿ ಪ್ಲೆಸಿಸ್​ ಅಥವಾ ದಿನೇಶ್ ಕಾರ್ತಿಕ್​ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: ಗಲ್ಲಿ ಕ್ರಿಕೆಟ್​ to ರಣಜಿ ಟ್ರೋಫಿ.. ಗುಡಿಸಲಿನಲ್ಲಿ ಬೆಳೆದ ಹುಡುಗನ ಅದ್ಭುತ ಕ್ರಿಕೆಟ್​ ಪಯಣ

ಕಾರ್ತಿಕ್ 2015ರಲ್ಲಿ ಆರ್​ಸಿಬಿ ಪರ ಆಡಿದ್ದರು. ಅವರಿಗೆ ಈಗಾಗಲೆ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಮುನ್ನಡೆಸಿದ ಅನುಭವವಿದೆ. ಇನ್ನು ಫಾಫ್​ ಕೆಲವು ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವವಿದೆ. ಕಳೆದೊಂದು ದಶಕದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅವರ ಬ್ಯಾಟಿಂಗ್ ದಾಖಲೆ ನಂಬಲಸಾಧ್ಯವಾಗಿದೆ.

ಈಗಾಗಲೆ 10 ತಂಡಗಳಲ್ಲಿ 9 ತಂಡಗಳು ತಮ್ಮ ನಾಯಕನನ್ನು ಘೋಷಣೆ ಮಾಡಿಕೊಂಡಿವೆ. ಗಮನಾರ್ಹ ಸಂಗತಿಯೆಂದರೆ, 9ರಲ್ಲಿ 8 ನಾಯಕರು ಭಾರತದವರೇ ಆಗಿದ್ದಾರೆ. ಆರ್​ಸಿಬಿ ಕೂಡ ಶೀಘ್ರದಲ್ಲೇ ತಂಡದ ನಾಯಕನನ್ನು ಘೋಷಿಸಲಿದ್ದೇವೆ ಎಂದು ತಿಳಿಸಿದ್ದು, ಈ ಕುರಿತು ಚರ್ಚೆ ಸಾಗುತ್ತಿದೆ ಎಂದು ಆರ್​ಸಿಬಿ ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ವಿರಾಟ್‌ ಕೊಹ್ಲಿ ಅವರನ್ನು ನಾಯಕನಾಗಿ ಮತ್ತೆ ಮರು ಆಯ್ಕೆ ಮಾಡುವ ಕುರಿತಾದ ಮನವೊಲಿಕೆ ಕಸರತ್ತು ಕೂಡಾ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ.

ಐಪಿಎಲ್ ತಂಡಗಳ ನಾಯಕರು:

  • ಚೆನ್ನೈ ಸೂಪರ್ ಕಿಂಗ್ಸ್ (CSK) - ಎಂ.ಎಸ್.ಧೋನಿ
  • ಡೆಲ್ಲಿ ಕ್ಯಾಪಿಟಲ್ಸ್ (DC) - ರಿಷಬ್ ಪಂತ್
  • ಗುಜರಾತ್ ಟೈಟನ್ಸ್ (GT) - ಹಾರ್ದಿಕ್ ಪಾಂಡ್ಯ
  • ಕೋಲ್ಕತ್ತಾ ನೈಟ್ ರೈಡರ್ಸ್ (KKR) - ಶ್ರೇಯಸ್ ಅಯ್ಯರ್
  • ಲಕ್ನೋ ಸೂಪರ್ ಜೈಂಟ್ಸ್ (LSG) - ಕೆ.ಎಲ್.ರಾಹುಲ್
  • ಮುಂಬೈ ಇಂಡಿಯನ್ಸ್ (MI) - ರೋಹಿತ್ ಶರ್ಮಾ
  • ಪಂಜಾಬ್ ಕಿಂಗ್ಸ್ (PBKS) - ಮಯಾಂಕ್ ಅಗರ್ವಾಲ್
  • ರಾಜಸ್ಥಾನ್ ರಾಯಲ್ಸ್ (RR) - ಸಂಜು ಸ್ಯಾಮ್ಸನ್
  • ಸನ್‌ರೈಸರ್ಸ್ ಹೈದರಾಬಾದ್ (SRH) - ಕೇನ್ ವಿಲಿಯಮ್ಸನ್
  • ರಾಯಲ್ ಚಾಲೆಂಜರ್ಸ್ ಬೆಂಗಳೂರು - ಇನ್ನೂ ಘೋಷಣೆಯಾಗಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.