ETV Bharat / sports

ಸತತ 4ನೇ ಜಯ ಸಾಧಿಸಿದ ಹೈದರಾಬಾದ್​... ಪಂಜಾಬ್ ಮಣಿಸಿ 4ನೇ ಸ್ಥಾನಕ್ಕೆ ಲಗ್ಗೆಯಿಟ್ಟ ವಿಲಿಯಮ್ಸನ್ ಬಳಗ

author img

By

Published : Apr 17, 2022, 3:41 PM IST

Updated : Apr 17, 2022, 7:43 PM IST

ಪಂಜಾಬ್ ಕಿಂಗ್ಸ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಸನ್​ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್​ಗಳ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

Punjab Kings vs Sunrisers Hyderabad
Punjab Kings vs Sunrisers Hyderabad

ಮುಂಬೈ: ಅನುಭವಿ ಭುವನೇಶ್ವರ್ ಕುಮಾರ್​ ಮತ್ತು ಯುವ ವೇಗಿ ಉಮ್ರಾನ್ ಮಲಿಕ್​ ಅವರ ಶಿಸ್ತಿನ ಬೌಲಿಂಗ್ ದಾಳಿ ಮತ್ತು ಬ್ಯಾಟರ್​ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್ ​ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದೆ.

ಪಂಜಾಬ್ ಕಿಂಗ್ಸ್​ ನೀಡಿದ್ದ 152 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಆರಂಭದಲ್ಲಿ ತಂಡದ ನಾಯಕ ಕೇನ್ ವಿಲಿಯಮ್ಸನ್(3)​ ವಿಕೆಟ್​ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಇನ್​ಫಾರ್ಮ್​ ಬ್ಯಾಟರ್​ಗಳಾದ ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ 2ನೇ ವಿಕೆಟ್​ಗೆ 48 ರನ್​ ಸೇರಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು.

22 ಎಸೆತಗಳಲ್ಲಿ 34 ರನ್​ಗಳಿಸಿದ್ದ ತ್ರಿಪಾಠಿ ಮತ್ತು 25 ಎಸೆತಗಳಲ್ಲಿ 31 ರನ್​ಗಳಿಸಿದ್ದ ಅಭಿಷೇಕ್ ಶರ್ಮಾ ಸ್ಪಿನ್ನರ್ ರಾಹುಲ್ ಚಾಹರ್ ಬೌಲಿಂಗ್​ನಲ್ಲಿ ಕೇವಲ 11 ರನ್​ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು.

ಆದರೆ 4ನೇ ವಿಕೆಟ್​ ಜೊತೆಯಾದ ಐಡೆನ್ ಮಾರ್ಕ್ರಮ್ ಮತ್ತು ನಿಕೋಲಸ್ ಪೂರನ್ ನಾಲ್ಕನೇ ವಿಕೆಟ್ 75 ರನ್​ಗಳ ಅಜೇಯ ಜೊತೆಯಾಟ ನಡೆಸಿ ತಂಡವನ್ನು ಇನ್ನು 7 ಎಸೆತಗಳಿರುವಂತೆ ಗೆಲುವಿನ ದಡ ಸೇರಿಸಿದರು. ಈ ಮೂಲಕ ಸತತ 4 ಜಯ ಸಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಬಡ್ತಿಪಡೆಯಿತು.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಆರಂಭದಿಂದಲೂ ರನ್​ಗಳಿಸಲು ಪರದಾಡಿತು. ಹಂಗಾಮಿ ನಾಯಕ ಶಿಖರ್​ ಧವನ್​ 11 ಎಸೆತಗಳಲ್ಲಿ 8 ರನ್​ , ಇಂದೇ ಮೊದಲ ಅವಕಾಶ ಪಡೆದಿದ್ದ ಪ್ರಭಸಿಮ್ರಾನ್​ ಸಿಂಗ್ 11 ಎಸೆತಗಳಲ್ಲಿ 14, ಬೈರ್​ಸ್ಟೋವ್​ 10 ಎಸೆತಗಳಲ್ಲಿ 12 ರನ್​ಗಳಿಸಿ 7 ಓವರ್​ಗಳೊಳಗೆ ಪೆವಿಲಿಯನ್ ಸೇರಿಕೊಂಡರು.

