ETV Bharat / sports

ರಾಹುಲ್ ಶತಕದ ಬಲ:ಲಖನೌಗೆ 18 ರನ್​ಗಳ ಗೆಲುವು, ಮುಂಬೈ ಇಂಡಿಯನ್ಸ್​ಗೆ ಸತತ 6ನೇ ಸೋಲು - ಲಖನೌ ಸೂಪರ್ ಜೈಂಟ್ಸ್​ಗೆ 18 ರನ್​ಗಳ ಜಯ

ಐಪಿಎಲ್​ನಲ್ಲಿ 100ನೇ ಪಂದ್ಯವನ್ನಾಡಿದ ಕನ್ನಡಿಗ ಕೆಎಲ್​ ರಾಹುಲ್​ ಆಕರ್ಷಕ ಶತಕ ಸಿಡಿಸುವ ಮೂಲಕ ವಿಶೇಷ ಸಂದರ್ಭವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಇವರ ಶತಕದ ನೆರವಿನಿಂದ ಲಖನೌ ತಂಡ 199ರನ್​ಗಳಿಸಿದೆ.

Mumbai Indians vs Lucknow Super Giants
Mumbai Indians vs Lucknow Super Giants
author img

By

Published : Apr 16, 2022, 3:18 PM IST

Updated : Apr 16, 2022, 8:56 PM IST

ಮುಂಬೈ:ಕೆಎಲ್ ರಾಹುಲ್ ಶತಕ ಮತ್ತು ಬೌಲರ್​ಗಳ ಶಿಸ್ತಿನ ಬೌಲಿಂಗ್ ದಾಳಿಯ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್​ಗಳಿಂದ ಮಣಿಸಿದೆ. ಈ ಮೂಲಕ ರೋಹಿತ್ ಬಳಗ 15ನೇ ಆವೃತ್ತಿಯಲ್ಲಿ ಸತತ 6ನೇ ಸೋಲು ಕಂಡಿದೆ.

ಲಖನೌ ಸೂಪರ್​ ಸೂಪರ್ ಜೈಂಟ್ಸ್ ನೀಡಿದ್ದ 200ರನ್​ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 181 ರನ್​ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನ ಮೂಲಕ ಇಂಡಿಯನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊದಲ 6 ಪಂದ್ಯಗಳನ್ನು ಸೋತ 2ನೇ ತಂಡ ಎಂಬ ಕುಖ್ಯಾತಿಗೆ ಪಾತ್ರವಾಯಿತು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಈ ಪಂದ್ಯದಲ್ಲೂ ಸರಿಯಾದ ಆರಂಭ ಸಿಗಲಿಲ್ಲ. ನಾಯಕ ರೋಹಿತ್ 6ಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ 18 ವರ್ಷದ ಡೆವಾಲ್ಡ್ ಬ್ರೇವಿಸ್ ಇಂದೂ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರಾದರೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಅವರು 13 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 31 ರನ್​ಗಳಿಸಿ ಆವೇಶ್​ ಖಾನ್​ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ಐಪಿಎಲ್ ಹರಾಜಿನ ದುಬಾರಿ ಬ್ಯಾಟರ್ ಇಶಾನ್ ಕಿಶನ್ 17 ಎಸೆತಗಳಲ್ಲಿ 13 ರನ್​ಗಳಿಸಿ ಸ್ಟೋಯಿನಿಸ್ ಬೌಲಿಂಗ್​ನಲ್ಲಿ ಬೌಲ್ಡ್​ ಔಟಾದರು.

57ಕ್ಕೆ3 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಮುಂಬೈಗೆ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್​ 4ನೇ ವಿಕೆಟ್​ಗೆ 64 ರನ್​ ಸೇರಿಸಿ ಮತ್ತೆ ಗೆಲುವಿನ ಆಸೆ ಚಿಗುರಿಸಿದರು. ಆದರೆ 26(26) ರನ್​ಗಳಿಸಿದ್ದ ತಿಲಕ್ ವರ್ಮಾ ಮತ್ತು 37(23) ರನ್​ಗಳಿಸಿದ್ದ ಸೂರ್ಯಕುಮಾರ್ ಯಾದವ್​ ಕೇವಲ 6 ರನ್​ಗಳ ಅಂತರದಲ್ಲಿ ವಿಕೆಟ್​ ಒಪ್ಪಸಿದ್ದರಿಂದ ಪಂದ್ಯ ಲಖನೌ ಕಡೆಗೆ ಜಾರಿತು.

ಇದನ್ನೂ ಓದಿ:ಕೆಕೆಆರ್​ಗೆ ಮಾಜಿ ಆಟಗಾರರೇ ವಿಲನ್ಸ್​.. ಸೋಲುಂಡ ಮೂರು ಪಂದ್ಯಗಳಲ್ಲೂ ಎಕ್ಸ್‌ಪ್ಲೇಯರ್​ಗಳೇ ಕಂಟಕ!

ಆದರೂ ಅನುಭವಿ ಪೊಲಾರ್ಡ್​ 14 ಎಸೆತಗಳಲ್ಲಿ 25 ಮತ್ತು ಉನಾದ್ಕಟ್ 6 ಎಸೆತಗಳಲ್ಲಿ 14 ರನ್​ ಸಿಡಿಸಿ ಕೊನೆಯ ಓವರ್​ವರೆಗೂ ಮುಂಬೈಗೆ ಗೆಲುವಿನ ಆಸೆಯನ್ನಿಟ್ಟುಕೊಳ್ಳುವಂತೆ ಮಾಡಿದರಾದರೂ ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು. ಅಲೆನ್ 8, ಮುರುಗನ್ ಅರ್ಶವಿನ್ 6 ರನ್​ಗಳಿಸಿದರು.

ಲಖನೌ ಪರ ಆವೇಶ್ ಖಾನ್ 30ಕ್ಕೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಸಾಥ್ ನೀಡಿದ ಸ್ಟೋಯಿನಿಸ್, ಚಮೀರಾ, ರವಿ ಬಿಷ್ಣೋಯ್ ಮತ್ತು ಹೋಲ್ಡರ್​ ತಲಾ ಒಂದು ವಿಕೆಟ್ ಪಡೆದರು.

ಲಖನೌ ಸೂಪರ್ ಜೈಂಟ್ಸ್ ಇನ್ನಿಂಗ್ಸ್​:

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ನಾಯಕ ಕೆಎಲ್ ರಾಹುಲ್​ ಅವರ ಅಜೇಯ ಶತಕದ ನೆರವಿನಿಂದ 199ರನ್​ಗಳ ಬೃಹತ್​ ಮೊತ್ತ ದಾಖಲಿಸಿತ್ತು.

ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ಆಹ್ವಾನದ ಮೇರೆಗೆ ಬ್ಯಾಟಿಂಗ್ ಇಳಿದಿದ್ದ ಎಲ್​ಎಸ್​ಜಿ ತಂಡ ಆರಂಭದಿಂದ ಅಂತ್ಯದವರೆಗೂ ಮುಂಬೈ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿಕಾಕ್​ ಮೊದಲ ವಿಕೆಟ್​​ಗೆ 52 ರನ್​ಗಳ ಜೊತೆಯಾಟ ನೀಡಿದರು.

ಸ್ಪೋಟಕ ಇನ್ನಿಂಗ್ಸ್ ಆಡಿದ ಡಿಕಾಕ್​ 13 ಎಸೆತಗಳಲ್ಲಿ 24 ರನ್​ಗಳಿಸಿದ್ದ ವೇಳೆ ಮುಂಬೈ ಪರ ಇಂದೇ ಪದಾರ್ಪಣೆ ಮಾಡಿದ ಫ್ಯಾಬಿಯನ್ ಅಲೆನ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ ನಾಯಕ ರಾಹುಲ್ ಮತ್ತೊಬ್ಬ ಕನ್ನಡಿಗ ಮನೀಶ್ ಪಾಂಡೆ ಜೊತೆಗೂಡಿ 2ನೇ ವಿಕೆಟ್​ಗೆ 66 ರನ್​ ಸೇರಿಸಿದರು.

2 ಪಂದ್ಯಗಳ ನಂತರ ತಂಡಕ್ಕೆ ಮರಳಿದ ಪಾಂಡೆ 29 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 38 ರನ್​ ಸಿಡಿಸಿ ಮುರುಗನ್ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದರು. ಕೊನೆಯವರೆಗೂ ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ರಾಹುಲ್​ 60 ಎಸೆತಗಳಲ್ಲಿ ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ ಅಜೇಯ 103 ರನ್​ಗಳಿಸಿದರು. ದೀಪಕ್ ಹೂಡ 15 ಮತ್ತು ಸ್ಟೋಯಿನಿಸ್ 10 ರನ್​ಗಳಿಸಿದರು.

ಮುಂಬೈ ಇಂಡಿಯನ್ಸ್ ಪರ ಜಯದೇವ್ ಉನಾದ್ಕಟ್ 32ಕ್ಕೆ 2 ವಿಕೆಟ್ ಪಡೆದರೆ, ಫ್ಯಾಬಿಯಲ್ ಅಲೆನ್​ 46ಕ್ಕೆ1 ಮತ್ತು ಮುರುಗನ್ ಅಶ್ವಿನ್ 33ಕ್ಕೆ 1 ವಿಕೆಟ್ ಪಡೆದರು.

ಇದನ್ನೂ ಓದಿ:100ನೇ ಐಪಿಎಲ್​ ಪಂದ್ಯದಲ್ಲಿ ರಾಹುಲ್ 3ನೇ ಶತಕ.. ಹಲವು ವಿಶೇಷತೆಗೆ ಒಳಗಾಯ್ತು ಕನ್ನಡಿಗನ ಸೆಂಚುರಿ..

Last Updated : Apr 16, 2022, 8:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.