ನಂತರ ಬಂದ ಜಿತೇಶ್ ಶರ್ಮಾ ಕೂಡ ಕೇವಲ 11ಕ್ಕೆ ವಿಕೆಟ್ ಒಪ್ಪಿಸಿದರು. ತಂಡದ ಮೊತ್ತ 61ರನ್​ ಆಗುವಷ್ಟರಲ್ಲಿ ಪಂಜಾಬ್​ನ ಪ್ರಮುಖ 4 ವಿಕೆಟ್​ ಕಳೆದುಕೊಂಡಿತ್ತು. 100ರ ಗಡಿ ದಾಟಲು ಕಷ್ಟಸಾಧ್ಯವಾಗಿದ್ದ ಸಂದರ್ಭದಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಲಿವಿಂಗ್​ಸ್ಟೋನ್ ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್​ಗಳ ಸಹಿತ 60 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಆದರೆ ಇವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಇವರ ಜೊತೆಗಾರ ಶಾರುಖ್ ಖಾನ್​ 28 ಎಸೆತಗಳಲ್ಲಿ ಕೇವಲ 26 ರನ್​ಗಳಿಸಿದರೆ, ನಂತರ ಬಂದ ಒಡಿಯನ್ ಸ್ಮಿತ್​ ಕೇವಲ 13 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇವರಿಬ್ಬರು ಸಾಕಷ್ಟು ಎಸೆತಗಳನ್ನು ವ್ಯರ್ಥಮಾಡಿದ್ದರಿಂದ ಪಂಜಾಬ್ ಕಿಂಗ್ಸ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ವಿಫಲವಾಯಿತು. ಒಟ್ಟಾರೆ ಪಂಜಾಬ್ ಕಿಂಗ್ಸ್​ ಇನ್ನಿಂಗ್ಸ್​ನಲ್ಲಿ ಲಿವಿಂಗ್​ಸ್ಟೋನ್ 33 ಎಸೆತಗಳಲ್ಲಿ 60 ರನ್​ಗಳಿಸಿದರೆ, ಉಳಿದ ಬ್ಯಾಟರ್​ಗಳು 87 ಎಸೆತಗಳಲ್ಲಿ ಕೇವಲ 84 ರನ್​ಗಳಿಸಿದರು.

ಉಮ್ರಾನ್ ಮಲಿಕ್ ಎಸೆದ ಕೊನೆಯ ಓವರ್​​ನಲ್ಲಿ ಒಂದು ರನ್​ಗಳಿಸಲಾಗದೆ ಪಂಜಾಬ್​ 4 ಬ್ಯಾಟರ್​ಗಳು ವಿಕೆಟ್ ಒಪ್ಪಿಸಿದರು. ಉಮ್ರಾನ್ 28ಕ್ಕೆ4, ಭುವನೇಶ್ವರ್ ಕುಮಾರ್ 22ಕ್ಕೆ 3, ನಟರಾಜನ್ 38ಕ್ಕೆ1 ಮತ್ತು ಜಗದೀಶ್ ಸುಚಿತ್​ 29ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ:ಇಶಾನ್ ಕಿಶನ್ ಅಷ್ಟು ವೇತನಕ್ಕೆ ಯೋಗ್ಯರಲ್ಲ, ಜೋಫ್ರಾ ಮೇಲೆ ಹಣ ಹೂಡಿದ್ದು ವ್ಯರ್ಥ: ಶೇನ್​ ವಾಟ್ಸನ್ ಟೀಕೆ

Last Updated : Apr 17, 2022, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.